Tata: ನಾಳೆ ಮಾರುಕಟ್ಟೆಗೆ ಹೊಸ ಟಾಟಾ ಮೈಕ್ರೋ SUV ಬಿಡುಗಡೆ: ಬೆಲೆಯೆಷ್ಟು, ವಿಶೇಷತೆಗಳೇನು?
ಭಾರತದಲ್ಲಿ ಮೈಕ್ರೋ ಎಸ್‌ಯುವಿ ಎಲೆಕ್ಟ್ರಿಕ್ ಕಾರು ವಿಭಾಗವು ವೇಗವಾಗಿ ಬೆಳೆಯುತ್ತಿದೆ. ಈ ವಿಭಾಗದಲ್ಲಿ ಮೊದಲಿನಿಂದಲೂ ಟಾಟಾ ಪಂಚ್ ಇವಿ (Tata Punch EV) ತುಂಬಾ ಸದ್ದು ಮಾಡುತ್ತಿದ್ದು, ಪ್ರತಿ ತಿಂಗಳು ಉತ್ತಮ ಮಾರಾಟ ಕಾಣುತ್ತದೆ. ಆದರೆ ಈ ವಿಭಾಗದಲ್ಲಿ ಇತರ ಬ್ರ್ಯಾಂಡ್‌ಗಳು ತಮ್ಮ ಮೈಕ್ರೋ ಎಸ್‌ಯುವಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇವೆಲ್ಲವು ಹೊಸ ಆಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ಡಿಸೈನ್‌ನೊಂದಿಗೆ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಇವಿಗೆ ಪೈಪೋಟಿ ನೀಡುತ್ತಿವೆ. ಇದನ್ನು ಗಟ್ಟಿಯಾಗಿ ಎದರಿಸಲು ಟಾಟಾ ಪಂಚ್ ಕೂಡ ಹೊಸ ಅಪ್‌ಡೇಟ್‌ಗಳನ್ನು ಪಡೆದು ಫೇಸ್‌ಲಿಫ್ಟ್ ಮಾಡಲ್ ನಾಳೆ ಬಿಡುಗಡೆಗೆ ಸಜ್ಜಾಗಿದೆ.
ಈಗ ಮಾರಾಟದಲ್ಲಿರುವ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿ ಎರಡು ವರ್ಷ ಕಳೆದಿದೆ. ಇದು ಬಿಡುಗಡೆಯಾಗುವ ವೇಳೆಗೆ ತುಂಬಾ ಅಪ್‌ಡೇಟ್ ಹಾಗೂ ಹೊಸ ಡಿಸೈನ್‌ನೊಂದಿಗೆ ಬಂದಿತ್ತು. ಆದ್ದರಿಂದ ಈಗ ಹೊಸ ಮುಂಬರಲಿರುವ ಫೇಸ್‌ಲಿಫ್ಟ್ ಕಾರು ಸಂಪೂರ್ಣ ಬದಲಾವಣೆ ಕಾಣದೆ ಸೂಕ್ಷ್ಮವಾದ ಕಾಸ್ಮೆಟಿಕ್ ಪರಿಷ್ಕರಣೆಗಳನ್ನು ತರುವ ನಿರೀಕ್ಷೆಯಿದೆ. ಈ ಹೊಸ ನವೀಕರಣಗಳು ಇಂಧನ ಚಾಲಿತ ಆವೃತ್ತಿಯಲ್ಲಿ ಕಂಡುಬರುವವುಗಳನ್ನು ಪ್ರತಿಬಿಂಬಿಸುವ ಸಾಧ್ಯತೆಯಿದೆ.

ಟಾಟಾ ಮೋಟಾರ್ಸ್ ನಾಳೆ ದೇಶದಲ್ಲಿ ಹೊಸ ಪಂಚ್ ಇವಿ ಫೇಸ್‌ಲಿಫ್ಟ್‌ನ ಬೆಲೆಗಳನ್ನು ಘೋಷಿಸಲು ಸಜ್ಜಾಗಿದೆ. ಇದು ಸಣ್ಣ ಎಲೆಕ್ಟ್ರಿಕ್ ಎಸ್‌ಯುವಿಗೆ ಮೊದಲ ಮಿಡ್ - ಲೈಫ್ ಅಪ್‌ಡೇಟ್ ಆಗಿದೆ, ಇತ್ತೀಚೆಗೆ ನವೀಕರಿಸಿದ ಇಂಧನ ಚಾಲಿತ ಟಾಟಾ ಪಂಚ್ ಹಲವಾರು ಪರಿಷ್ಕರಣೆಗಳನ್ನು ಪಡೆದಿತ್ತು, ಇದೇ ರೀತಿ ಅಪ್‌ಡೇಟ್‌ಗಳನ್ನು ಪಂಚ್ ಇವಿ ಪಡೆಯುವ ನಿರೀಕ್ಷೆಯಿದೆ.
ಮುಂಭಾಗದಲ್ಲಿ, ಹೊಸ ಪಂಚ್ ಇವಿ ಫೇಸ್‌ಲಿಫ್ಟ್ ಹೊಸ ಏರ್ ಡ್ಯಾಮ್‌ನೊಂದಿಗೆ ಪರಿಷ್ಕೃತ ಫ್ಯಾಸಿಯಾವನ್ನು ಹೊಂದಿದೆ. ಹೊಸ ಏರೋ-ಪ್ರೇರಿತ ವೀಲ್‌ಗಳನ್ನು ಹೊರತುಪಡಿಸಿ, ಸೈಡ್ ಪ್ರೊಫೈಲ್ ಹೆಚ್ಚಾಗಿ ಬದಲಾಗದೆ ಉಳಿದಿದೆ, ಇದರ ವಿನ್ಯಾಸವನ್ನು ನೆಕ್ಸಾನ್ ಇವಿಯಿಂದ ಎರವಲು ಪಡೆಯಲಾಗಿದೆ. ಹಿಂಭಾಗದಲ್ಲಿ LED ಟೈಲ್‌ಲೈಟ್‌ಗಳು, ಸಿಲ್ವರ್ ಬಣ್ಣದ ದಪ್ಪ ಸ್ಕಿಡ್ ಪ್ಲೇಟ್‌ನೊಂದಿಗೆ ಪರಿಷ್ಕೃತ ಹಿಂಭಾಗದ ಬಂಪರ್ ಮತ್ತು ಕನೆಕ್ಟೆಡ್ ಲೈಟ್ ಬಾರ್ ಹೊಂದಿದೆ.

ಫೇಸ್‌ಲಿಫ್ಟೆಡ್ ಟಾಟಾ ಪಂಚ್ ಇವಿಯ ಒಳಾಂಗಣದಲ್ಲಿನ ಬದಲಾವಣೆಗಳ ಕುರಿತು ವಿವರಗಳು ಪ್ರಸ್ತುತ ತಿಳಿದುಬಂದಿಲ್ಲ. ಆದರೂ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಟಚ್ - ಆಧಾರಿತ ಕ್ಲೈಮೆಟ್ ಕಂಟ್ರೋಲ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಚಾರ್ಜರ್ ಮತ್ತು ಡ್ಯುಯಲ್ ಟೋನ್ ಕ್ಯಾಬಿನ್ ಥೀಮ್ ಪಡೆಯುವ ನಿರೀಕ್ಷೆಯಿದೆ.
ಟಾಟಾ ಮೋಟಾರ್ಸ್ ಮುಂಬರುವ ತನ್ನ ಪಂಚ್ ಒಂದೇ ಚಾರ್ಜ್‌ನಲ್ಲಿ 500 ಕಿ.ಮೀ.ಗಿಂತ ಹೆಚ್ಚಿನ ರೇಂಜ್ ನೀಡುವುದಾಗಿ ಹೇಳಿಕೊಳ್ಳುವುದರಿಂದ, ಹುಡ್ ಅಡಿಯಲ್ಲಿ ಕೆಲ ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಇದು ಲಾಂಗ್ ರೇಂಜ್ ಬದಲಿಗೆ ದೊಡ್ಡ ಬ್ಯಾಟರಿಯಾಗಿರಬಹುದೇ ಅಥವಾ ಅದು ಹೆಚ್ಚಿನ ಪವರ್ ಔಟ್‌ಪುಟ್ ತರುತ್ತದೆಯೇ ಎಂಬುದನ್ನು ಬಿಡುಗಡೆ ಬಳಿಕವಷ್ಟೆ ತಿಳಿಯಬೇಕಿದೆ. ಇದರ ನಿರೀಕ್ಷಿತ ಬೆಲೆಗಳು ರೂ.9.99 ಲಕ್ಷದಿಂದ ರೂ.15 ಲಕ್ಷ (ಎಕ್ಸ್ ಶೋ ರೂಂ) ಇರಬಹುದು.

ಪ್ರಸ್ತುತ ಮಾರಾಟದಲ್ಲಿರುವ ಟಾಟಾ ಪಂಚ್ ಇವಿ ವಿಶೇಷತೆಗಳು
ಹೊಸ ಟಾಟಾ 'ಪಂಚ್ ಇವಿ ಫೇಸ್‌ಲಿಫ್ಟ್' 25 Kwh ಹಾಗೂ 35 Kwh ಎಂಬ ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. 25kWh ಬ್ಯಾಟರಿ ಪ್ಯಾಕ್ ಕಾರು 315km ರೇಂಜ್ ನೀಡುವುದರ ಜೊತೆಗೆ 80.46bhp ಪವರ್ ಹಾಗೂ 114Nm ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು 35kWh ಬ್ಯಾಟರಿ ಪ್ಯಾಕ್ ಕಾರು 421km ರೇಂಜ್ ನೀಡುವುದರ ಜೊತೆಗೆ 120.7bhp ಪವರ್ ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಒಮ್ಮೆ ಬಿಡುಗಡೆಯಾದ ನಂತರ, ನವೀಕರಿಸಿದ ಪಂಚ್ ಎಲೆಕ್ಟ್ರಿಕ್ ಕಾರು, ಸಿಟ್ರನ್ eC3 ಮತ್ತು MG ಕಾಮೆಟ್ ನಂತಹ ನೇರ ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲಿದೆ. ಮುಂಬರುವ ತಿಂಗಳುಗಳಲ್ಲಿ ವಿನ್ಫಾಸ್ಟ್ VF 3 ಆಗಮನದೊಂದಿಗೆ ಈ ಮೈಕ್ರೋ ಕಾರುಗಳ ವಿಭಾಗವು ಮತ್ತಷ್ಟು ವಿಸ್ತರಿಸಲು ಸಿದ್ಧವಾಗಿದೆ.


Click it and Unblock the Notifications








