2026ರ ಫೆಬ್ರವರಿ ಹ್ಯಾಚ್‌ಬ್ಯಾಕ್‌ ಸೇಲ್ಸ್: ವ್ಯಾಗನ್ಆರ್ 1st.. ಸ್ವಿಫ್ಟ್ ಸೆಕೆಂಡ್.. ಇಲ್ಲಿದೆ ಪುಲ್ ಡೀಟೇಲ್ಸ್

ಭಾರತದಲ್ಲಿ ಎಸ್‌ಯುವಿ & ಎಂಪಿವಿಗಳಿಗೆ ವಿಪರೀತವಾದ ಬೇಡಿಕೆಯಿದೆ. ಆದರೂ ಇವುಗಳಿಗೆ ಹ್ಯಾಚ್‌ಬ್ಯಾಕ್‌ಗಳು ತೀವ್ರ ಸ್ಪರ್ಧೆಯೊಡ್ಡುತ್ತಿವೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಇದೇ 2026ರ ಫೆಬ್ರವರಿಯಲ್ಲಿ ದೇಶೀಯವಾಗಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಹ್ಯಾಚ್‌ಬ್ಯಾಕ್‌ಗಳ ಪಟ್ಟಿ ಪ್ರಕಟಗೊಂಡಿದೆ. ಈ ವಿಭಾಗದಲ್ಲಿ ಮಾರುತಿ ಸುಜುಕಿಯು ಪ್ರಾಬಲ್ಯ ಸಾಧಿಸಿದ್ದು, ಟಾಟಾ ಹಾಗೂ ಹ್ಯುಂಡೈಗೆ ಸೇರಿದ ಕಾರುಗಳಿಗೂ ಖರೀದಿದಾರರು ಮನಸೊತ್ತಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR):

ಇದು ಪ್ರಖ್ಯಾತ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಸಿಯಾಗಿದೆ. ಮೊದಲ ಸ್ಥಾನದಲ್ಲಿದೆ. ಈ ಫೆಬ್ರವರಿ ತಿಂಗಳಲ್ಲಿ ಒಟ್ಟು 14,885 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2025ರ ಇದೇ ಅವಧಿಯಲ್ಲಿ 19,879 ಯುನಿಟ್‌ಗಳನ್ನು ಮಾರಲಾಗಿತ್ತು. ಆದರೂ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -25% ಕುಸಿತವಾಗಿದೆ. ನೂತನ 'ವ್ಯಾಗನ್ಆರ್' ರೂ.4.99 ಲಕ್ಷದಿಂದ ರೂ.6.95 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Top 10 Hatchbacks February 2026 Sales WagonR Swift Baleno Alto Tiago i20 To Ignis

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift):

ಈ ಕಾರನ್ನು ಗ್ರಾಹಕರು ಮೆಚ್ಚಿಕೊಂಡಿದ್ದು, ಎರಡನೇ ಸ್ಥಾನದಲ್ಲಿದೆ. ಇದೇ 2026ರ ಫೆಬ್ರವರಿಯಲ್ಲಿ ಸರಿ ಸುಮಾರು 14,833 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2025ರ ಫೆಬ್ರವರಿ ತಿಂಗಳಲ್ಲಿ ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -9% ಇಳಿಕೆಯಾಗಿದೆ. ಹೊಸ 'ಸ್ವಿಫ್ಟ್' ರೂ.5.79 ಲಕ್ಷದಿಂದ ರೂ.8.80 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಬಲೆನೊ (Maruti Suzuki Baleno):

ಇದೊಂದು ಜನಪ್ರಿಯ ಹ್ಯಾಚ್‌ಬ್ಯಾಕ್‌ ಆಗಿದೆ. ಮೂರನೇ ಸ್ಥಾನದಲ್ಲಿದೆ. ಈ ಫೆಬ್ರವರಿಯಲ್ಲಿ ಬರೋಬ್ಬರಿ 14,632 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2025ರ ಇದೇ ಅವಧಿಯಲ್ಲಿ 15,480 ಯುನಿಟ್‌ಗಳನ್ನು ಮಾರಲಾಗಿತ್ತು. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -5% ಕಡಿಮೆಯಾಗಿದೆ. ನೂತನ 'ಬಲೆನೊ' ರೂ.5.99 ಲಕ್ಷದಿಂದ ರೂ.9.10 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Top 10 Hatchbacks February 2026 Sales WagonR Swift Baleno Alto Tiago i20 To Ignis

ಮಾರುತಿ ಸುಜುಕಿ ಆಲ್ಟೋ ಕೆ10 (Maruti Suzuki Alto K10):

ಈ ಹ್ಯಾಚ್‌ಬ್ಯಾಕ್‌ನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿದೆ. ಇದೇ ಫೆಬ್ರವರಿಯಲ್ಲಿ ಒಟ್ಟು 9,787 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2025ರ ಫೆಬ್ರವರಿ ತಿಂಗಳಲ್ಲಿ 8,541 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 15% ಪ್ರಗತಿಯಾಗಿದೆ. ಹೊಸ 'ಆಲ್ಟೋ' ರೂ.3.70 ಲಕ್ಷದಿಂದ ರೂ.5.45 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ.

ಟಾಟಾ ಟಿಯಾಗೊ/ ಇವಿ (Tata Tiago/ EV):

ಇದು ನಂಬಿಕಾರ್ಹ ಕಾರಾಗಿದ್ದು, ಐದನೇ ಸ್ಥಾನದಲ್ಲಿದೆ. ಈ 2026ರ ಫೆಬ್ರವರಿಯಲ್ಲಿ ಸರಿ ಸುಮಾರು 7,040 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2025ರ ಇದೇ ಅವಧಿಯಲ್ಲಿ 6,954 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿ - ಸಂಖ್ಯೆಯನ್ನು ವಿಶ್ಲೇಷಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷ ಶೇಕಡ 1% ಬೆಳವಣಿಗೆಯಾಗಿದೆ. ಸ್ಟ್ಯಾಂಡರ್ಡ್ 'ಟಿಯಾಗೊ' ರೂ.4.57 ಲಕ್ಷದಿಂದ ರೂ.7.82 ಲಕ್ಷ ಮತ್ತು 'ಟಿಯಾಗೊ ಇವಿ' ರೂ.7.99 ಲಕ್ಷದಿಂದ ರೂ.11.14 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

Top 10 Hatchbacks February 2026 Sales WagonR Swift Baleno Alto Tiago i20 To Ignis

ಹ್ಯುಂಡೈ ಐ20 (Hyundai i20):

ಈ ಜನಪ್ರಿಯ ಹ್ಯಾಚ್‌ಬ್ಯಾಕ್‌ ಎಂದೇ ಹೆಸರುವಾಗಿದೆ. ಆರನೇ ಸ್ಥಾನದಲ್ಲಿದೆ. ಇದೇ ಫೆಬ್ರವರಿಯಲ್ಲಿ ಬರೋಬ್ಬರಿ 5,852 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2025ರ ಫೆಬ್ರವರಿ ತಿಂಗಳಲ್ಲಿ 3,627 ಯುನಿಟ್‌ಗಳನ್ನು ಮಾರಲಾಗಿತ್ತು. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 61% ಅಭಿವೃದ್ಧಿಯಾಗಿದೆ. ನೂತನ 'ಐ20' ರೂ.5.99 ಲಕ್ಷದಿಂದ ರೂ.11.53 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ.

Top 10 Hatchbacks February 2026 Sales WagonR Swift Baleno Alto Tiago i20 To Ignis

ಇನ್ನು, ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಏಳನೇ ಸ್ಥಾನದಲ್ಲಿದೆ. ಒಟ್ಟು 5,589 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. ಎಂಟನೇ ಸ್ಥಾನದಲ್ಲಿ ಟೊಯೊಟಾ ಗ್ಲಾನ್ಜಾ (3,212 ಯುನಿಟ್), ಒಂಬತ್ತನೇ ಸ್ಥಾನದಲ್ಲಿ ಟಾಟಾ ಆಲ್ಟ್ರೋಜ್ (2,063 ಯುನಿಟ್) ಹಾಗೂ ಹತ್ತನೇ ಸ್ಥಾನದಲ್ಲಿ ಮಾರುತಿ ಸುಜುಕಿ ಇಗ್ನಿಸ್ (1,848 ಯುನಿಟ್) ಇದೆ.

More from DriveSpark

Article Published On: Monday, March 16, 2026, 15:44 [IST]
English summary
Top 10 hatchbacks february 2026 sales wagonr swift baleno alto tiago i20 to ignis
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+