Tata: ಅತ್ಯಂತ ಸುರಕ್ಷಿತ ಟಾಟಾ ಮೈಕ್ರೋ SUV ಬಿಡುಗಡೆಗೆ ಸಜ್ಜು: ಫೆ.20 ರಂದು ಪಾದಾರ್ಪಣೆ
ಟಾಟಾ ಮೋಟಾರ್ಸ್ ಭಾರತೀಯ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮುನ್ನುಗ್ಗುತ್ತಿದೆ, ಟಾಟಾ ಪಂಚ್, ನೆಕ್ಸಾನ್, ಕರ್ವ್, ಹ್ಯಾರಿಯರ್ ಇವಿನಂತಹ ಪ್ರಮುಖ ಮಾಡಲ್‌ಗಳೊಂದಿಗೆ ಭಾರತದಲ್ಲಿ ಉತ್ತಮ ಲಾಭ ಕಾಣುತ್ತಿದೆ. ಗ್ರಾಹಕರಲ್ಲಿ ಈ ಮಾಡಲ್‌ಗಳಿಗೆ ತುಂಬಾ ಬೇಡಿಕೆಯಿದ್ದು, ಇವಿ ವಿಭಾಗದಲ್ಲಿ ಟಾಟಾ ಮೋಟಾರ್ಸ್ ನಂ.1 ಸ್ಥಾನದಲ್ಲಿ ಮುಂದುವರಿಯುತ್ತಿದೆ. ಈಗ ಸಣ್ಣ ಎಲೆಕ್ಟ್ರಿಕ್ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಪ್ರತಿಸ್ಪರ್ಧಿಗಳಿಂದ ಟಾಟಾ ಪಂಚ್ ಇವಿ ಕಾರಿಗೆ ಪೈಪೋಟಿ ಹೆಚ್ಚಾಗಿದ್ದು, ಈ ಕಾರನ್ನು ಹೊಸ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಪೈಪೋಟಿಯಲ್ಲಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಟಾಟಾ ಮೋಟಾರ್ಸ್ ಪ್ಲಾನ್ ಮಾಡಿದೆ.
ಟಾಟಾ ಮೋಟಾರ್ಸ್ ಹೊಸ ಅಪ್‌ಡೇಟ್‌ಗಳನ್ನು ನೀಡಿ 'ಪಂಚ್ ಇವಿ ಫೇಸ್‌ಲಿಫ್ಟ್' ಎಸ್‌ಯುವಿಯನ್ನು ಫೆಬ್ರವರಿ 20 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ದೃಢಪಡಿಸಿದೆ. ನವೀಕರಿಸಿದ ಇಂಧನ ಚಾಲಿತ ಟಾಟಾ ಪಂಚ್ ಕಾರಿನ ಇತ್ತೀಚಿನ ಪರಿಚಯದ ನಂತರ ಈ ಘೋಷಣೆ ಮಾಡಲಾಗಿದೆ, ಈಗ ಟಾಟಾ ಮೋಟಾರ್ಸ್‌ನ ಸಂಪೂರ್ಣ ಗಮನವು ಅದರ ಎಲೆಕ್ಟ್ರಿಕ್ ಪ್ರತಿರೂಪದತ್ತ ತಿರುಗಿದೆ.

ಈಗ ಮಾರಾಟದಲ್ಲಿರುವ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿ ಎರಡು ವರ್ಷ ಕಳೆದಿದೆ. ಇದು ಬಿಡುಗಡೆಯಾಗುವ ವೇಳೆಗೆ ತುಂಬಾ ಅಪ್‌ಡೇಟ್ ಹಾಗೂ ಹೊಸ ಡಿಸೈನ್‌ನೊಂದಿಗೆ ಬಂದಿತ್ತು. ಆದ್ದರಿಂದ ಈಗ ಹೊಸ ಮುಂಬರಲಿರುವ ಫೇಸ್‌ಲಿಫ್ಟ್ ಕಾರು ಸಂಪೂರ್ಣ ಬದಲಾವಣೆ ಕಾಣದೆ ಸೂಕ್ಷ್ಮವಾದ ಕಾಸ್ಮೆಟಿಕ್ ಪರಿಷ್ಕರಣೆಗಳನ್ನು ತರುವ ನಿರೀಕ್ಷೆಯಿದೆ. ಈ ಹೊಸ ನವೀಕರಣಗಳು ಇಂಧನ ಚಾಲಿತ ಆವೃತ್ತಿಯಲ್ಲಿ ಕಂಡುಬರುವವುಗಳನ್ನು ಪ್ರತಿಬಿಂಬಿಸುವ ಸಾಧ್ಯತೆಯಿದೆ.
ಇದರಲ್ಲಿ ಹೊಸ ಅಲಾಯ್ ವೀಲ್ ಡಿಸೈಣ್ ಮತ್ತು ಕನೆಕ್ಟೆಡ್ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಸೇರಿವೆ. ಮಾರುಕಟ್ಟೆಯಲ್ಲಿ ಕಾರು ಹೊಸದಾಗಿ ಕಾಣಲು ಟಾಟಾ ಹೊಸ ಬಣ್ಣ ಆಯ್ಕೆಗಳು ಮತ್ತು ವಿಶೇಷ ಆವೃತ್ತಿ (ಸ್ಪೆಷಲ್ ಎಡಿಷನ್)ಗಳನ್ನು ಸಹ ಪರಿಚಯಿಸಬಹುದು. ಫೀಚರ್ಸ್ ವಿಷಯದಲ್ಲೂ ಕೆಲವು ಬದಲಾವಣೆಗಳು ಇರಲಿದ್ದು, ಹಳೆಯ ಮಾಡಲ್‌ಗಿಂತ ಮುಂಬರುವ ಮಾಡಲ್ ತುಸು ಪ್ರೀಮಿಯಂ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಮುಂಭಾಗದಲ್ಲಿ ಟಾಟಾ ಪಂಚ್ ಇವಿ ತನ್ನ ಅಸ್ತಿತ್ವದಲ್ಲಿರುವ ಸಲಕರಣೆಗಳ ಪಟ್ಟಿ (Equipment list)ಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಇದರಲ್ಲಿ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಟಚ್-ಆಧಾರಿತ ಕ್ಲೈಮೆಟ್ ಕಂಟ್ರೋಲ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಮತ್ತು ಡ್ಯುಯಲ್ ಟೋನ್ ಕ್ಯಾಬಿನ್ ಥೀಮ್ ಸೇರಿವೆ.
ಒಮ್ಮೆ ಬಿಡುಗಡೆಯಾದ ನಂತರ, ನವೀಕರಿಸಿದ ಪಂಚ್ ಎಲೆಕ್ಟ್ರಿಕ್ ಕಾರು, ಸಿಟ್ರನ್ eC3 ಮತ್ತು MG ಕಾಮೆಟ್ ನಂತಹ ನೇರ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲಿದೆ. ಮುಂಬರುವ ತಿಂಗಳುಗಳಲ್ಲಿ ವಿನ್ಫಾಸ್ಟ್ VF 3 ಆಗಮನದೊಂದಿಗೆ ಈ ಮೈಕ್ರೋ ಕಾರುಗಳ ವಿಭಾಗವು ಮತ್ತಷ್ಟು ವಿಸ್ತರಿಸಲು ಸಿದ್ಧವಾಗಿದೆ.

ಪ್ರಸ್ತುತ ಮಾರಾಟದಲ್ಲಿರುವ ಟಾಟಾ ಪಂಚ್ ಇವಿ ವಿಶೇಷತೆಗಳು
ಹೊಸ ಟಾಟಾ 'ಪಂಚ್ ಇವಿ ಫೇಸ್‌ಲಿಫ್ಟ್' 25 Kwh ಹಾಗೂ 35 Kwh ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. 25kWh ಬ್ಯಾಟರಿ ಪ್ಯಾಕ್ ಕಾರು 315km ರೇಂಜ್ ನೀಡುವುದರ ಜೊತೆಗೆ 80.46bhp ಪವರ್ ಹಾಗೂ 114Nm ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 35kWh ಬ್ಯಾಟರಿ ಪ್ಯಾಕ್ ಕಾರು 421km ರೇಂಜ್ ನೀಡುವುದರ ಜೊತೆಗೆ 120.7bhp ಪವರ್ ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಟಾಟಾ ಪಂಚ್ ಇವಿ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್, ಎಬಿಎಸ್ ಮತ್ತು ಇಬಿಡಿ, ಡಿಸ್ಕ್ ಬ್ರೇಕ್‌ಗಳು, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಬ್ಲೈಂಡ್ ಸ್ಪಾಟ್ ವ್ಯೂವ್ ಮಿರರ್‌ಗಳು ಲಭ್ಯವಿದೆ. ಬ್ಯಾಟರಿ ಮತ್ತು ರೇಂಜ್ ಬಗ್ಗೆ ಹೇಳುವುದಾದ್ರೆ, ಟಾಟಾ ಮೋಟಾರ್ಸ್ ಈ ಕಾರಿನಲ್ಲಿ ಎರಡು ವೇರಿಯಂಟ್‌ಗಳನ್ನು ಪರಿಚಯಿಸಿದೆ.


Click it and Unblock the Notifications








