TATA: ಬರೀ 5.59 ಲಕ್ಷ.. ಹೊಸ ಟಾಟಾ ಕಾರಿನ ವೇರಿಯೆಂಟ್‌ವಾರು ಫೀಚರ್ಸ್‌ ವಿವರಗಳು!

ಇದೇ ಮಂಗಳವಾರ ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಈ ಕಾರು ರೂ.5.59 ಲಕ್ಷದಿಂದ ರೂ.9.29 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಸ್ಮಾರ್ಟ್, ಪ್ಯೂರ್, ಪ್ಯೂರ್ ಪ್ಲಸ್, ಅಡ್ವೆಂಚರ್, ಅಕಾಂಪ್ಲಿಶ್ಡ್ ಮತ್ತು ಅಕಾಂಪ್ಲಿಶ್ಡ್ ಪ್ಲಸ್ ಎಸ್ ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ. ಬನ್ನಿ.. ಇವುಗಳು ಯಾವೆಲ್ಲ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಸ್ಮಾರ್ಟ್ (Smart):

ಇದು ಆರಂಭಿಕ ಶ್ರೇಣಿ ರೂಪಾಂತರವಾಗಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 15-ಇಂಚಿನ ಸ್ಟೀಲ್ ವೀಲ್‌ಗಳು, ಬ್ಲ್ಯಾಕ್ ಡೋರ್ ಹ್ಯಾಂಡಲ್‌ಗಳು, 2-ಸ್ಪೋಕ್ ಸ್ಟೀರಿಂಗ್ ವೀಲ್, ಬ್ಲ್ಯಾಕ್/ ಗ್ರೇ ಡ್ಯಾಶ್‌ಬೋರ್ಡ್, ಬ್ಲ್ಯಾಕ್ ಫ್ಯಾಬ್ರಿಕ್ ಸೀಟ್‌ಗಳು, ಮ್ಯಾನುವಲ್ ಎಸಿ, ಸೆಂಟ್ರಲ್ ಲಾಕಿಂಗ್, ಸೆಮಿ ಡಿಜಿಟಲ್ ಕ್ಲಸ್ಟರ್, ಫ್ರಂಟ್ ಪವರ್ ವಿಂಡೋ, 6 ಏರ್‌ಬ್ಯಾಗ್‌ಗಳು, ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಹೋಲ್ಡ್ ಅಸಿಸ್ಟ್, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ರಿಮೋಟ್ ಕೀಲೆಸ್ ಎಂಟ್ರಿಯನ್ನು ಒಳಗೊಂಡಿದೆ.

Tata Punch Facelift Variant Wise Features Details

ಪ್ಯೂರ್ (Pure):

ಈ ರೂಪಾಂತರವು 'ಸ್ಮಾರ್ಟ್'ನಂತೆಯೇ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ 2 ಸ್ಪೋಕ್ ಸ್ಟೀರಿಂಗ್ ವೀಲ್, 15ಡಬ್ಲ್ಯೂ ಸಿ-ಟೈಪ್ ಫ್ರಂಟ್ ಚಾರ್ಜರ್, ರೇರ್ ಪವರ್ ವಿಂಡೋಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್‌ಗಳು, ಇಂಟಿಗ್ರೇಟೆಡ್ ಸ್ಟೋರೇಜ್ ಬಾಕ್ಸ್‌, ಫ್ರಂಟ್ ಸೆಂಟ್ರಲ್ ಆರ್ಮ್‌ರೆಸ್ಟ್, ರೇರ್ ಎಸಿ ವೆಂಟ್‌ಗಳು, ರೇರ್ ಡಿಫಾಗರ್, ಡೈ & ನೈಟ್ ಐಆರ್‌ವಿಎಂಗಳನ್ನು ಪಡೆದಿದೆ.

ಪ್ಯೂರ್ ಪ್ಲಸ್ (Pure Plus):

ಇದೊಂದು ಪ್ರಮುಖ ರೂಪಾಂತರವಾಗಿದೆ. 'ಪ್ಯೂರ್'ಗೂ ಹೋಲಿಕೆಯಾಗುತ್ತದೆ. ಶಾರ್ಕ್ ಫಿನ್ ಆಂಟೆನಾ, ವೀಲ್ ಕವರ್, ಕ್ರೂಸ್ ಕಂಟ್ರೋಲ್, 15ಡಬ್ಲ್ಯೂ ಯುಎಸ್‌‍ಬಿ ಟೈಪ್-ಸಿ ರೇರ್ ಚಾರ್ಜರ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ರಿವರ್ಸ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್, ಹೈಟ್ ಅಡ್ಜಸ್ಟೇಬಲ್ ಡ್ರೈವರ್ ಸೀಟ್ ಹಾಗೂ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಅಡ್ವೆಂಚರ್ (Adventure):

ಈ ರೂಪಾಂತರವು 'ಪ್ಯೂರ್ ಪ್ಲಸ್'ನಂತಹ ಎಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ. ಜೊತೆಗೆ 15-ಇಂಚಿನ ಸ್ಟೀಲ್ ವೀಲ್‌ಗಳು, ಆಟೋ ಎಸಿ, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ಏರ್ ಪ್ಯೂರಿಫೈಯರ್, ಬ್ಲೈಂಡ್ ವ್ಯೂ ಮಾನಿಟರ್, ಕೀಲೆಸ್ ಎಂಟ್ರಿ, 360-ಡಿಗ್ರಿ ಕ್ಯಾಮೆರಾ, ರೇರ್ ವೈಪರ್ & ವಾಷರ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್‌ಗಳು ಮತ್ತು ಆಟೋ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.

ಅಕಾಂಪ್ಲಿಶ್ಡ್ (Accomplished):

ಇದು 'ಅಡ್ವೆಂಚರ್' ರೂಪಾಂತರದ ರೀತಿಯಲ್ಲಿಯೇ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬ್ಲ್ಯಾಕ್/ ವೈಟ್ ಡ್ಯಾಶ್‌ಬೋರ್ಡ್, 4-ಇಂಚಿನ ಸೆಮಿ-ಡಿಜಿಟಲ್ ಕ್ಲಸ್ಟರ್, 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 16-ಇಂಚಿನ ಅಲಾಯ್‌ ವೀಲ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಕನೆಕ್ಟ್ಡ್ ಎಲ್ಇಡಿ ಟೈಲ್ ಲೈಟ್‌ಗಳು, ಹಾಗೂ ಟಚ್ ಆಟೋಮೆಟಿಕ್ ಟೆಂಪರೇಚರ್ ಕಂಟ್ರೋಲ್‌ನ್ನು ಪಡೆದಿದೆ.

ಅಕಾಂಪ್ಲಿಶ್ಡ್ ಪ್ಲಸ್ ಎಸ್ (Accomplished Plus S):

ಈ ಗರಿಷ್ಠ ಶ್ರೇಣಿ ರೂಪಾಂತರವು ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 'ಅಕಾಂಪ್ಲಿಶ್ಡ್'ನಂತೆಯೇ ಇದೆ. ಹಾಗೆಯೇ 16-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು, ರೂಫ್ ರೈಲ್‌ಗಳು, ವಾಯ್ಸ್ ಅಸಿಸ್ಟ್ ಸನ್‌ರೂಫ್, ಎಲ್ಇಡಿ ಫಾಗ್ ಲ್ಯಾಂಪ್‌ಗಳು, 7-ಇಂಚಿನ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಕನೆಕ್ಟ್ಡ್ ಕಾರ್ ಟೆಕ್ ಮತ್ತು ಆಟೋ-ಡಿಮ್ಮಿಂಗ್ ಐಆರ್‌ವಿಎಂ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

'ಟಾಟಾ ಪಂಚ್' ವಿಶೇಷತೆಗಳೇನು:

ನೂತನ 'ಪಂಚ್' ಕಾರು 5 ಆಸನಗಳನ್ನು ಹೊಂದಿದೆ. ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದು. ಹೆಚ್ಚಿನ ಲಗೇಜ್ ಕೊಂಡೊಯ್ಯಲು 366 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್, 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮೆಟಿಕ್ & 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ತನ್ನದಾಗಿಸಿಕೊಂಡಿದೆ.

More from DriveSpark

Article Published On: Thursday, January 15, 2026, 8:43 [IST]
English summary
Tata punch facelift variant wise features details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+