TVS: ಬಡವರು ಹಣ ಗಳಿಸಿಲು ಬೈಕ್ ಬೆಲೆಯಲ್ಲಿ ಕಾರ್ಗೋ ವಾಹನ ಬಿಡುಗಡೆ ಮಾಡಿದ ಟಿವಿಎಸ್

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಭಾರತದ ಟಿವಿಎಸ್ ಮೋಟಾರ್ (TVS Motor) ಕಂಪನಿ, ಇಂದು ಟಿವಿಎಸ್ ಕಿಂಗ್ ಕಾರ್ಗೋ ಎಚ್‌ಡಿ ಸಿಎನ್‌ಜಿ (TVS King Cargo HD CNG) ತ್ರಿ-ಚಕ್ರ ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡಿದೆ. ಈ ವಾಹನವು ದೆಹಲಿ NCR, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶಗಳಲ್ಲಿ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಟಿವಿಎಸ್ ಕಿಂಗ್ ಕಾರ್ಗೋ HD CNG ರೂ. 2,70,648 (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಟಿವಿಎಸ್ ಕಿಂಗ್ ಕಾರ್ಗೋ HD CNG ತುಂಬಾ ಕಡಿಮೆ ಬೆಲೆಗೆ ಬಿಡುಗಡೆಯಾಗಿದ್ದು, ಪ್ರಸ್ತುತ ಒಂದು ರಾಯಲ್‌ ಎನ್‌ಫೀಲ್ಡ್ ಜಿಟಿ ಬೈಕ್ ಆರಂಭಿಕ ಬೆಲೆಯೇ 3.5 (ಎಕ್ಸ್-ಶೋರೂಂ) ಲಕ್ಷವಿದೆ. ಹಾಗಾಗಿ ಹೊಸ ಟಿವಿಎಸ್ ಕಿಂಗ್ ಕಾರ್ಗೋ HD CNG ವಾಹನವನ್ನು EMI ನಲ್ಲಿ ಬಡವರು ಕೂಡ ಖರೀದಿಸಿ ವಾಣಿಜ್ಯ ಬಳಕೆಯಲ್ಲಿ ಉತ್ತಮ ಲಾಭ ಗಳಿಸಬಹುದಾಗಿದೆ. ಅಲ್ಲದೆ ವಾಹನದ ಮೇಲೆ 3-ವರ್ಷ ವಾರೆಂಟಿ ನೀಡುತ್ತಿರುವುದಾಗಿ ಟಿವಿಎಸ್ ಹೇಳಿದೆ.

tvs-launched-new-king-kargo-hd-cng-in-india

ಅಲ್ಲದೇ ಹೊಸ ಟಿವಿಎಸ್ ಕಿಂಗ್ ಕಾರ್ಗೋ ಸಿಎನ್‌ಜಿ ವಾಹನ ಆಗಿರುವುದರಿಂದ ಉತ್ತಮ ಮೈಲೇಜ್ ಕೂಡ ನೀಡಲಿದೆ. ಹೊಸ ಟಿವಿಎಸ್ ಕಿಂಗ್ ಕಾರ್ಗೋ 301.1 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್‌ ಹೊಂದಿದ್ದು, 9.1 kW ಪವರ್ ಮತ್ತು 22.4 Nm ಟಾರ್ಕ್ ಉತ್ಪಾದಿಸುತ್ತದೆ. ಭಾರೀ ಲಗ್ಗೇಜ್ ಇದ್ದರೂ ವಿಶ್ವಾಸಾರ್ಹ ಪರ್ಫಾಮೆನ್ಸ್ ನೀಡುತ್ತದೆ. ನಗರ, ಅರೆ-ನಗರ ಮಾರುಕಟ್ಟೆಗಳಲ್ಲಿ ಸರಕು ಕಾರ್ಯಾಚರಣೆಗಳಿಗೆ ಸೂಕ್ತವಾಗಿರುತ್ತದೆ.

ಟಿವಿಎಸ್ ಕಿಂಗ್ ಕಾರ್ಗೋ HD CNG ಫೀಚರ್ಸ್

ಹೆಚ್ಚಿನ ಹೊರೆ ಸಾಗಿಸುವ ಸಾಮರ್ಥ್ಯಕ್ಕಾಗಿ ವಿಭಾಗದಲ್ಲಿಯೇ ಅತ್ಯುತ್ತಮವಾದ 6.6 ಅಡಿ ಲೋಡ್ ಡೆಕ್, ಸುಧಾರಿತ ಇನ್-ಕ್ಯಾಬಿನ್ ಸೌಕರ್ಯಕ್ಕಾಗಿ ಉದ್ಯಮದಲ್ಲಿಯೇ ಮೊದಲ ಬಾರಿಗೆ ಸಂಪೂರ್ಣವಾಗಿ ರೋಲಿಂಗ್ ವಿಂಡೋಗಳು, ಗ್ರೇಡಬಿಲಿಟಿ, ಮೈಲೇಜ್ ಮತ್ತು ಲೋಡ್ ಅಡಿಯಲ್ಲಿ ಚಾಲನೆಯ ಸುಲಭತೆಯನ್ನು ಹೆಚ್ಚಿಸುವ ಪವರ್ ಗೇರ್ ನೀಡಲಾಗಿದ್ದು, ದಟ್ಟಣೆಯ ಸಿಟಿ ಟ್ರಾಫಿಕ್ ಪರಿಸ್ಥಿತಿಗಳಲ್ಲಿಯೂ ಕಾರ್ಗೋ ಕಾರ್ಯಾಚರಣೆಗಳನ್ನು ಸುಲಭವಾಗಿ ನಿರ್ವಹಿಸಬಲ್ಲದು.

tvs-launched-new-king-kargo-hd-cng-in-india

ಬಾಳಿಕೆ ಮತ್ತು ಸೌಕರ್ಯ: ಬಾಳಿಕೆ ಮತ್ತು ಕಾರ್ಯಾಚರಣೆಯ ಸುಲಭತೆಗಾಗಿ ನಿರ್ಮಿಸಲಾದ ಈ ವಾಹನವು ದೃಢವಾದ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ. ಇದು 62 ಕಿ.ಮೀ ಟಾಪ್ ಸ್ಪೀಡ್, 235 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 3,420 ಮಿ.ಮೀ ಟರ್ನಿಂಗ್ ರೇಡಿಯಸ್‌ನೊಂದಿಗೆ ಉನ್ನತ ದರ್ಜೆಯ ಕ್ಯಾಬಿನ್ ಒಳಗೊಂಡಿದೆ. ವಾಹನದ ಮೇಲೆ 3-ವರ್ಷ ಅಥವಾ 1.5 ಲಕ್ಷ (ಯಾವುದು ಮೊದಲೋ ಅದು) ಕಿ.ಮೀವರೆಗೆ ವಾರಂಟಿ ನೀಡಲಾಗಿದೆ.

ಸೇವಾ ಟಚ್‌ಪಾಯಿಂಟ್‌ಗಳು

ವಾಹನವು ಅಧಿಕೃತ ಮುಖ್ಯ ಡೀಲರ್‌ಗಳು, ಶಾಖೆಗಳು, ಡೀಲರ್‌ಶಿಪ್‌ಗಳು ಮತ್ತು ಸರ್ವಿಸ್ ಸೆಂಟರ್‌ಗಳಲ್ಲಿ 470 ಕ್ಕೂ ಹೆಚ್ಚು ಸರ್ವಿಸ್‌ ಟಚ್‌ಪಾಯಿಂಟ್‌ಗಳನ್ನು ಒಳಗೊಂಡಿರುವ ದೃಢವಾದ ಸೇವಾ ಪರಿಸರ ವ್ಯವಸ್ಥೆಯಿಂದ ಬೆಂಬಲಿತವಾಗಿದೆ. ಜೊತೆಗೆ 3 ವರ್ಷಗಳ ರಸ್ತೆಬದಿಯ ಸಹಾಯ (Roadside assistance) ವನ್ನು ನೀಡಲಾಗುತ್ತದೆ. ಖಾಸಗಿ ಗ್ಯಾರೇಜ್ ಮೆಕ್ಯಾನಿಕ್‌ಗಳಿಗೆ ಸುಸ್ಥಾಪಿತವಾದ ದ್ವಿತೀಯ ಬೆಂಬಲ ಜಾಲದಿಂದ ಇದು ಮತ್ತಷ್ಟು ಬಲಗೊಂಡಿದೆ ಎಂದು ಟಿವಿಎಸ್ ತಿಳಿಸಿದೆ.

tvs-launched-new-king-kargo-hd-cng-in-india

ಟಿವಿಎಸ್ ಕಿಂಗ್ ಕಾರ್ಗೋ ಬಿಡುಗಡೆಯೊಂದಿಗೆ, ಟಿವಿಎಸ್ ಮೋಟಾರ್ ಕಂಪನಿಯು ಗ್ರಾಹಕರ ಜೀವನೋಪಾಯವನ್ನು ಬೆಂಬಲಿಸುವ ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಭವಿಷ್ಯಕ್ಕೆ ಸಿದ್ಧವಾದ ವಾಹನಗಳನ್ನು ನೀಡುವುದನ್ನು ಮುಂದುವರೆಸಿದೆ. ಇದು 'ಕಡಿಮೆ ದಣಿವು. ಹೆಚ್ಚಿನ ಆದಾಯ' ('ಥಕಾನ್ ಕಾಮ್. ಕಮೈ ಜ್ಯಾದಾ') ಎಂಬ ತನ್ನ ಬ್ರ್ಯಾಂಡ್ ಭರವಸೆಗೆ ಅನುಗುಣವಾಗಿದೆ ಎಂದು ಟಿವಿಎಸ್ ಹೇಳಿದೆ.

ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಿವಿಎಸ್ ವಾಣಿಜ್ಯ ವ್ಯವಹಾರ ಮುಖ್ಯಸ್ಥ ರಜತ್ ಗುಪ್ತಾ, "ಟಿವಿಎಸ್ ಕಿಂಗ್ ಕಾರ್ಗೋ ಎಚ್‌ಡಿ ಸಿಎನ್‌ಜಿಯನ್ನು ಕೊನೆಯ ಮೈಲಿ ಸರಕು ನಿರ್ವಾಹಕರ ನೈಜ-ಪ್ರಪಂಚದ ಅಗತ್ಯಗಳನ್ನು ಪೂರೈಸಲು ಅಭಿವೃದ್ಧಿಪಡಿಸಲಾಗಿದೆ. ವಿಭಾಗ-ಮೊದಲ ವೈಶಿಷ್ಟ್ಯಗಳು, ಹೆಚ್ಚಿನ ಲೋಡ್ ಸಾಮರ್ಥ್ಯ ಮತ್ತು ಚಾಲಕ ಸೌಕರ್ಯದ ಮೇಲೆ ಕೇಂದ್ರೀಕರಿಸಿ, ಇದು ಗ್ರಾಹಕರಿಗೆ ಆಯಾಸ ಮತ್ತು ಮಾಲೀಕತ್ವದ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುತ್ತದೆ" ಎಂದರು.

More from DriveSpark

Article Published On: Thursday, February 5, 2026, 19:00 [IST]
English summary
Tvs launched new king kargo hd cng in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+