Hyundai: ಸದ್ದಿಲ್ಲದೆ ದರ ಇಳಿಕೆ: ತೀರಾ ಅಗ್ಗವಾಗಿ i20 ಹೊಸ ವೇರಿಯೆಂಟ್ ಬಿಡುಗಡೆ: ಬೆಲೆ ಬರೀ ಇಷ್ಟೆನಾ?
ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಹುಂಡೈ, ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ ಹುಂಡೈ i20 (Hyundai i20) ಕಾರಿನ ಆಯ್ದ ವೇರಿಯೆಂಟ್‌ಗಳನ್ನು ಸುಲಭವಾಗಿ ಖರೀದಿಸಬಹುದಾದ ಹೊಸ ಬೆಲೆಗಳನ್ನು ಪ್ರಕಟಿಸಿದೆ. ಹುಂಡೈ ಕಾರು ಖರೀದಿದಾರರು ಭಾರತದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ i20 ಕಾರಿನ ಉತ್ತಮ ಪರ್ಫಾಮೆನ್ಸ್, ಸುಧಾರಿತ ತಂತ್ರಜ್ಞಾನ ಮತ್ತು ಪ್ರೀಮಿಯಂ ಸ್ಟೈಲಿಂಗ್ ಅನ್ನು ಅನುಭವಿಸಿದ್ದಾರೆ. ಈ ಕಾರಿನ ಮೇಲೆ ಅವರಿಗಿರುವ ನಂಬಿಕೆ, ವಿಶ್ವಾಸಾರ್ಹತೆಯಿಂದಾಗಿ i20 ಉತ್ತಮ ಬೇಡಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಈಗ ಇನ್ನೂ ಸುಲಭವಾಗಿ ಖರೀದಿಸುವಂತೆ ಮಾಡಿದ್ದೇವೆ ಎಂದು ಹ್ಯುಂಡೈ ಹೇಳಿದೆ.
"ಹುಂಡೈ i20 ತನ್ನ ಆಕರ್ಷಕ ವಿನ್ಯಾಸ, ಉತ್ತಮ ಪರ್ಫಾಮೆನ್ಸ್ ಮತ್ತು ಸುಧಾರಿತ ತಂತ್ರಜ್ಞಾನದೊಂದಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಬೆಸ್ಟ್ ಆಯ್ಕೆಯಾಗಿದೆ. ಈಗ ಕೇವಲ ರೂ. 5,99,000 ಹೊಸ ಆರಂಭಿಕ ಬೆಲೆಯೊಂದಿಗೆ, ನಾವು ಈಗ i20 ಕಾರನ್ನು ನೀಡುತ್ತಿದ್ದೇವೆ. ಇದು ಹುಂಡೈನ ಗುಣಮಟ್ಟ, ನಾವೀನ್ಯತೆ ಮತ್ತು ಗ್ರಾಹಕರ ಸಂತೋಷದ ಭರವಸೆಯನ್ನು ಎತ್ತಿಹಿಡಿಯುತ್ತದೆ" ಎಂದು ಹ್ಯುಂಡೈ ಮಾರಾಟ ಮುಖ್ಯಸ್ಥ ಸುನಿಲ್ ಮೂಲಚಂದಾನಿ ಹೇಳಿದ್ದಾರೆ.

ಈಗ ರೂ. 5.99 ಲಕ್ಷಕ್ಕೆ ಲಭ್ಯವಿರುವ ಹುಂಡೈ i20 ಎರಾ (Hyundai i20 Era) ವೇರಿಯೆಂಟ್ ದೈನಂದಿನ ಚಾಲನಾ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಪ್ರಭಾವಶಾಲಿ ಫೀಚರ್ಸ್ ಹೊಂದಿದೆ. ಈ ವೇರಿಯೆಂಟ್ ಆರು ಏರ್‌ಬ್ಯಾಗ್‌ಗಳು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಬಾಡಿ ಕಲರ್ ORVM ಗಳು ಮತ್ತು ಡೋರ್ ಹ್ಯಾಂಡಲ್‌ಗಳು, ಟೈಪ್-C USB ಚಾರ್ಜರ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್‌ನೊಂದಿಗೆ ಬರುತ್ತದೆ.
ಜೊತೆಗೆ ಇತರ ವೇರಿಯೆಂಟ್‌ಗಳನ್ನು ಸಹ ಮತ್ತಷ್ಟು ಬಲಪಡಿಸುವ ಮೂಲಕ, ಹುಂಡೈ i20 ಮ್ಯಾಗ್ನಾ ಎಕ್ಸಿಕ್ಯೂಟಿವ್ (Magna Executive) ಮತ್ತು ಮ್ಯಾಗ್ನಾ (Magna) ವೇರಿಯೆಂಟ್‌ಗಳು ಈಗ ಕ್ರಮವಾಗಿ ರೂ. 6.74 ಲಕ್ಷ ಮತ್ತು ರೂ. 6.99 ಲಕ್ಷದಲ್ಲಿ ಖರೀದಿಗೆ ಲಭ್ಯವಿದೆ. ಈ ವೇರಿಯೆಂಟ್‌ಗಳು ಗ್ರಾಹಕರಿಗೆ ತಂತ್ರಜ್ಞಾನ, ಸುರಕ್ಷತೆ ಮತ್ತು ಸೌಕರ್ಯದ ಆಕರ್ಷಕ ಮಿಶ್ರಣವನ್ನು ನೀಡುತ್ತವೆ.

ಮ್ಯಾಗ್ನಾ ಎಕ್ಸಿಕ್ಯೂಟಿವ್ ವೇರಿಯೆಂಟ್ ಸಂಪೂರ್ಣ ಡಿಜಿಟಲ್ ಕ್ಲಸ್ಟರ್, ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಶಾರ್ಕ್ ಫಿನ್ ಆಂಟೆನಾ, ಹೈಲೈನ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಟೋ ಹೆಡ್‌ಲ್ಯಾಂಪ್‌ಗಳು, ಟೆಲಿಸ್ಕೋಪಿಕ್ ಸ್ಟೀರಿಂಗ್, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕಲ್ಲಿ ಅಡ್ಜಸ್ಟಬಲ್ ORVM, ಆಡಿಯೋ ಮತ್ತು ಬ್ಲೂಟೂತ್ ಕಂಟ್ರೋಲ್‌ಗಳೊಂದಿಗೆ ಸ್ಟೀರಿಂಗ್ ವೀಲ್ ಸೇರಿದಂತೆ ಸುಧಾರಿತ ತಂತ್ರಜ್ಞಾನ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ಆಕರ್ಷಕ ಮಿಶ್ರಣದೊಂದಿಗೆ ಎದ್ದು ಕಾಣುತ್ತದೆ.
ಹಾಗೆಯೇ ಹುಂಡೈ i20 ಮ್ಯಾಗ್ನಾ ವೇರಿಯೆಂಟ್ ಎಲೆಕ್ಟ್ರಿಕ್ ಸನ್‌ರೂಫ್, LED DRLಗಳು, ಹಿಂಭಾಗದ AC ವೆಂಟ್‌ಗಳು ಮತ್ತು ಸ್ಟೋರೇಜ್‌ನೊಂದಿಗೆ ಮುಂಭಾಗದ ಆರ್ಮ್‌ರೆಸ್ಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಪ್ರೀಮಿಯಂ ಅಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಉನ್ನತ ಚಾಲನಾ ಅನುಭವವನ್ನು ಬಯಸುವ ಗ್ರಾಹಕರಿಗೆ ಸಾಟಿಯಿಲ್ಲದ ಸೌಕರ್ಯ ಮತ್ತು ಅತ್ಯಾಧುನಿಕತೆಯನ್ನು ನೀಡುತ್ತದೆ ಎಂದು ಹ್ಯುಂಡೈ ತಿಳಿಸಿದೆ.

ಗ್ರಾಹಕರ ಅನುಕೂಲವನ್ನು ಮತ್ತಷ್ಟು ಹೆಚ್ಚಿಸಲು, ಹ್ಯುಂಡೈ ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಡೀಲರ್ ಇನ್ಸ್ಟಾಲ್ಡ್ ಆಪ್ಷನ್ (DIO) ಆಗಿ ಹಿಂಬದಿಯ ಕ್ಯಾಮೆರಾದೊಂದಿಗೆ ರೂ. 14,999 ಆಕರ್ಷಕ ಬೆಲೆಯಲ್ಲಿ ನೀಡುತ್ತಿದೆ, ಇದು 3 ವರ್ಷಗಳ ವಾರೆಂಟಿಯೊಂದಿಗೆ ಬರುತ್ತದೆ.
ಹುಂಡೈ i20 ಪ್ರಮಾಣಿತ 3 ವರ್ಷ/1,00,000 ಕಿ.ಮೀ ವಾರೆಂಟಿಯೊಂದಿಗೆ ಬರುತ್ತದೆ. ಕಳೆದ 15 ವರ್ಷಗಳಲ್ಲಿ, ಹುಂಡೈ i20 ಭಾರತದಲ್ಲಿ 1.47 ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳ ಮಾರಾಟದೊಂದಿಗೆ ಬಲವಾದ ಪರಂಪರೆಯನ್ನು ನಿರ್ಮಿಸಿದೆ. ಅದರ ಸ್ಪೋರ್ಟಿ ಲುಕ್, ಅತ್ಯಾಧುನಿಕ ಇಂಟೀರಿಯರ್ ಮತ್ತು ಸುರಕ್ಷತೆಯ ಮೇಲೆ ಬಲವಾದ ಗಮನದೊಂದಿಗೆ, i20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಬಯಸುವ ಗ್ರಾಹಕರಿಗೆ ಆದ್ಯತೆಯ ಆಯ್ಕೆಯಾಗಿ ಮುಂದುವರೆದಿದೆ.


Click it and Unblock the Notifications








