VinFast: ಭಾರತೀಯರಿಗೆ ಬೇಕಾಗಿರೋದು ಇಷ್ಟೇನಾ? ಬೆಸ್ಟ್ 7-ಸೀಟರ್ ಕೊಡಲು ನಾವು ರೆಡಿ! ಹೊಸ ಬ್ರಾಂಡ್ ಜೋರು...
ವಿಯೆಟ್ನಾಂ ಮೂಲದ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ವಿನ್‌ಫಾಸ್ಟ್ (VinFast), ಭಾರತದಲ್ಲಿ ತನ್ನ ಹೊಸ ಮಾಡಲ್‌ಗಳಾದ ವಿನ್‌ಫಾಸ್ಟ್ VF6 ಮತ್ತು VF7 ಕಾರುಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ದೇಶದಲ್ಲಿ ಈ ಕಾರುಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಇದೀಗ ಕಂಪನಿಯ ಸಿಇಒ 'ತಪನ್ ಘೋಷ್' ಹೊಸ ಮಾಡಲ್‌ಗಳ ಬಿಡುಗಡೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿನ್‌ಫಾಸ್ಟ್ ಇಂಡಿಯಾ ಈ ವರ್ಷ ದೇಶದಲ್ಲಿ ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ, ಅವುಗಳ ಮಾರಾಟ ಮೂಲಸೌಕರ್ಯವನ್ನು ದ್ವಿಗುಣಗೊಳಿಸಲು ಯೋಜಿಸುತ್ತಿದೆ ಎಂದು ಸಿಇಒ ತಪನ್ ಘೋಷ್ ತಿಳಿಸಿದ್ದಾರೆ.
ಮುಂಬರಲಿರುವ ಹೊಸ ಕಾರುಗಳನ್ನು ಪ್ರೀಮಿಯಂ ಆಗಿ ವಿನ್ಯಾಸಗೊಳಿಸಲಾಗಿದ್ದು, ಬೆಲೆ ಪ್ರಜ್ಞೆಯ ಭಾರತೀಯ ಗ್ರಾಹಕರಿಗೆ ಬಲವಾದ ಮೌಲ್ಯವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. "ನಾವು ಮೊದಲು 7-ಸೀಟರ್ MPV ಅನ್ನು ಬಿಡುಗಡೆ ಮಾಡುವ ಮೂಲಕ ಪ್ರಾರಂಭಿಸುತ್ತೇವೆ. ಇದು ಕುಟುಂಬ ಮತ್ತು ವಾಣಿಜ್ಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾದ ಪ್ರೀಮಿಯಂ ಎಲೆಕ್ಟ್ರಿಕ್ ವಿದ್ಯುತ್ MPV ಆಗಿದೆ" ಎಂದು ಘೋಷ್ ಹೇಳಿದ್ದಾರೆ.

ಕಂಪನಿಯು ಕಳೆದ ವರ್ಷ ತಮಿಳುನಾಡಿನಲ್ಲಿ ಸ್ಥಳೀಯ ಉತ್ಪಾದನೆಯನ್ನು ಪ್ರಾರಂಭಿಸಿ, ಇದುವರೆಗೆ ದೇಶದಲ್ಲಿ VF 6 ಮತ್ತು VF 7 ಎಲೆಕ್ಟ್ರಿಕ್ SUV ಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. 2025 ರ ಅಂತ್ಯದ ವೇಳೆಗೆ ಕಂಪನಿಯು ಪ್ರಮುಖ ನಗರಗಳಲ್ಲಿ 35 ಶೋರೂಂಗಳನ್ನು ತೆರೆದಿದೆ. 2026 ರಲ್ಲಿ ದೇಶಾದ್ಯಂತ 75 ಶೋರೂಂಗಳನ್ನು ತೆರೆಯುವ ಮೂಲಕ ದ್ವಿಗುಣಗೊಳಿಸಲು ಕಂಪನಿ ಪ್ಲಾನ್ ಮಾಡಿಕೊಂಡಿದೆ.
ಟೈಯರ್ -3 ಮತ್ತು ಟೈಯರ್ -4 ನಗರಗಳಲ್ಲಿ ಡೀಲರ್‌ಶಿಪ್‌ಗಳನ್ನು ಹೆಚ್ಚಿಸುವ ಗುರಿಯಿದೆ. ವಿನ್‌ಫಾಸ್ಟ್ ಎಲೆಕ್ಟ್ರಿಕ್ ಬಸ್ಸುಗಳು ಮತ್ತು ದ್ವಿಚಕ್ರ ವಾಹನಗಳನ್ನು ಕೂಡ ಭಾರತದಲ್ಲಿ ಪರಿಚಯಿಸಲು ನೋಡುತ್ತಿದೆ, ಈ ವಾಹನಗಳನ್ನು ನಿರ್ಮಿಸಲು ತಮಿಳುನಾಡಿನಲ್ಲಿ ಉತ್ಪಾದನಾ ಸೌಲಭ್ಯವನ್ನು ವಿಸ್ತರಿಸಲಾಗುವುದು ಮತ್ತು HPCL ಇಂಧನ ಕೇಂದ್ರಗಳಲ್ಲಿ ತಮ್ಮ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಸ್ಥಳೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿರುವುದಾಗಿ ಘೋಷ್ ಹೇಳಿದ್ದಾರೆ.

ವಿನ್‌ಫಾಸ್ಟ್ VF 6 ಎಸ್‌ಯುವಿ ವಿಶೇಷತೆಗಳು
ವಿನ್‌ಫಾಸ್ಟ್ VF 6 ಎಸ್‌ಯುವಿ ಬೆಲೆಯು ಭಾರತದಲ್ಲಿ ಪ್ರಸ್ತುತ ರೂ.16.49 ಲಕ್ಷದಿಂದ ರೂ.18.29 ಲಕ್ಷ (ಎಕ್ಸ್-ಶೋರೂಂ) ಇದೆ. ಈ ಎಸ್‌ಯುವಿಯಲ್ಲಿ 59.6 Kwh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 470 ಕಿ.ಮೀವರೆಗೆ ಓಡಿಸಬಹುದು. 175 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಇದು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.9 ಇಂಚು), 8-ಸ್ಪೀಕರ್ ಸೌಂಡ್ ಸಿಸ್ಟಮ್, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಯುಎಸ್‌ಬಿ ಸಿ ಚಾರ್ಜಿಂಗ್ ಪನೋರಮಿಕ್ ಸನ್‌ರೂಫ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.

ವಿನ್‌ಫಾಸ್ಟ್ VF 7 ಎಸ್‌ಯುವಿ ವಿಶೇಷತೆಗಳು
ವಿನ್‌ಫಾಸ್ಟ್ VF 7 ಎಸ್‌ಯುವಿ ಬೆಲೆಯು ರೂ.20.89 ಲಕ್ಷದಿಂದ ರೂ.25.49 ಲಕ್ಷ (ಎಕ್ಸ್-ಶೋರೂಂ) ಇದೆ. ಈ ಎಸ್‌ಯುವಿಯಲ್ಲಿ 59.6 Kwh ಹಾಗೂ 70.8 Kwh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 438 ರಿಂದ 532 ಕಿ.ಮೀವರೆಗೆ ಓಡಿಸಬಹುದು. 180 ಕಿ.ಮೀ ಟಾಪ್ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಈ ಕಾರಿನಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (12.9 ಇಂಚು), ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಡುಯಲ್ ಜೋನ್ ಆಟೋ ಎಸಿ, ಡುಯಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಗ್ಲಾಸ್ ರೂಫ್ ಒಳಗೊಂಡಂತೆ ಹಲವು ಫೀಚರ್ಸ್ ಹೊಂದಿದೆ. ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳು, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.


Click it and Unblock the Notifications








