Skoda: ಬೆಲೆ ಇಷ್ಟೇನಾ? ಪ್ರೀಮಿಯಂ ಕಾರೆಂದು ಮುಗಿಬಿದ್ದ ಜನ: 50,000 ಎಸ್‌ಯುವಿಗಳು ಉಡೀಸ್!
ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಸ್ಕೋಡಾ (Skoda), ತನ್ನ ಜನಪ್ರಿಯ ಕೈಲಾಕ್ ಎಸ್‌ಯುವಿ ಭಾರತದಲ್ಲಿ ಸ್ಕೋಡಾ ಬೆಳವಣಿಗೆಯ ಬಲವಾದ ಆಧಾರಸ್ತಂಭವಾಗಿ ಹೊರಹೊಮ್ಮಿದೆ ಎಂದು ಘೋಷಿಸಿದೆ. ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 50,000 ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ, ಕೈಲಾಕ್ ದೇಶದಲ್ಲಿ ಬ್ರ್ಯಾಂಡ್‌ನ 25 ವರ್ಷಗಳಲ್ಲಿ ಅತ್ಯುತ್ತಮ ಮಾರಾಟ ಕಾರ್ಯಕ್ಷಮತೆಗೆ ಪ್ರಮುಖ ಕೊಡುಗೆ ನೀಡಿದೆ. ಕೈಲಾಕ್‌ನ ಸುರಕ್ಷತೆ, ಚಾಲನಾ ಡೈನಾಮಿಕ್ಸ್, ತಂತ್ರಜ್ಞಾನವು ಗ್ರಾಹಕರಿಗೆ ತುಂಬಾ ಇಷ್ಟವಾಗಿದೆ, ಇದು ಸಬ್-4 ಮೀ. SUV ವಿಭಾಗದಲ್ಲಿ ಪ್ರಮುಖ ಕಾರಾಗಿ ಗುರ್ತಿಸಿಕೊಂಡಿದೆ ಎಂದು ಹೇಳಿದೆ.
ಅಂದಹಾಗೆ ಸ್ಕೋಡಾ ಕೈಲಾಕ್ (Skoda Kylaq) ಭಾರತದಲ್ಲಿ ಮೊದಲ ವಾರ್ಷಿಕೋತ್ಸವವನ್ನು ಪೂರೈಸಿಕೊಂಡಿದೆ, ಬಿಡುಗಡೆಯಾದ ಒಂದು ವರ್ಷದಲ್ಲಿ 50,000 ಕಾರುಗಳ ಮಾರಾಟವನ್ನು ದಾಟುವುದು ನಿಜಕ್ಕೂ ಶ್ಲಾಘನೀಯ. ಈ ವೇಗವನ್ನು ಹೆಚ್ಚಿಸಲು ನಾವು ಕೈಲಾಕ್ ಅನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ನೀಡುತ್ತಿದ್ದೇವೆ. ಕೈಲಾಕ್ ಅನ್ನು ಅದರ ವಿಭಾಗದಲ್ಲಿಯೇ ಬೆಸ್ಟ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಅತ್ಯಂತ ಕಮ್ಮಿ ಬೆಲೆಯ ವಾಹನವನ್ನಾಗಿ ಮಾಡುತ್ತಿದ್ದೇವೆ ಎಂದು ಸ್ಕೋಡಾ ತಿಳಿಸಿದೆ.

ನಾಲ್ಕು ವೇರಿಯೆಂಟ್‌ಗಳು ಮತ್ತು ಏಳು ವಿವಿಧ ಬೆಲೆಗಳಲ್ಲಿ ಸಿಗುತ್ತಿದ್ದ ಕೈಲಾಕ್, 2026 ರಲ್ಲಿ ಇನ್ನು ಮುಂದೆ ಆರು ವೇರಿಯೆಂಟ್‌ಗಳು ಮತ್ತು 11 ವಿವಿಧ ಬೆಲೆಗಳಲ್ಲಿ ಸಿಗಲಿದೆ. ಬ್ರ್ಯಾಂಡ್ ಆರಂಭಿಕ ಹಂತದ ಕ್ಲಾಸಿಕ್ ಮತ್ತು ಸಿಗ್ನೇಚರ್ ವೇರಿಯೆಂಟ್‌ಗಳ ನಡುವೆ ಸ್ಥಾನ ಪಡೆದಿರುವ ಕ್ಲಾಸಿಕ್ + ಅನ್ನು ಈಗ ಪರಿಚಯಿಸಿದೆ. ಜೊತೆಗೆ ಕೈಲಾಕ್ ಪ್ರೆಸ್ಟೀಜ್ + ವೇರಿಯೆಂಟ್‌ನ್ನು ಸಹ ತರುವುದಾಗಿ ಸ್ಕೋಡಾ ಘೋಷಿಸಿದೆ.
ಈ ಅಪ್‌ಡೇಟ್‌ಗಳೊಂದಿಗೆ, ಈಗ ಕೈಲಾಕ್ ಕ್ಲಾಸಿಕ್ + ಬೇಸ್ ಕ್ಲಾಸಿಕ್ ವೇರಿಯೆಂಟ್‌ನ ಮೇಲೆ ಇರಿಸಲಾಗಿದೆ. ಈ ವೇರಿಯೆಂಟ್ ಎಲೆಕ್ಟ್ರಿಕ್ ಸನ್‌ರೂಫ್, ಎಲೆಕ್ಟ್ರಿಕ್ IRVM, ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್‌ಗಳು, LED ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು, LED ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ.

ಜನಪ್ರಿಯ ಬೇಡಿಕೆಯಲ್ಲಿ ಸಿಗ್ನೇಚರ್ ಮತ್ತು ಸಿಗ್ನೇಚರ್+ ನಂತಹ ವೇರಿಯೆಂಟ್‌ಗಳು ಎಲೆಕ್ಟ್ರಿಕ್ ಸನ್‌ರೂಫ್, ಪ್ಯಾಡಲ್-ಶಿಫ್ಟರ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, ಹಿಂಭಾಗದ ವೈಪರ್ - ವಾಷರ್ ಮತ್ತು LED ರೀಡಿಂಗ್ ಲ್ಯಾಂಪ್‌ಗಳು ಮುಂತಾದವುಗಳನ್ನು ಪಡೆಯುತ್ತಿವೆ. ಇದರ ಜೊತೆಗೆ, ಪ್ರೆಸ್ಟೀಜ್ ಮತ್ತು ಪ್ರೆಸ್ಟೀಜ್+ ನೊಂದಿಗೆ ಟಾಪ್ ವೇರಿಯೆಂಟ್ ಪ್ರೆಸ್ಟೀಜ್ ಲೈನ್ ಅನ್ನು ವಿಭಜಿಸಿದ್ದು, ಇದು ಖರೀದಿದಾರರಿಗೆ ಹೆಚ್ಚಿನ ಆಯ್ಕೆ ಮತ್ತು ಮೌಲ್ಯವನ್ನು ನೀಡುತ್ತದೆ.
ಗರಿಷ್ಠ ಸುರಕ್ಷತೆ
ಪ್ರಸ್ತುತ ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ ಬೇಸ್ ವೇರಿಯೆಂಟ್ ಬೆಲೆಯು ರೂ. 7.59 ಲಕ್ಷವಿದ್ದು, ಟಾಪ್ ವೇರಿಯೆಂಟ್ ಬೆಲೆ ರೂ. 12.99 ಲಕ್ಷವಿದೆ (ಎಕ್ಸ್ ಶೋರೂಂ ಬೆಲೆಗಳು). ಭಾರತ್ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಅತ್ಯಧಿಕ ಸುರಕ್ಷತಾ ರೇಟಿಂಗ್‌ಗಳೊಂದಿಗೆ ತನ್ನ ವಿಭಾಗದಲ್ಲಿ ಸುರಕ್ಷಿತ ಕಾರಾಗಿ ಮುಂದುವರೆದಿದೆ. ಪ್ರತಿಯೊಂದು ವೇರಿಯೆಂಟ್ ಆರು ಏರ್‌ಬ್ಯಾಗ್‌ಗಳು ಮತ್ತು 25 ಕ್ಕಿಂತ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಪ್ರಮಾಣಿತವಾಗಿ ಬರುತ್ತದೆ.

ಟಾಪ್ ವೇರಿಯೆಂಟ್‌ಗಳು 40 ಕ್ಕೂ ಹೆಚ್ಚು ಸೇಫ್ಟಿ ಫೀಚರ್ಸ್ ಪಡೆಯುತ್ತವೆ. ಕೈಲಾಕ್ ವಿಭಾಗದಲ್ಲಿ ಅತ್ಯುತ್ತಮವಾದ 4 ವರ್ಷಗಳ ಪ್ರಮಾಣಿತ ವಾರೆಂಟಿ ಸಹ ಒಳಗೊಂಡಿದೆ. ಅಲ್ಲದೆ, ಪ್ರಮಾಣಿತ 4 ವರ್ಷಗಳ ರಸ್ತೆಬದಿಯ ಸಹಾಯ ಮತ್ತು 4 ಲೇಬರ್-ಫ್ರೀ ಸರ್ವಿಸ್‌ಗಳು. ಇದರಲ್ಲಿ 15,000 ಕಿ.ಮೀ ಮತ್ತು 30,000 ಕಿ.ಮೀಗಳಲ್ಲಿ ಆವರ್ತಕ ಮೇಂಟೇನ್ ಸರ್ವಿಸ್‌ಗಳು, ಜೊತೆಗೆ 1,000 ಕಿ.ಮೀ ಮತ್ತು 7,500 ಕಿ.ಮೀಗಳಲ್ಲಿ ಹೊಸದಾಗಿ ಪರಿಚಯಿಸಲಾದ ಸ್ಕೋಡಾ ಚೆಕ್-ಇನ್ ಸರ್ವಿಸ್‌ಗಳು ಸೇರಿವೆ.
ಕೈಲಾಕ್‌ಗೆ ಒಂದು ವರ್ಷದ ಯಶಸ್ಸಿನ ಆಚರಣೆ
ಕೈಲಾಕ್‌ನ ಆಯ್ದ ವೇರಿಯೆಂಟ್‌ಗಳ ಮೇಲೆ ಬ್ರ್ಯಾಂಡ್ ಸೀಮಿತ ಅವಧಿಯ ವಾರ್ಷಿಕೋತ್ಸವದ ಆಫರ್‌ಗಳನ್ನು ಘೋಷಿಸಿದೆ. ಇದು ರೂ.50,000 ವರೆಗಿನ ಪ್ರಯೋಜನಗಳನ್ನು ನೀಡುತ್ತದೆ. ಇದಲ್ಲದೆ, ಕೈಲಾಕ್‌ಗಾಗಿ ಒಂದು ವರ್ಷದ ಸ್ಕೋಡಾ ಮೇಂಟೆನನ್ಸ್ ಪ್ಯಾಕೇಜ್‌ನಲ್ಲಿ 50% ರಿಯಾಯಿತಿ ಸಿಗುತ್ತದೆ. ಹೆಚ್ಚುವರಿಯಾಗಿ, ಯಾವುದೇ ವೇರಿಯೆಂಟ್‌ನಲ್ಲಿ ಕೈಲಾಕ್ ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೆ ಖಚಿತ ಗಿಫ್ಟ್ ಇರುತ್ತದೆ. ಫೆಬ್ರವರಿ 28, 2026 ರವರೆಗೆ ಮಾತ್ರ ಲಭ್ಯವಿರುತ್ತವೆ.


Click it and Unblock the Notifications








