7 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಒಂದೊಳ್ಳೆ SUV ಖರೀದಿಸಬೇಕೆ? ಇವು ಟ್ರೆಂಡಿಂಗ್‌ನಲ್ಲಿವೆ...
ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಹೊಸ ಕಾರನ್ನು ಖರೀದಿಸುವ ಪ್ಲಾನ್ ಇದ್ದರೇ, ಈ ಲೇಖನ ನಿಮಗೆ ಬಹಳ ಉಪಯುಕ್ತವಾಗಬಹುದು. ಮಧ್ಯಮ ವರ್ಗದ ಕುಟುಂಬಕ್ಕೆ ವಿಶಾಲವಾದ ಕ್ಯಾಬಿನ್ ಅನ್ನು ನೀಡುವ ಎರಡು ಆಯ್ಕೆಗಳು ಲಭ್ಯವಿದೆ. ಕೇವಲ 6 ಲಕ್ಷ ರೂ. ಬಜೆಟ್ ಹೊಂದಿದ್ದರೆ, ಹೊಸ ಟಾಟಾ ಪಂಚ್ ಮತ್ತು ಹುಂಡೈ ಎಕ್ಸ್‌ಟರ್ ಕಾರುಗಳು ನಿಮಗೆ ಆಯ್ಕೆಯಲ್ಲಿ ಸಿಗುತ್ತವೆ. ಈ ಎರಡೂ ಕಾರುಗಳು ಕೇವಲ 6 ಲಕ್ಷ ರೂ. (ಎಕ್ಸ್ ಶೋರೂಂ) ಒಳಗಿನ ಬೆಲೆಯನ್ನು ಹೊಂದಿವೆ. ನಿಮ್ಮ ಕುಟುಂಬಕ್ಕೆ ಸೂಕ್ತವಾದದ್ದನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡಲು ಟಾಟಾ ಪಂಚ್ ಮತ್ತು ಎಕ್ಸ್‌ಟರ್ ಬೇಸ್ ವೇರಿಯೆಂಟ್‌ಗಳನ್ನು ಇಲ್ಲಿ ಹೋಲಿಕೆ ಮಾಡಿದ್ದೇವೆ.
ಬೆಲೆ ಹೋಲಿಕೆ: ಹೊಸ ಟಾಟಾ ಪಂಚ್ ಸ್ಮಾರ್ಟ್ ವೇರಿಯೆಂಟ್ ನಿಮಗೆ ರೂ. 5.59 (ಎಕ್ಸ್ ಶೋರೂಂ) ಲಕ್ಷವಿದ್ದರೇ, ಹುಂಡೈ ಎಕ್ಸ್‌ಟರ್ EX ಬೆಲೆ ರೂ. 5.64 (ಎಕ್ಸ್‌ಶೋರೂಂ)ಇದೆ. ಈ ಎರಡು SUV ಗಳ ನಡುವಿನ ಬೆಲೆ ವ್ಯತ್ಯಾಸವು ಕನಿಷ್ಠ ರೂ. 5,000 ಇದೆ. ಅಂದರೆ ಟಾಟಾ ಪಂಚ್ ಬೆಲೆಯು ಹ್ಯುಂಡೈ ಎಕ್ಸ್‌ಟರ್‌ಗಿಂತ ರೂ. 5,000 ಕಡಿಮೆ ಇದೆ. ಈ ಎರಡೂ ಕಾರುಗಳ ಆನ್-ರೋಡ್ ಬೆಲೆಗಳು ರೂ. 7 ಲಕ್ಷಕ್ಕಿಂತ ಕಡಿಮೆ ಇದೆ.

ಫೀಚರ್ಸ್ ಹೋಲಿಕೆ: ಹೊಸ ಪಂಚ್ ಸ್ಮಾರ್ಟ್ ವೇರಿಯೆಂಟ್ 6 ಏರ್‌ಬ್ಯಾಗ್‌ಗಳು, LED ಹೆಡ್‌ಲ್ಯಾಂಪ್‌ಗಳು, ಫ್ರಂಟ್ ಪವರ್ ವಿಂಡೋಗಳು, ಸೆಂಟ್ರಲ್ ಲಾಕಿಂಗ್, 10.61 - ಇಂಚಿನ ಡಿಜಿಟಲ್ ಡ್ರೈವರ್ ಇನ್ಫೋ ಕ್ಲಸ್ಟರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ನಂತಹ ಹೆಚ್ಚಿನ ಫೀಚರ್‌ಗಳನ್ನು ಒಳಗೊಂಡಿದೆ.
ಹೊಸ ಹುಂಡೈ ಎಕ್ಸ್‌ಟರ್ EX ವೇರಿಯೆಂಟ್ ಸೆಂಟ್ರಲ್ ಲಾಕಿಂಗ್, ಪವರ್ ಸ್ಟೀರಿಂಗ್, ಫ್ರಂಟ್ ಪವರ್ ವಿಂಡೋಗಳು, LED ಟೈಲ್‌ಲ್ಯಾಂಪ್‌ಗಳು, ಡಿಜಿಟಲ್ ಡ್ರೈವರ್ ಇನ್ಫೋ ಕ್ಲಸ್ಟರ್ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡಲಾಗುತ್ತದೆ. ಪಂಚ್ ಇತ್ತೀಚೆಗೆ ಹೊಸ ಅಪ್‌ಡೇಟ್‌ಗಳನ್ನು ಪಡೆದಿರುವುದರಿಂದ, ಎಕ್ಸ್‌ಟರ್‌ಗೆ ಹೋಲಿಸಿದರೆ ಕೆಲವು ಹೆಚ್ಚುವರಿ ಫೀಚರ್‌ಗಳನ್ನು ಹೊಂದಿದೆ.

ಎಂಜಿನ್ ಹೋಲಿಕೆ: ಎಂಜಿನ್ ಆಯ್ಕೆಗಳ ವಿಷಯಕ್ಕೆ ಬಂದರೆ, ಹ್ಯುಂಡೈ ಎಕ್ಸ್‌ಟರ್ 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಇದು 82 ಎಚ್‌ಪಿ ಪವರ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಯಾಗಿದೆ. ಮತ್ತೊಂದೆಡೆ, ಪಂಚ್ 1.2-ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 85.4 ಎಚ್‌ಪಿ ಪವರ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
ಸುರಕ್ಷತಾ ಹೋಲಿಕೆ: ಸುರಕ್ಷತೆಯ ವಿಷಯಕ್ಕೆ ಬಂದರೆ, ಹೊಸ ಪಂಚ್ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ, ಟಿಪಿಎಂಎಸ್ ಸೇರಿದಂತೆ ಹೆಚ್ಚಿನದನ್ನು ಪ್ರಮಾಣಿತ ಸುರಕ್ಷತಾ ವೈಶಿಷ್ಟ್ಯಗಳಾಗಿ ನೀಡುತ್ತದೆ. ಹಾಗೆಯೇ ಪಂಚ್ ಭಾರತ್ ಎನ್‌ಸಿಎಪಿಯಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್‌ಪಡೆದಿದೆ. ಗುಣಮಟ್ಟದಲ್ಲಿ ಎಲ್ಲಾ ಟಾಟಾ ಕಾರುಗಳಂತೆಯೇ ಉತ್ತಮವೆನಿಸಿಕೊಂಡಿದೆ.

ಹುಂಡೈ ಎಕ್ಸ್‌ಟರ್ ವಿಷಯಕ್ಕೆ ಬಂದರೆ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ, ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್, ಅನ್‌ಲಾಕ್, ಕೀಲೆಸ್ ಎಂಟ್ರಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 26 ಸುರಕ್ಷತಾ ವೈಶಿಷ್ಟ್ಯಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಒಟ್ಟಾರೆ ಸುರಕ್ಷತೆ ವಿಷಯದಲ್ಲಿ ಪಂಚ್ ಕಾರು ಎಕ್ಸ್‌ಟರ್‌ಗಿಂತ ಒಂದು ಹೆಜ್ಜೆ ಮುಂದಿದೆ, ಏಕೆಂದರೆ ಎಕ್ಸ್‌ಟರ್ ಕಾರು ಇನ್ನೂ ಕ್ರ್ಯಾಶ್ ಸುರಕ್ಷತಾ ರೇಟಿಂಗ್ ಪಡೆದಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








