TATA: ಸದ್ದಿಲ್ಲದೇ ಮತ್ತೊಂದು ಹೊಸ ಕಾರಿನ ಬಿಡುಗಡೆಗೆ ಟಾಟಾ ತಯಾರಿ.. ಬೆಲೆ ಎಷ್ಟು, ವಿಶೇಷತೆಗಳೇನು?

2026 'ಟಾಟಾ ಮೋಟಾರ್ಸ್'ಗೆ ಮಹತ್ವದ ವರ್ಷವಾಗಿದೆ. ಈ ಜನವರಿಯಲ್ಲಿ ಸಫಾರಿ ಪೆಟ್ರೋಲ್, ಹ್ಯಾರಿಯರ್ ಪೆಟ್ರೋಲ್ ಹಾಗೂ ಪಂಚ್ ಫೇಸ್‌ಲಿಫ್ಟ್ ಎಸ್‌ಯುವಿಗಳನ್ನು ಮಾರಾಟಕ್ಕೆ ತಂದಿದೆ. ಇದೀಗ, ಮತ್ತೊಂದು ಹೊಸ ಕಾರಿನ ಬಿಡುಗಡೆಗೆ 'ಟಾಟಾ' ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಅತಿ ಶೀಘ್ರದಲ್ಲೇ ಹೊಚ್ಚ ಹೊಸ 'ಸಿಯೆರಾ ಇವಿ'ಯೂ ಬಿಡುಗಡೆಗೊಳ್ಳಲಿದೆ. ನೂತನ ಎಲೆಕ್ಟ್ರಿಕ್ ಎಸ್‌ಯುವಿ ಬರುವಿಕೆಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ.

ಬೆಲೆ (Price):

ಹೊಸ ಟಾಟಾ ಸಿಯೆರಾ ಇವಿ (Tata Sierra EV), ಈ ವರ್ಷದ ಮಾರ್ಚ್ ಅಂತ್ಯದೊಳಗೆ ಮಾರಾಟಕ್ಕೆ ಬರಲಿದೆ. ಸದ್ಯಕ್ಕೆ ಈ ಬಗ್ಗೆ ಯಾವುದೇ ಖಚಿತ ವಿವರಗಳು ಲಭ್ಯವಾಗಿಲ್ಲ. ಇದು ರೂ.20 ಲಕ್ಷದಿಂದ ರೂ.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

Tata Sierra Electric Suv Launch Soon Details

ವಿನ್ಯಾಸ & ಬಣ್ಣಗಳು (Design & Colors):

ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿರಲಿದ್ದು, ಸ್ಟ್ಯಾಂಡರ್ಡ್ 'ಸಿಯೆರಾ'ದ ತದ್ರೂಪ ಎಂದು ಹೇಳಬಹುದು. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಫಾಗ್ ಲೈಟ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಪಡೆದಿರಲಿದೆ. ಯೆಲ್ಲೋ, ರೆಡ್, ಸಿಲ್ವರ್, ಗ್ರೀನ್, ಮಿಂಟಲ್ ಗ್ರೇ ಮತ್ತು ಪ್ರಿಸ್ಟೀನ್ ವೈಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯಲಿದೆ.

ಸುತ್ತಳತೆ (Dimensions):

ನೂತನ 'ಸಿಯೆರಾ ಇವಿ'ಯೂ ಹೆಚ್ಚು ವಿಶಾಲವಾಗಿರಲಿದೆ. ಬಹುಮುಖ್ಯವಾಗಿ ಗಾತ್ರದಲ್ಲೂ ಮಾರ್ಪಾಡುಗಳಿರುವುದಿಲ್ಲ. 4,340 ಮಿ.ಮೀ ಉದ್ದ, 1,841 ಮಿ.ಮೀ ಅಗಲ ಮತ್ತು 1,715 ಮಿ.ಮೀ ಎತ್ತರವಿರಲಿದೆ. 205 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,730 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿರಲಿದೆ.

ಆಸನ ಆಯ್ಕೆ & ಬೂಟ್ ಸ್ಪೇಸ್ (Seating Capacity & Boot Space):

ಇದು 5 ಆಸನಗಳನ್ನು ಒಳಗೊಂಡಿರಲಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 622 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿರುವ ನಿರೀಕ್ಷೆಯಿದೆ.

ಕಾರ್ಯಕ್ಷಮತೆ (Performance):

ಈ ಕಾರು ಎಲೆಕ್ಟ್ರಿಕ್ ಎಸ್‌ಯುವಿಯಾಗಿದ್ದು, ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿರಬಹುದು. 65 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 75 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿರಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 538 ರಿಂದ 627 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡಬಹುದು ಎನ್ನಲಾಗಿದೆ.

ವೈಶಿಷ್ಟ್ಯಗಳು (Features):

ನೂತನ 'ಸಿಯೆರಾ ಇವಿ' ವೈಶಿಷ್ಟ್ಯದಲ್ಲೂ ಪ್ರಮುಖ ಬದಲಾವಣಿಗಳಿರುವುದಿಲ್ಲ. ಈಗಿರುವ 'ಸಿಯೆರಾ'ದಂತೆಯೇ ಟ್ರಿಪಲ್ ಸ್ಕ್ರೀನ್ ಸೆಟಪ್ (ಡಿಜಿಟಲ್ ಡ್ರೈವರ್ ಡಿಸ್​ಪ್ಲೇ, ಟಚ್‌ಸ್ಕ್ರೀನ್ ಸೆಂಟ್ರಲ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಪ್ಯಾಸೆಂಜರ್ ಸೈಡ್ ಡಿಸ್​ಪ್ಲೇ), ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್ ಸಿಸ್ಟಮ್‌ ಮತ್ತು 12 ಸ್ಪೀಕರ್ ಬಿಜಿಎಲ್ ಸೌಂಡ್ ಸಿಸ್ಟಮ್‌ನ್ನು ಪಡೆದಿರಲಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಹೊಂದಿರಲಿದೆ.

ಪ್ರತಿಸ್ಪರ್ಧಿ ಕಾರುಗಳು (Rival Cars):

ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಮಾರುತಿ ಸುಜುಕಿ ಇ ವಿಟಾರಾ (Maruti Suzuki e Vitara), ವಿನ್‌ಫಾಸ್ಟ್ ವಿಎಫ್6 (VinFast VF6) ಹಾಗೂ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric) ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಲಿವೆ.

More from DriveSpark

Article Published On: Friday, January 16, 2026, 8:30 [IST]
English summary
Tata sierra electric suv launch soon details
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+