Toyota: ಟೊಯೋಟಾ ಹೈಬ್ರಿಡ್ ಕಾರು: 27+ ಕಿ.ಮೀ ಮೈಲೇಜ್: ಬೆಲೆಯೆಷ್ಟು, ವಿಶೇಷತೆಗಳೇನು?
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೋಟಾ (Toyota), ಭಾರತದಲ್ಲಿ ತನ್ನ ಹಲವು ಜನಪ್ರಿಯ ಮಾಡಲ್‌ಗಳಿಂದ ಖ್ಯಾತಿ ಪಡೆದಿದೆ. ಅದರಲ್ಲಿ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Urban Cruiser Hyryder) ಕೂಡ ಒಂದು. 2022 ರಲ್ಲಿ ಬಿಡುಗಡೆಯಾದಾಗಿನಿಂದ, ಅರ್ಬನ್ ಕ್ರೂಸರ್ ಹೈರೈಡರ್ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೈಬ್ರಿಡ್ ಎಂಜಿನ್, ಆಕರ್ಷಕ ಫೀಚರ್ಸ್, ಅತ್ಯುತ್ತಮ ಡಿಸೈನ್‌ನೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟ ಕಾಣುವ ಬೆಸ್ಟ್ ಎಸ್‌ಯುವಿಯಾಗಿ ಮುಂದುವರಿಯುತ್ತಿದೆ. ಈ ಎಸ್‌ಯುವಿಯ ವಿಶೇಷತೆಗಳನ್ನು ನೋಡೋಣ.
ಟೊಯೋಟಾ ಹೈರೈಡರ್ ಬೆಲೆ ಮತ್ತು ವಿಶೇಷತೆ
ಭಾರತದಲ್ಲಿ ಹೊಸ ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆ ರೂ. 10.94 ಲಕ್ಷ (ಎಕ್ಸ್ - ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಈ ಕಾರಿನ ನಿಯೋ ಡ್ರೈವ್ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು 2WD ಮತ್ತು 4WD ಸೇರಿದಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದರ ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಬರೋಬ್ಬರಿ 27.97 ಕಿ.ಮೀ ಮೈಲೇಜ್ ನೀಡುತ್ತದೆ.

ಅರ್ಬನ್ ಕ್ರೂಸರ್ ಹೈರೈಡರ್ ಕ್ರಿಸ್ಟಲ್ ಅಕ್ರಿಲಿಕ್ ಗ್ರಿಲ್, ಸಿಗ್ನೇಚರ್ ಟ್ವಿನ್ LED DRLಗಳು, ಸ್ಪೋರ್ಟಿ ಬಾಡಿ ಲೈನ್‌ಗಳು ಮತ್ತು 17-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಪ್ರತ್ಯೇಕತೆ ಮತ್ತು ಆಧುನಿಕ ಸೌಕರ್ಯವನ್ನು ಬಯಸುವ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ಸಂಸ್ಕರಿಸಿದ ವಿವರಗಳೊಂದಿಗೆ ದಿಟ್ಟ ಡಿಸೈನ್ ನೊಂದಿಗೆ ಬರುವ ಈ ಕಾರು, B-SUV ಸೆಗ್ಮೆಂಟಿನಲ್ಲಿ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವಾಗಿ ಎದ್ದು ಕಾಣುತ್ತದೆ.
ಇಂಟೀರಿಯರ್‌ನಲ್ಲಿ ವೈರ್‌ಲೆಸ್ ಚಾರ್ಜಿಂಗ್, USB ಚಾರ್ಜಿಂಗ್ ಮತ್ತು 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 9-ಇಂಚಿನ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಲೆದರ್ ಸೀಟುಗಳು, ಪನೋರಮಿಕ್ ಸನ್‌ರೂಫ್ ಹೊಂದಿದೆ. 2022 ರಲ್ಲಿ ಬಿಡುಗಡೆಯಾದಾಗಿನಿಂದ ಇಲ್ಲಿಯವರೆಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಬಂದಿದ್ದು, ಇತ್ತೀಚೆಗೆ ಬರೋಬ್ಬರಿ 2,00,000 ಯುನಿಟ್ ಕಾರುಗಳ ಮಾರಾಟವನ್ನು ದಾಟಿದೆ.

ಹೊಸ ಕ್ಯೂರೇಟೆಡ್ ಪ್ಯಾಕ್ ಪರಿಚಯ
ಟೊಯೋಟಾ ಇತ್ತೀಚೆಗಷ್ಟೆ ಅರ್ಬನ್ ಕ್ರೂಸರ್ ಹೈರೈಡರ್‌ಗಾಗಿ ಕ್ಯುರೇಟೆಡ್ ಟೆಕ್ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಎಲ್ಲಾ ಅರ್ಬನ್ ಕ್ರೂಸರ್ ಹೈರೈಡರ್ ವೇರಿಯೆಂಟ್‌ಗಳಲ್ಲಿ ಈ ಪ್ಯಾಕೇಜ್ ಸಿಗಲಿದ್ದು, ಇದರಲ್ಲಿ ಅಕ್ಸೆಸೊರಿಗಳನ್ನು ದೇಶಾದ್ಯಂತ ಎಲ್ಲಾ ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ರೂ. 29,499 ಬೆಲೆಯಲ್ಲಿ ನೀಡಲಾಗುತ್ತಿದೆ. ಈ ಪ್ಯಾಕೇಜ್ ಅಡಿಯಲ್ಲಿ ಏನೆಲ್ಲಾ ಸಿಗಲಿದೆ ಎಂಬುದನ್ನು ಕೆಳಗೆ ನೋಡೋಣ.
ಡಿಜಿಟಲ್ ವಿಡಿಯೋ ರೆಕಾರ್ಡರ್/ಕಾರ್ ಡ್ಯಾಶ್ ಕ್ಯಾಮೆರಾ: ಪ್ರತಿ ಪ್ರಯಾಣವನ್ನು ಸೆರೆಹಿಡಿಯಲು ಹಾಗೂ ನಿರಂತರ ರೆಕಾರ್ಡಿಂಗ್ ಮೂಲಕ ಸುರಕ್ಷತೆಯನ್ನು ಹೆಚ್ಚಿಸಲು ಡಿಜಿಟಲ್ ವಿಡಿಯೋ ರೆಕಾರ್ಡರ್/ಕಾರ್ ಡ್ಯಾಶ್ ಕ್ಯಾಮೆರಾ ಒದಗಿಸಲಾಗಿದೆ.
ಆಂಬಿಯೆಂಟ್ ಲೈಟಿಂಗ್: ಸೂಕ್ಷ್ಮ ಮತ್ತು ಕಸ್ಟಮೈಸೇಷನ್ ಮಾಡಬಹುದಾದ ಕ್ಯಾಬಿನ್ ಅನ್ನು ಪಡೆಯಲು ಆಂಬಿಯೆಂಟ್ ಲೈಟಿಂಗ್ ನೀಡಲಾಗಿದೆ. ಇದು ಹೆಚ್ಚು ಸಂಸ್ಕರಿಸಿದ ಮತ್ತು ವಿಶ್ರಾಂತಿ ಚಾಲನಾ ಅನುಭವಕ್ಕಾಗಿ ಒಳಾಂಗಣ ವಾತಾವರಣವನ್ನು ಬದಲಿಸುತ್ತದೆ.
ಹೆಡ್ಸ್- ಅಪ್ -ಡಿಸ್ಪ್ಲೇ: ಪ್ರಮುಖ ವಾಹನ ಮಾಹಿತಿಯನ್ನು ನೀಡಲು HUD ಡಿಸ್ಪ್ಲೇ ನೀಡಲಾಗಿದೆ, ಆನ್ - ರೋಡ್ ಸುರಕ್ಷತೆ ಹೆಚ್ಚಿಸುತ್ತದೆ.

ಒಟ್ಟಾರೆ ಇದು ದೈನಂದಿನ ಚಾಲನಾ ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಟೆಕ್ ಪ್ಯಾಕೇಜ್ ಆಗಿದ್ದು, ಪ್ರತಿ ಪ್ರಯಾಣವನ್ನು ಸುರಕ್ಷಿತ, ಹೆಚ್ಚು ಸಂಪರ್ಕಿತ ಮತ್ತು ವಿಶಿಷ್ಟ ಪ್ರೀಮಿಯಂ ಸ್ಮಾರ್ಟ್, ಅರ್ಥಗರ್ಭಿತ ತಂತ್ರಜ್ಞಾನಗಳನ್ನು ಒಟ್ಟುಗೂಡಿಸುತ್ತದೆ. ಚಾಲಕನಿಗೆ ಉತ್ತಮ ಪ್ರಯಾಣ ಅನುಭವ ನೀಡುವಲ್ಲಿ ಸಹಕರಿಸುತ್ತದೆ ಎಂದು ಟೊಯೋಟಾ ತಿಳಿಸಿದೆ.
ಕಂಪನಿಯು ಈ ಕಾರಿಗಾಗಿ 66 ಸ್ಪೆಷಲ್ ಅಕ್ಸೆಸೊರಿಗಳು, ಸಮಗ್ರ 3-ವರ್ಷ/1,00,000 ಕಿ.ಮೀ ವಾರೆಂಟಿ (5 ವರ್ಷಗಳು/2,20,000 ಕಿ.ಮೀವರೆಗೆ ವಿಸ್ತರಿಸಬಹುದು) ಮತ್ತು ಉದ್ಯಮ-ಪ್ರಮುಖ 8-ವರ್ಷ/1,60,000 ಕಿ.ಮೀ ಹೈಬ್ರಿಡ್ ಬ್ಯಾಟರಿ ವಾರೆಂಟಿಯೊಂದಿಗೆ ಬರುತ್ತದೆ. ಇದು ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ, ದೀರ್ಘಾವಧಿಯ ವಿಶ್ವಾಸಾರ್ಹತೆ ಮತ್ತು ಸಂಪೂರ್ಣ ಮನಸ್ಸಿನ ಶಾಂತಿಯನ್ನು ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.


Click it and Unblock the Notifications








