ಆಟೋ ಎಕ್ಸ್‌ಪೋ; ನಿಮ್ಮನ್ನು ಬೆರಗುಗೊಳಿಸಿದ 5 ಕಾನ್ಸೆಪ್ಟ್‌ಗಳು

By Nagaraja

ಇದೀಗಷ್ಟೇ ಅಂತ್ಯಗೊಂಡ 12ನೇ ಆಟೋ ಎಕ್ಸ್ ಪೋದಲ್ಲಿ ಹಲವಾರು ನೂತನ ಕಾನ್ಸೆಪ್ಟ್‌ಗಳು ಪ್ರದರ್ಶನಗೊಂಡಿದ್ದವು. ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ತಾವು ಮುಂದು ತಾವು ಮುಂದು ಎಂಬ ರೀತಿಯಲ್ಲಿ ನೂತನ ಅವತರಣೆಗಳನ್ನು ಪ್ರದರ್ಶಿಸುವುದರಲ್ಲಿ ಮಗ್ನವಾಗಿದ್ದವು.

2014 ಆಟೋ ಎಕ್ಸ್ ಪೋ

ಈ ಪೈಕಿ ನಿಮ್ಮನ್ನು ಬೆರಗುಗೊಳಿಸುವಂತಹ ಕೆಲವು ಕಾನ್ಸೆಪ್ಟಗಳನ್ನು ನಮ್ಮ ಡ್ರೈವ್ ಸ್ಪಾರ್ಕ್ ಪಟ್ಟಿ ಮಾಡಿದೆ. ಇದು 2014 ಆಟೋ ಎಕ್ಸ್ ಪೋದಲ್ಲಿ ಅತಿ ಹೆಚ್ಚು ಗಮನ ಸೆಳೆದ ಪರಿಕಲ್ಪನೆಗಳು ಅಂದರೆ ತಪ್ಪಾಗಲಾರದು. ಅಷ್ಟಕ್ಕೂ ದೆಹಲಿಯಲ್ಲಿ ಸದ್ದು ಮಾಡಿದ ಭವಿಷ್ಯದ ಐದು ಕಾರು ಮಾದರಿಗಳು ಯಾವುದು ಅಂತೀರಾ? ಉತ್ತರಕ್ಕಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ಭಾರತೀಯ ಗ್ರಾಹಕರೆಲ್ಲರು ಅತಿ ಹೆಚ್ಚು ಕುತೂಹಲದಿಂದ ಎದುರು ನೋಡುತ್ತಿರುವಂತೆಯೇ ನಿರ್ಮಾಣ ಸಿದ್ಧ ಟಾಟಾ ನೆಕ್ಸನ್ ಕಾನ್ಸೆಪ್ಟ್ ಅತಿ ಹೆಚ್ಚಿನ ಗಮನ ಸೆಳೆದಿದೆ.

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ಟಾಟಾ ವಿಸ್ಟಾ ಎಕ್ಸ್1 ತಲಹದಿಯಲ್ಲಿ ಟಾಟಾ ನೆಕ್ಸನ್ ನಿರ್ಮಿಸಲಾಗಿದೆ. ನ್ಯೂ ಜನರೇಷನ್‌ಗೆ ತಕ್ಕವಾದ ತಾಜಾ ವಿನ್ಯಾಸ ಹಾಗೂ 1.2 ಲೀಟರ್ ಟರ್ಬೊ ಚಾರ್ಜ್ಡ್ ಗ್ಯಾಸೋಲೈನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಟಾಟಾ ನೆಕ್ಸನ್

ಟಾಟಾ ನೆಕ್ಸನ್

ಟಾಟಾ ಪ್ರಕಾರ ಟಾಟಾ ನೆಕ್ಸನ್ ಪ್ರತಿ ಲೀಟರ್‌ಗೆ 17.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಹೋಂಡಾ ವಿಷನ್ ಎಕ್ಸ್‌ಎಸ್-1

ಹೋಂಡಾ ವಿಷನ್ ಎಕ್ಸ್‌ಎಸ್-1

ಮೂರು ಸಾಗುಗಳ ಆಸನ ವ್ಯವಸ್ಥೆಯನ್ನು ಹೊಂದಿರುವ ಹೋಂಡಾದ ವಿಷನ್ ಎಕ್ಸ್‌ಎಸ್-1 ಕಾನ್ಸೆಪ್ಟ್ ಕಾರಿನಲ್ಲಿ ಏಳು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ.

ಹೋಂಡಾ ವಿಷನ್ ಎಕ್ಸ್‌ಎಸ್-1

ಹೋಂಡಾ ವಿಷನ್ ಎಕ್ಸ್‌ಎಸ್-1

ಹಾಗೊಂದು ವೇಳೆ ಇದು ನಿರ್ಮಾಣ ಹಂತಕ್ಕೆ ತಲುಪಿದ್ದಲ್ಲಿ ಮಹೀಂದ್ರ ಎಕ್ಸ್‌ಯುವಿ500 ಆವೃತ್ತಿಗೆ ಪೈಪೋಟಿಯಾಗಿರಲಿದೆ. ಇದನ್ನು ಹೋಂಡಾದ 'ಮ್ಯಾನ್ ಮ್ಯಾಕ್ಸಿಮಮ್ ಮೆಷಿನ್ ಮಿನಿಮಮ್' ತತ್ವಶಾಸ್ತ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಹೋಂಡಾ ವಿಷನ್ ಎಕ್ಸ್‌ಎಸ್-1

ಹೋಂಡಾ ವಿಷನ್ ಎಕ್ಸ್‌ಎಸ್-1

ವಿಶೇಷವೆಂದರೆ ಹೋಂಡಾ ವಿಷನ್ ಎಕ್ಸ್‌ಎಸ್-1 ಎರಡು ಡೋರ್ ಕಾನ್ಸೆಪ್ಟ್ ಆಗಿರುತ್ತದೆ. ಇಲ್ಲಿ ಬಿ ಪಿಲ್ಲರ್ ಮಾಯಾವಾಗಿದೆ. ಹಾಗಾಗಿ ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ನ್ಯಾನೋ ಟ್ವಿಸ್ಟ್ ಜತೆಗೆ ಎಫ್ ಟ್ರಾನಿಕ್

ನ್ಯಾನೋ ಟ್ವಿಸ್ಟ್ ಜತೆಗೆ ಎಫ್ ಟ್ರಾನಿಕ್

ಇನ್ನೊಂದೆಡೆ ನ್ಯಾನೋ ಕೊರತೆಗಳನ್ನು ನೀಗಿಸಲು ನ್ಯಾನೋ ಟ್ವಿಸ್ಟ್ ಆಕ್ಟಿವ್ ಮೂಲಕ ಪ್ರಯತ್ನಿಸಲಾಗಿದೆ.

ನ್ಯಾನೋ ಎಫ್ ಟ್ರಾನಿಕ್

ನ್ಯಾನೋ ಎಫ್ ಟ್ರಾನಿಕ್

ಇನ್ನೊಂದೆಡೆ ನ್ಯಾನೋ ಎಫ್ ಟ್ರಾನಿಕ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆದುಕೊಂಡಿದೆ. ನ್ಯಾನೋ ಆಟೋಮ್ಯಾಟಿಕ್ ಕಾರು ಕ್ಲಚ್ ರಹಿತ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಗಿರಲಿದ್ದು, ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಎಂದೆನಿಸಿಕೊಳ್ಳಲಿದೆ.

ಟ್ವಿಸ್ಟ್ ಆಕ್ಟಿವ್

ಟ್ವಿಸ್ಟ್ ಆಕ್ಟಿವ್

ನೂತನ ಟ್ವಿಸ್ಟ್ ಆಕ್ಟಿವ್ ಮೂಲಕ ಹಿಂದುಗಡೆ ಡೋರಿನ ವ್ಯವಸ್ಥೆ ನೀಡಲಾಗಿದೆ. ಹಾಗೆಯೇ ಸ್ಟೀರಿಂಗ್ ಸಮಸ್ಯೆಗಳನ್ನು ನಿವಾರಿಸಲಾಗಿದೆ.

ಷೆವರ್ಲೆ ಆಡ್ರಾ ಕಾನ್ಸೆಪ್ಟ್

ಷೆವರ್ಲೆ ಆಡ್ರಾ ಕಾನ್ಸೆಪ್ಟ್

ಈಗಾಗಲೇ ಫೋರ್ಡ್ ಇಕೊಸ್ಪೋರ್ಟ್ ನೇರ ಪ್ರತಿಸ್ಪರ್ಧಿ ಎಂದೇ ಬಣ್ಣಿಸಲ್ಪಟ್ಟಿರುವ ಷೆವರ್ಲೆ ಆಡ್ರಾ ಕಾನ್ಸೆಪ್ಟ್ ಮುಂದಿನ ದಿನಗಳಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ.

ಷೆವರ್ಲೆ ಆಡ್ರಾ ಕಾನ್ಸೆಪ್ಟ್

ಷೆವರ್ಲೆ ಆಡ್ರಾ ಕಾನ್ಸೆಪ್ಟ್

ಈ ಸಬ್ ಫೋರ್ ಮೀಟರ್ ಕಾರನ್ನು ಸಂಪೂರ್ಣವಾಗಿ ಬೆಂಗಳೂರಿನಲ್ಲಿರುವ ಜನರಲ್ ಮೋಟಾರ್ಸ್‌ನ ಭಾರತೀಯ ವಿನ್ಯಾಸಗಾರರು ವಿನ್ಯಾಸಗೊಳಿಸಿರುವುದು ವಿಶೇಷತೆಯಾಗಿದೆ.

ಷೆವರ್ಲೆ ಆಡ್ರಾ ಕಾನ್ಸೆಪ್ಟ್

ಷೆವರ್ಲೆ ಆಡ್ರಾ ಕಾನ್ಸೆಪ್ಟ್

ಗರಿಷ್ಠ ಗ್ರೌಂಡ್ ಕ್ಲಿಯರನ್ಸ್, ಒಳಮೈಯಲ್ಲಿ ಹೆಚ್ಚಿನ ಸ್ಥಳಾವಕಾಶ ಹಾಗೂ ಸ್ಮರ್ಧಾತ್ಮಕ ದರಗಳಲ್ಲಿ ಆಗಮಿಸಿದ್ದಲ್ಲಿ ಖಂಡಿತವಾಗಿ ಷೆವರ್ಲೆ ಆಡ್ರಾ ಭಾರತದಲ್ಲಿ ಯಶ ಗಳಿಸಬಹುದಾಗಿದೆ.

ರೆನೊ ಕ್ವಿಡ್ ಕಾನ್ಸೆಪ್ಟ್

ರೆನೊ ಕ್ವಿಡ್ ಕಾನ್ಸೆಪ್ಟ್

ಭಾರತದ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ರೆನೊ ಕ್ವಿಡ್ (KWID) ಕಾನ್ಸೆಪ್ಟ್ ಅಭಿವೃದ್ದಿಪಡಿಸಲಾಗಿದೆ. ಇದು ಡಸ್ಟರ್ ಬಳಿಕ ರೆನೊದಿಂದ ಮಗದೊಂದು ಕೊಡುಗೆಯಾಗಿರಲಿದೆ.

ಆಟೋ ಎಕ್ಸ್‌ಪೋ; ನಿಮ್ಮನ್ನು ಬೆರಗುಗೊಳಿಸಿದ 5 ಕಾನ್ಸೆಪ್ಟ್‌ಗಳು

ರೆನೊ ಪಾಲಿನ ಎರಡನೇ ಕ್ರಾಸೋವರ್ ಎನಿಸಿಕೊಳ್ಳಲಿರುವ ಕ್ವಿಡ್ ಭವಿಷ್ಯದ ಸಂಚಾರ ವಾಹಕಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಆಧುನಿಕ ಇಂಟಿರಿಯರ್ ಟಚ್ ಪಡೆದುಕೊಂಡಿದೆ.

ರೆನೊ ಕ್ವಿಡ್ ಕಾನ್ಸೆಪ್ಟ್

ರೆನೊ ಕ್ವಿಡ್ ಕಾನ್ಸೆಪ್ಟ್

ಇದು 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ. ಹಾಗೆಯೇ ಎಲೆಕ್ಟ್ರಿಕ್ ಬಳಕೆಗಾಗಿ ಬ್ಯಾಟರಿಯೊಂದನ್ನು ಲಗತ್ತಿಸಲಾಗಿದೆ. ಹಾಗೊಂದು ವೇಳೆ ನಿರ್ಮಾಣ ವರ್ಷನ್ ಪಡೆದ್ದಲ್ಲಿ ಅನೇಕ ಬದಲಾವಣೆ ಕಂಡುಬರುವ ಸಾಧ್ಯತೆಗಳಿವೆ.

More from DriveSpark

Article Published On: Saturday, February 15, 2014, 7:39 [IST]
English summary
5 stunning concept cars at 2014 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+