Honda: ಸ್ಪ್ಲೆಂಡರ್ ವಿರುದ್ಧ ಶೀಘ್ರದಲ್ಲೇ ಅಗ್ಗದ ಹೊಸ ಹೋಂಡಾ ಬೈಕ್ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ಹೋಂಡಾ ಶೈನ್ 125 (Honda Shine 125) ಪ್ರಖ್ಯಾತ ಮೋಟಾರ್‌ಸೈಕಲ್ ಎಂದೇ ಮನೆ ಮಾತಾಗಿದೆ. ಈ ಬೈಕ್‌ಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಯುವ ಖರೀದಿದಾರರನ್ನು ಸೆಳೆಯಲು ಕಂಪನಿಯು ಮುಂದಾಗಿದೆ. ಇದೇ 'ಶೈನ್ 125'ನ್ನು ಹೊಸ ರೂಪದಲ್ಲೂ ಮಾರಾಟಕ್ಕೆ ತರಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಎಲ್ಲವು ಅಂದುಕೊಂಡಂತೆ ನಡೆದರೆ, ಅತಿ ಶೀಘ್ರದಲ್ಲೇ ನೂತನ ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್ (Honda Shine 125 Limited Edition) ಬಿಡುಗಡೆಯೂ ಆಗಲಿದೆ. ಈ ಮೋಟಾರ್‌ಸೈಕಲ್‌ನ ಬೆಲೆ ಹೊರತುಪಡಿಸಿ, ಉಳಿದೆಲ್ಲ ವಿವರಗಳನ್ನು ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಹೊಸ ಬೈಕ್ ರೂ.85,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈಗಿರುವ 'ಶೈನ್ 125' ರೂ.80,542 ರಿಂದ ರೂ.84,902 ದರವನ್ನು ಒಳಗೊಂಡಿದೆ.

'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್' ವಿನ್ಯಾಸದಲ್ಲಿ ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದಿದೆ. ಮುಂಭಾಗದ (ಫ್ರಂಟ್) ವೈಸರ್, ಸೈಡ್ ಕವರ್‌ಗಳು ಹಾಗೂ ಎಕ್ಸಾಸ್ಟ್ ಮಫ್ಲರ್ ಕವರ್‌ನ್ನು ಹೊಂದಿದೆ. ಪರ್ಲ್ ಸೈರನ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಫ್ಯುಯೆಲ್ ಟ್ಯಾಂಕ್‌ನ ಮೇಲ್ಭಾಗ ನವೀನವಾದ 'ಶೈನ್' ಗ್ರಾಫಿಕ್ಸ್ ಹೊಂದಿದೆ.
ಇದರೊಂದಿಗೆ ಸ್ಟ್ಯಾಂಡರ್ಡ್ 'ಹೋಂಡಾ ಶೈನ್ 125'ನಂತೆಯೇ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಇಂಡಿಕೇಟರ್‌ಗಳು ಮತ್ತು ಟೈಲ್ ಲ್ಯಾಂಪ್‌ನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು 18-ಇಂಚಿನ ಪೈರೈಟ್ ಬ್ರೌನ್ ಬಣ್ಣದ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ತನ್ನದಾಗಿಸಿಕೊಂಡಿದೆ.

ಈ ಬೈಕ್ ಹೆಚ್ಚು ವಿಶಾಲ ಗಾತ್ರದಲ್ಲಿದೆ. 2,046 ಎಂಎಂ ಉದ್ದ, 741 ಎಂಎಂ ಅಗಲ ಹಾಗೂ 1,116 ಎಂಎಂ ಎತ್ತರವಿದೆ. 162 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,285 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 113 ಕೆಜಿ ತೂಕವಿದೆ.
ನೂತನ 'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್' ಪವರ್‌ಟ್ರೇನ್ ಆಯ್ಕೆಯಲ್ಲಿಯೂ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ. 123.94 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 10.63 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 11 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 50 ರಿಂದ 60 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ.

ಇದು ಎಲ್‌ಸಿಡಿ ಕನ್ಸೋಲ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಸೈಲೆಂಟ್ ಸ್ಟಾರ್ಟ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದಿದೆ. ಸೀಟ್ ಉದ್ದ 651 ಎಂಎಂ ಹಾಗೂ ಸೀಟ್ ಎತ್ತರ 791 ಎಂಎಂ ಇದೆ. 10.5 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ.
ಈ ಮೋಟಾರ್‌ಸೈಕಲ್ ಸವಾರರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಹಾಗೂ ಹಿಂಭಾಗ (ರೇರ್) ಡುಯಲ್ ರೇರ್ ಸ್ಪ್ರಿಂಗ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸಿಬಿಸ್ (ಕಾಂಬಿ - ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಹೊಸ 'ಹೋಂಡಾ ಶೈನ್ 125 ಲಿಮಿಟೆಡ್ ಎಡಿಷನ್'ಗೆ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ನೇರವಾದ ಎದುರಾಳಿಯಾಗಿದೆ. ಅದಕ್ಕೆ ತಕ್ಕಂತೆ ರೂ.82,248 ರಿಂದ ರೂ.85,844 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 124.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದ್ದು, 69 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications








