Renault Duster: ಕೆಲವೇ ದಿನಗಳಲ್ಲಿ ಬಿಡುಗಡೆ: ಎದುರಾಳಿಗಳ ಎದೆಯಲ್ಲಿ ಭಯ ಶುರು: ಬೆಲೆಯೆಷ್ಟು?

ಭಾರತದಲ್ಲಿ ಒಂದು ಕಾಲದಲ್ಲಿ ಧೂಳೆಬ್ಬಿಸಿದ್ದ ಎಸ್‌ಯುವಿಗಳು ಮತ್ತೆ ಹೊಸ ಲುಕ್‌ನಲ್ಲಿ ಬಿಡುಗಡೆಯಾಗುವ ಟ್ರೆಂಡ್ ಆರಂಭವಾಗಿದೆ. ಇತ್ತೀಚೆಗೆ ಟಾಟಾ ಮೋಟಾರ್ಸ್ ತನ್ನ ಸಿಯೆರಾವನ್ನು ಬಿಡುಗಡೆ ಮಾಡುವ ಮೂಲಕ ಈ ಟ್ರೆಂಡ್ ಆರಂಭಿಸಿದ್ದು, ಈಗ ರೆನಾಲ್ಟ್ ತನ್ನ ಡಸ್ಟರ್ (Renault Duster) ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸುಮಾರು ನಾಲ್ಕು ವರ್ಷಗಳ ವಿರಾಮದ ನಂತರ, ರೆನಾಲ್ಟ್ ಡಸ್ಟರ್ ಅನ್ನು ಭಾರತೀಯ ಮಾರುಕಟ್ಟೆಗೆ ಮತ್ತೆ ತರಲಾಗುತ್ತಿದೆ. ಹೊಸ ಡಿಸೈನ್, ಸಂಪೂರ್ಣ ನವೀಕರಿಸಿದ ಕ್ಯಾಬಿನ್ ಮತ್ತು ಹೊಸ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡುಲಾಗುತ್ತಿದೆ. ಈ ಮುಂಬರುವ ರೆನಾಲ್ಟ್ ಡಸ್ಟರ್ ಬಗ್ಗೆ ತಿಳಿದುಕೊಳ್ಳಬೇಕಾದ ಐದು ಪ್ರಮುಖ ವಿಷಯಗಳು ಇಲ್ಲಿವೆ.

ನಿರೀಕ್ಷಿತ ಬೆಲೆ: ಹೊಸ ಡಸ್ಟರ್ ರೂ. 11 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ತೀವ್ರ ಸ್ಪರ್ಧಾತ್ಮಕ ಮತ್ತು ಹೆಚ್ಚು ಬೇಡಿಕೆಯಿರುವ ಮಿಡ್‌ಸೈಜ್ SUV ವಿಭಾಗದಲ್ಲಿ, ಡಸ್ಟರ್ ಹೊಸ ಅಲೆ ಎಬ್ಬಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಈಗಾಗಲೇ ರೆನಾಲ್ಟ್ ಹೊಸ ಡಸ್ಟರ್‌ಗಾಗಿ 21,000 ರೂ.ಗಳಲ್ಲಿ ಪ್ರೀ-ಬುಕಿಂಗ್‌ಗಳನ್ನು ತೆರೆದಿದೆ. ಈ ಎಸ್‌ಯುವಿಯನ್ನು ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

new-renault-duster-all-set-to-launch-price-features-engine-details

ಈ ಪ್ರತಿಸ್ಪರ್ಧಿಗಳಿಗೆ ಪೈಪೋಟಿ: ಹೊಸ ರೆನಾಲ್ಟ್ ಡಸ್ಟರ್ ಒಮ್ಮೆ ಬಿಡುಗಡೆಯಾದ ನಂತರ, ಹುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟಾಟಾ ಸಿಯೆರಾ ಮತ್ತು ಈ ವಿಭಾಗದಲ್ಲಿನ ಇತರ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲಿದೆ. ಹೆಚ್ಚುವರಿಯಾಗಿ ನಿಸ್ಸಾನ್ ಕೂಡ ಶೀಘ್ರದಲ್ಲೇ ನಿಸ್ಸಾನ್ ಟೆಕ್ಟಾನ್ ಎಂಬ ಎಸ್‌ಯುವಿಯನ್ನು ಪರಿಚಯಿಸಲು ಸಿದ್ಧವಾಗುತ್ತಿದ್ದು, ಮಿಡ್‌ಸೈಜ್ SUV ವಿಭಾಗವು 2026 ರಲ್ಲಿ ಭಾರೀ ಪೈಪೋಟಿಯೊಂದಿಗೆ ಕೂಡಿರುತ್ತದೆ ಎಂದು ಹೇಳಬಹದು.

ಎಂಜಿನ್ ಆಯ್ಕೆಗಳು: ಮುಂದಿನ ತಲೆಮಾರಿನ ಡಸ್ಟರ್ ಅನ್ನು ಮೂರು ಪೆಟ್ರೋಲ್ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ನೀಡಲಾಗುವುದು. ಇದರಲ್ಲಿ ಮೊದಲೇನೆಯದು ಆರಂಭಿಕ ಹಂತದ 1.0-ಲೀಟರ್, 3-ಸಿಲಿಂಡರ್, ಟರ್ಬೊ - ಪೆಟ್ರೋಲ್ ಎಂಜಿನ್ ಆಗಿದ್ದು, 100bhp ಪವರ್ ಮತ್ತು 160Nm ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ.

new-renault-duster-all-set-to-launch-price-features-engine-details

ಎರಡನೇಯದು 1.3-ಲೀಟರ್, 4-ಸಿಲಿಂಡರ್, ಟರ್ಬೊ - ಪೆಟ್ರೋಲ್, ಡೈರೆಕ್ಟ್ - ಇಂಜೆಕ್ಷನ್ ಎಂಜಿನ್ ಆಗಿದೆ. ಈ ಎಂಜಿನ್ 160bhp ಪವರ್ ಮತ್ತು 280Nm ಟಾರ್ಕ್ ಉತ್ಪಾದಿಸುತ್ತದೆ. ಇದು 6 - ಸ್ಪೀಡ್ ಮ್ಯಾನುವಲ್ ಮತ್ತು DCT ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿರುತ್ತದೆ. ಇದು ಮಿಡ್‌ ವೇರಿಯೆಂಟ್ ಆಗಿದ್ದು, ಉತ್ತಮ ಮೌಲ್ಯ ಪಡೆಯುವಂತದ್ದಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.

ಮೂರನೇಯದು ಹೈಬ್ರಿಡ್ ಎಂಜಿನ್ ಆಗಿದ್ದು, ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಜೋಡಿಸಲಾದ 1.8-ಲೀಟರ್, 4-ಸಿಲಿಂಡರ್, ಡೈರೆಕ್ಟ್ - ಇಂಜೆಕ್ಷನ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಹೈಬ್ರಿಡ್ ಎಂಜಿನ್ ಆಗಿದ್ದರೂ, 160bhp ಪವರ್ ಮತ್ತು 172Nm ಟಾರ್ಕ್ ಉತ್ಪಾದಿಸುತ್ತದೆ. ಹೈಬ್ರಿಡ್ ಆವೃತ್ತಿಗಾಗಿ ಕಾಯುತ್ತಿರುವ ಗ್ರಾಹಕರು 2026ರ ಹಬ್ಬದ ಸೀಸನ್‌ನವರೆಗೆ ಕಾಯಬೇಕಾಗುತ್ತದೆ ಎಂದು ರೆನಾಲ್ಟ್ ದೃಢಪಡಿಸಿದೆ.

new-renault-duster-all-set-to-launch-price-features-engine-details

ಫೀಚರ್ಸ್‌ನಲ್ಲಿ ದೊಡ್ಡ ಅಪ್‌ಡೇಟ್: ಹೊಸ ರೆನಾಲ್ಟ್ ಡಸ್ಟರ್‌ನ ಒಳಾಂಗಣವು ಪನೋರಮಿಕ್ ಸನ್‌ರೂಫ್, ಡ್ಯಾಶ್‌ಬೋರ್ಡ್ ಮತ್ತು ಬಾಗಿಲುಗಳ ಮೇಲೆ ಕಾರ್ಬನ್ ಫೈಬರ್ ಇನ್ಸರ್ಟ್‌ಗಳು, ಡ್ಯುಯಲ್ - ಟೋನ್ ಅಪ್ಹೋಲ್ಸ್ಟರಿ ಮತ್ತು ಡ್ಯುಯಲ್ - ಜೋನ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಬರುತ್ತದೆ. ಹಾಗೆಯೇ ಹೊಸ 3-ಸ್ಪೋಕ್ ಸ್ಟೀರಿಂಗ್ ವೀಲ್, ಡ್ಯಾಶ್‌ಬೋರ್ಡ್‌ನಲ್ಲಿ ಡ್ಯುಯಲ್-ಸ್ಕ್ರೀನ್ ಲೇಔಟ್, ಆಂಬಿಯೆಂಟ್ ಲೈಟಿಂಗ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್‌ಗಳು, ಆಟೋ-ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಒಳಗೊಂಡಿದೆ.

ಇತರ ಮುಖ್ಯಾಂಶಗಳಲ್ಲಿ ಪವರ್ಡ್ ಫ್ರಂಟ್ ಸೀಟುಗಳು, ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಆರ್ಮ್‌ರೆಸ್ಟ್, ಪವರ್ಡ್ ಟೈಲ್‌ಗೇಟ್ ಮತ್ತು 60:40 ಸ್ಪ್ಲಿಟ್ ರಿಯರ್ ಸೀಟುಗಳೊಂದಿಗೆ ಬರುತ್ತದೆ. ಅರ್ಕಾಮಿಸ್ ಸೌಂಡ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಆರು ಏರ್‌ಬ್ಯಾಗ್‌ಗಳು ಮತ್ತು ಲೆವೆಲ್ 2 ADAS ಇದರ ಪ್ರೀಮಿಯಂ ಆಕರ್ಷಣೆಯ ಸೇರ್ಪಡೆಯಾಗಿದ್ದು, ಡಸ್ಟರ್ ಮೊದಲಿಗಿಂತ ಹೆಚ್ಚು ಆಕರ್ಷಕವಾಗಿದೆ.

More from DriveSpark

Article Published On: Wednesday, February 11, 2026, 10:24 [IST]
English summary
New renault duster all set to launch price features engine details
Read more on renault india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+