ನಿಸ್ಸಾನ್ ಗ್ರಾವೈಟ್ 7-ಸೀಟರ್ ಕಾರು: ಕೇವಲ 5.65 ಲಕ್ಷ... ಶೀಘ್ರದಲ್ಲೆ CNG ಆಯ್ಕೆ... ವಿಶೇಷತೆಗಳೇನು?
ಪ್ರಮುಖ ಕಾರು ತಯಾರಕರಾದ ನಿಸ್ಸಾನ್ ಇತ್ತೀಚೆಗಷ್ಟೆ ದೇಶದ ಅತ್ಯಂತ ಅಗ್ಗದ 7-ಸೀಟರ್ ಎಂಪಿವಿ ಕಾರನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 5.65 ಲಕ್ಷ ರೂ. (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುತ್ತದೆ. ಅಲ್ಲದೆ ಮತ್ತೊಂದು ಪ್ರಮುಖ ಹೈಲೆಟ್ ಎಂದರೆ ಈ ಕಾರು, ಪ್ರತಿ ಲೀಟರ್‌ಗೆ 19.3 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಈ ಕಾರನ್ನು ಇದೀಗ ಡೀಲರ್‌ಶಿಪ್ ಮಟ್ಟದಲ್ಲಿ ಸಿಎನ್‌ಜಿ ಆಯ್ಕೆಯಲ್ಲೂ ಪರಿಚಯಿಸುವುದಾಗಿ ತಿಳಿದುಬಂದಿದ್ದು, ಮೈಲೇಜ್ ಬರೋಬ್ಬರಿ 25 ಕಿ.ಮೀ ನೀಡಬಹುದು ಎಂದು ಉದ್ಯಮ ಮೂಲಗಳು ಹೇಳುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನಿಸ್ಸಾನ್ ಗ್ರಾವೈಟ್ ಶೀಘ್ರದಲ್ಲೇ CNG ವೇರಿಯೆಂಟ್ ಅನ್ನು ಡ್ಯುಯಲ್-ಸಿಲಿಂಡರ್ ಸಂರಚನೆಯೊಂದಿಗೆ ನೀಡಲಾಗುವುದು ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ 7-ಸೀಟರ್ ಕಾರುಗಳಲ್ಲಿ ಮೂರು ಸಾಲುಗಳ ಆಸಗಳು ಇರುವುದರಿಂದ ಬೂಟ್ ಜಾಗ ಕಡಿಮೆ ಇರುತ್ತದೆ. ಸಾಮಾನ್ಯ ಸಿಂಗಲ್ CNG ಸಿಲಿಂಡರ್‌ಗಳು ಕಾಂಪ್ಯಾಕ್ಟ್ MPV ಗಳಲ್ಲಿ ಹೆಚ್ಚಿನ ಲಗೇಜ್ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತವೆ.

ಇದು ಖರೀದಿದಾರರಿಗೆ ಲಗೇಜ್ ಸ್ಥಳಾವಕಾಶದ ಕೊರತೆ ಎದುರಿಸುವಂತೆ ಮಾಡುತ್ತದೆ. ಇದರಿಂದಾಗಿ ಮಾಲೀಕರು ಸರಕು ಅಥವಾ ಮೂರನೇ ಸಾಲಿನ ಉಪಯುಕ್ತತೆಯನ್ನು ಕೈಬಿಡುವಂತೆ ಮಾಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ನಿಸ್ಸಾನ್ ಗ್ರಾವೈಟ್ ಆಸನ ಮತ್ತು ಲಗ್ಗೇಜ್ ಸಾಗಿಸುವ ಸಾಮರ್ಥ್ಯ ಎರಡರಲ್ಲೂ ಉತ್ತಮ ಸ್ಥಳಾವಕಾಶ ಒದಗಿಸಲು ನೋಡುತ್ತಿದೆ. ಎಲ್ಲವು ಅಂದುಕೊಂಡಂತಾದರೆ ನಿಸ್ಸಾನ್ ಗೆ ಈ ಕಾರು ಮಾರುಕಟ್ಟೆಯಲ್ಲಿ ಉತ್ತಮ ಯಶಸ್ಸು ತಂದುಕೊಡಲಿದೆ.
CNG ವೇರಿಯೆಂಟ್‌ಗಳು ಸಾಮಾನ್ಯವಾಗಿ ಪೆಟ್ರೋಲ್‌ಗಿಂತ ಹೆಚ್ಚಿನ ಮೈಲೇಜ್ ನೀಡುವ ಜೊತೆಗೆ ಪೆಟ್ರೋಲ್‌ಗಿಂತ ಕಡಿಮೆ ಬೆಲೆ ಇರುತ್ತದೆ. ಜನ ಪರ್ಫಾಮೆನ್ಸ್‌ಗಿಂತ ಇಂಧನ ವೆಚ್ಚಗಳ ಮೇಲೆ ಕೇಂದ್ರೀಕರಿಸುತ್ತಾರೆ. ಆದ್ದರಿಂದ CNG ವೇರಿಯೆಂಟ್ ಲಭ್ಯತೆಯು ಈ ವಿಭಾಗದಲ್ಲಿನ ನಿಜವಾದ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿದೆ. ಅದೇನೇ ಇದ್ದರೂ, ಪೆಟ್ರೋಲ್ ವೇರಿಯೆಂಟ್ ಗಳಿಗೆ ಹೋಲಿಸಿದರೆ CNG ಕಡಿಮೆ ಪವರ್ ಹೊಂದಿರುತ್ತದೆ.

ಪೆಟ್ರೋಲ್ VS ಸಿಎನ್‌ಜಿ ಯಾವುದು ಬೆಸ್ಟ್?: ಇದು ಬಳಕೆಯ ಮಾಡಲ್ ಮತ್ತು ತುರ್ತು ಅವಸರಗಳನ್ನು ಅವಲಂಬಿಸಿ ಪರಿಗಣಿಸಬೇಕಾಗುತ್ತದೆ. ತಕ್ಷಣ ಕಾರನ್ನು ಬಯಸುವ ಅಥವಾ CNG ಕಡಿಮೆ ಬಯಸದೆ ಆಗಾಗ್ಗೆ ಹೆದ್ದಾರಿ ಬಳಕೆಯನ್ನು ಹೊಂದಿರುವ ಖರೀದಿದಾರರು ಪೆಟ್ರೋಲ್ ಗ್ರಾವೈಟ್ ಅನ್ನು ಖರೀದಿಸಬಹುದು. ನಗರ ಪ್ರದೇಶಗಳಲ್ಲಿ ಅಥವಾ ಫ್ಲೀಟ್ ತರಹದ ರೀತಿಯಲ್ಲಿ ಕಾರನ್ನು ವ್ಯಾಪಕವಾಗಿ ಬಳಸಲು ಪ್ಲಾನ್ ಇರುವ ಖರೀದಿದಾರರು ಮುಂಬರುವ CNG ವೇರಿಯೆಂಟ್‌ಗಾಗಿ ಕಾಯಬಹುದು.
ನಿಸ್ಸಾನ್ ಗ್ರಾವೈಟ್ ವಿಶೇಷತೆಗಳು:
ನಿಸ್ಸಾನ್ ಗ್ರಾವೈಟ್ ಉತ್ತಮ ಕ್ಯಾಬಿನ್ ಸ್ಥಳಾವಕಾಶ ಮತ್ತು ಪ್ರವರ್ತಕ ಮಾಡ್ಯುಲಾರಿಟಿಯೊಂದಿಗೆ ದೊಡ್ಡ ಕುಟುಂಬಕ್ಕೆ ಆರಾಮದಾಯಕ ಪ್ರಯಾಣ ಅನುಭವ ನೀಡುತ್ತದೆ. ದೈನಂದಿನ ಪ್ರಯಾಣ ಮತ್ತು ದೀರ್ಘ ಪ್ರಯಾಣಗಳಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾದ ಈ ಕಾರು, ಮೂರು ಸಾಲುಗಳಲ್ಲಿ 7 - ಸೀಟುಗಳೊಂದಿಗೆ ಲೆಥೆರೆಟ್ ಕ್ವಿಲ್ಟೆಡ್ ಆಸನಗಳನ್ನು ನೀಡಲಾಗಿದ್ದು, ಸೌಕರ್ಯವನ್ನು ಹೆಚ್ಚಿಸುತ್ತವೆ.

ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ಕಾರ್ಪ್ಲೇ ಸಂಪರ್ಕದೊಂದಿಗೆ ಫ್ಲೋಟಿಂಗ್ 20.32 ಸೆಂ.ಮೀ ಇನ್ಫೋಟೈನ್‌ಮೆಂಟ್, 17.78 ಸೆಂ.ಮೀ ಫುಲ್ಲಿ ಡಿಜಿಟಲ್ ಅಡ್ವಾನ್ಸ್ಡ್ ಮಲ್ಟಿ-ಫಂಕ್ಷನಲ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಫಾಲೋ ಮಿ ಹೋಮ್ ಫಂಕ್ಷನ್‌ನೊಂದಿಗೆ ಆಟೋ ಎಲ್ಇಡಿ ಹೆಡ್‌ಲ್ಯಾಂಪ್, ವಾಕ್ ಅವೇ ಲಾಕ್ (WAL) ಮತ್ತು ಅಪ್ರೋಚ್ ಅನ್‌ಲಾಕ್ (AUL), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳನ್ನು ಒದಗಿಸಲಾಗಿದೆ.
ಸುರಕ್ಷತೆಯ ವಿಷಯಕ್ಕೆ ಬಂದರೆ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS), ಹಿಲ್-ಸ್ಟಾರ್ಟ್ ಅಸಿಸ್ಟ್ (HSA), ಬ್ರೇಕ್ ಅಸಿಸ್ಟ್ ಸಿಸ್ಟಮ್ (BAS), EBD ಜೊತೆಗೆ ABS, ಎಲ್ಲಾ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮೈಂಡರ್ ನೀಡಲಾಗಿದೆ. ಒಟ್ಟಾರೆ ಈ ವೈಶಿಷ್ಟ್ಯಗಳು ಪ್ರಯಾಣಿಕರ ರಕ್ಷಣೆಯನ್ನು ಖಚಿತಪಡಿಸುತ್ತವೆ.


Click it and Unblock the Notifications








