Hyundai: ಪೈಪೋಟಿ ಹೆಚ್ಚಾಯ್ತು: ತೀರಾ ಕಮ್ಮಿ ಬೆಲೆಗೆ ಹ್ಯುಂಡೈ i20 ಘೋಷಣೆ: ಬೆಲೆ ಇಷ್ಟೇನಾ?
ಜನಪ್ರಿಯ ಹ್ಯುಂಡೈ ಹ್ಯಾಚ್‌ಬ್ಯಾಕ್ ಆಗಿರುವ i20 (Hyundai i20) ಕಾರಿನ ಆಯ್ದ ವೇರಿಯೆಂಟ್‌ಗಳನ್ನು ಈಗ ಸುಲಭವಾಗಿ ಖರೀದಿಸಬಹುದಾಗಿದ್ದು, ಹೊಸ ಬೆಲೆಗಳನ್ನು ಕೈಗೆಟುಕುವಂತೆ ಮಾಡಲಾಗಿದೆ. ಈಗ ಕೇವಲ ರೂ. 5,99,000 (ಎಕ್ಸ್ ಶೋರೂಂ) ಕ್ಕೆ ಹೊಸ ಆರಂಭಿಕ ಬೆಲೆಯೊಂದಿಗೆ i20 ಕಾರನ್ನು ಖರೀದಿಸಬಹುದಾಗಿದೆ. ಇದು ಹುಂಡೈನ ಗುಣಮಟ್ಟ, ನಾವೀನ್ಯತೆ ಮತ್ತು ಗ್ರಾಹಕರ ಸಂತೋಷದ ಭರವಸೆಯನ್ನು ಎತ್ತಿಹಿಡಿಯುತ್ತದೆ ಎಂದು ಹ್ಯುಂಡೈ ಮಾರಾಟ ಮುಖ್ಯಸ್ಥ ಸುನಿಲ್ ಮೂಲಚಂದಾನಿ ಹೇಳಿದ್ದಾರೆ. ಹೊಸ ಹ್ಯುಂಡೈ i20 ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.
ಭಾರತದಲ್ಲಿ ಹ್ಯಾಚ್‌ಬ್ಯಾಕ್ ವಿಭಾಗವು ತೀವ್ರ ಪೈಪೋಟಿಯೊಂದಿಗೆ ಕೂಡಿದ್ದು, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಆಯ್ಕೆಗಳು ಸಿಗುವುದರಿಂದ ಹ್ಯುಂಡೈ ಕೂಡ ಈಗ ಕಮ್ಮಿ ಬೆಲೆಯ ಹೊಸ ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ತೀರಾ ಕಮ್ಮಿ ಬೆಲೆಗೆ ಸಿಗುವುದು ಹ್ಯುಂಡೈ i20 ಎರಾ (Hyundai i20 Era) ವೇರಿಯೆಂಟ್ ಆಗಿದ್ದು, ಇದು ಕೇವಲ ರೂ. 5.99 (ಎಕ್ಸ್ ಶೋರೂಂ) ಲಕ್ಷಕ್ಕೆ ಖರೀದಿಗೆ ಸಿಗುತ್ತದೆ.

ಹೊಸ ಹುಂಡೈ i20 ಎರಾ ವೇರಿಯೆಂಟ್‌ನಲ್ಲಿ ಆರು ಏರ್‌ಬ್ಯಾಗ್‌ಗಳು, ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಾಡಿ ಕಲರ್ ORVM ಗಳು, ಡೋರ್ ಹ್ಯಾಂಡಲ್‌ಗಳು, ಟೈಪ್-C USB ಚಾರ್ಜರ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್‌ನೊಂದಿಗೆ ಬರುತ್ತದೆ. ಇದರ ಜೊತೆಗೆ ಇನ್ನೂ ಎರಡು ವೇರಿಯೆಂಟ್‌ಗಳಿದ್ದು, ತುಸು ಬೆಲೆ ಹೆಚ್ಚಿರುತ್ತವೆ.
ಹುಂಡೈ i20 ಮ್ಯಾಗ್ನಾ ಎಕ್ಸಿಕ್ಯೂಟಿವ್ (Magna Executive) ವೇರಿಯೆಂಟ್ ರೂ. 6.74 (ಎಕ್ಸ್ ಶೋರೂಂ) ಲಕ್ಷ ಮತ್ತು ಮ್ಯಾಗ್ನಾ (Magna) ವೇರಿಯೆಂಟ್ ರೂ. 6.99 (ಎಕ್ಸ್ ಶೋರೂಂ) ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹುಂಡೈ i20 ಪ್ರಮಾಣಿತ 3 ವರ್ಷ/1,00,000 ಕಿ.ಮೀ ವಾರೆಂಟಿಯೊಂದಿಗೆ ಬರುತ್ತದೆ ಎಂದು ಹ್ಯುಂಡೈ ತಿಳಿಸಿದೆ.

ಮ್ಯಾಗ್ನಾ ಎಕ್ಸಿಕ್ಯೂಟಿವ್ ವೇರಿಯೆಂಟ್: ಶಾರ್ಕ್ ಫಿನ್ ಆಂಟೆನಾ, ಹೈಲೈನ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಟೋ ಹೆಡ್‌ಲ್ಯಾಂಪ್‌ಗಳು, ಸಂಪೂರ್ಣ ಡಿಜಿಟಲ್ ಕ್ಲಸ್ಟರ್, ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಆಡಿಯೋ ಮತ್ತು ಬ್ಲೂಟೂತ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್, ಟೆಲಿಸ್ಕೋಪಿಕ್ ಸ್ಟೀರಿಂಗ್, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ORVM ಸೇರಿದಂತೆ ಸುಧಾರಿತ ತಂತ್ರಜ್ಞಾನ ಮತ್ತು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಹುಂಡೈ i20 ಮ್ಯಾಗ್ನಾ ವೇರಿಯೆಂಟ್: ಹುಂಡೈ i20 ಮ್ಯಾಗ್ನಾ ವೇರಿಯೆಂಟ್ ಇದು ಉನ್ನತ ಚಾಲನಾ ಅನುಭವವನ್ನು ಬಯಸುವ ಗ್ರಾಹಕರಿಗೆ ಸಾಟಿಯಿಲ್ಲದ ಸೌಕರ್ಯ ಮತ್ತು ಅತ್ಯಾಧುನಿಕತೆಯನ್ನು ನೀಡುತ್ತದೆ. ಇದರಲ್ಲಿ ಎಲೆಕ್ಟ್ರಿಕ್ ಸನ್‌ರೂಫ್, LED DRLಗಳು, ಹಿಂಭಾಗದ AC ವೆಂಟ್‌ಗಳು ಮತ್ತು ಸ್ಟೋರೇಜ್‌ನೊಂದಿಗೆ ಮುಂಭಾಗದ ಆರ್ಮ್‌ರೆಸ್ಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಅಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಹ್ಯುಂಡೈ ತಿಳಿಸಿದೆ.

ಗ್ರಾಹಕರ ಅನುಕೂಲವನ್ನು ಮತ್ತಷ್ಟು ಹೆಚ್ಚಿಸಲು, ಹ್ಯುಂಡೈ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಡೀಲರ್ ಇನ್ಸ್ಟಾಲ್ಡ್ ಆಪ್ಷನ್ (DIO) ಆಗಿ ಹಿಂಬದಿಯ ಕ್ಯಾಮೆರಾದೊಂದಿಗೆ ರೂ. 14,999 ಆಕರ್ಷಕ ಬೆಲೆಯಲ್ಲಿ ನೀಡುತ್ತಿದೆ, ಇದು 3 ವರ್ಷಗಳ ವಾರೆಂಟಿಯೊಂದಿಗೆ ಬರುತ್ತದೆ.
ಹುಂಡೈ ಕಾರು ಖರೀದಿದಾರರು ಭಾರತದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ i20 ಕಾರಿನ ಉತ್ತಮ ಪರ್ಫಾಮೆನ್ಸ್, ಸುಧಾರಿತ ತಂತ್ರಜ್ಞಾನ ಮತ್ತು ಪ್ರೀಮಿಯಂ ಸ್ಟೈಲಿಂಗ್ ಅನ್ನು ಅನುಭವಿಸಿದ್ದಾರೆ. ಈ ಕಾರಿನ ಮೇಲೆ ಅವರಿಗಿರುವ ನಂಬಿಕೆ, ವಿಶ್ವಾಸಾರ್ಹತೆಯಿಂದಾಗಿ i20 ಉತ್ತಮ ಬೇಡಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಈಗ ಇನ್ನೂ ಸುಲಭವಾಗಿ ಖರೀದಿಸುವಂತೆ ಮಾಡಿದ್ದೇವೆ ಎಂದು ಹ್ಯುಂಡೈ ಹೇಳಿದೆ.


Click it and Unblock the Notifications








