ಐಫೋನ್ ದೈತ್ಯ ಆಪಲ್‌ನಿಂದ ಬರುತ್ತಿದೆ ಎಲೆಕ್ಟ್ರಿಕ್ ಕಾರು

By Nagaraja

ಆಪಲ್ ಕಂಪ್ಯೂಟರ್ ಬಂದಿದಾಯ್ತು. ಆಮೇಲೆ ಆಪಲ್ ಐ ಪೊಡ್, ಆಪಲ್ ಐಫೋನ್, ಆಪಲ್ ಐ ಪ್ಯಾಡ್ ಹೀಗೆ ಆಪಲ್ ಪಟ್ಟಿ ಮುಂದುವರಿಯುತ್ತದೆ. ಹಾಗಿದ್ದರೆ ಮುಂದೇನು? ಐಫೋನ್ ದೈತ್ಯ ಆಪಲ್ ಫೋನ್ ಅನ್ನು ಒಂದಲ್ಲ ಒಂದು ದಿನ ಪಡೆಯಲೇಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ.

ಈಗ ಅಮೆರಿಕ ಮೂಲದ ಈ ಐಕಾನಿಕ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯೀಗ ವಾಹನೋದ್ಯಮಕ್ಕೂ ಕಾಲಿಡಲೂ ಸಜ್ಜಾಗುತ್ತಿದೆ. ವರದಿಗಳ ಪ್ರಕಾರ ಆಪಲ್ ಸಂಸ್ಥೆಯು ಭವಿಷ್ಯದಲ್ಲಿ ಎಲೆಕ್ಟ್ರಿಕ್ ಕಾರನ್ನು ನಿರ್ಮಿಸಲಿದೆ. ಅಷ್ಟೇ ಯಾಕೆ ಇದಕ್ಕೆ ಸಂಬಂಧಿಸಿದಂತೆ ಮೊದಲ ಮಾದರಿಯ ತಯಾರಿಯಲ್ಲಿ ತೊಡಗಿದೆ. ಬಲ್ಲ ಮೂಲಗಳ ಪ್ರಕಾರ ಎಲೆಕ್ಟಿಕ್ ಕಾರಿನ ಅಭಿವೃದ್ಧಿಗಾಗಿ ಆಪಲ್ ರಹಸ್ಯ ತಾಣವೊಂದನ್ನು ತೆರೆದುಕೊಂಡಿದೆ.

ಐಫೋನ್ ದೈತ್ಯ ಆಪಲ್‌ನಿಂದ ಬರುತ್ತಿದೆ ಎಲೆಕ್ಟ್ರಿಕ್ ಕಾರು

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಆಪಲ್ ಹೊಸ ವಿದ್ಯುತ್ ಚಾಲಿತ ಕಾರು 'ಟೈಟಾನ್' ಎಂದರಿಯಲ್ಪಡಲಿದೆ. ಪ್ರಾರಂಭಿಕ ಮಾಹಿತಗಳ ಪ್ರಕಾರ ಇದು ಮಿನಿವ್ಯಾನ್‌ಗೆ ಸಾಮತ್ಯೆಯನ್ನು ಪಡೆದುಕೊಂಡಿದೆ.

ವಿ.ಸೂ: ಸಾಂದರ್ಭಿಕ ಚಿತ್ರ
ಐಫೋನ್ ದೈತ್ಯ ಆಪಲ್‌ನಿಂದ ಬರುತ್ತಿದೆ ಎಲೆಕ್ಟ್ರಿಕ್ ಕಾರು

ಆಪಲ್ ನಡೆಯು ಮುಂದಿನ ದಿನಗಳಲ್ಲಿ ವಾಹನೋದ್ಯಮದಲ್ಲಿ ಗರಿಷ್ಠ ಪೈಪೋಟಿಗೆ ಕಾರಣವಾಗಲಿದೆ. ಏಕೆಂದರೆ ಅಮೆರಿಕದಲ್ಲಿ ಟೆಸ್ಲಾ ಮೋಟಾರ್ಸ್ ವಿದ್ಯುತ್ ಚಾಲಿತ ವಾಹನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿರುವ ಇದೇ ಸಂದರ್ಭದಲ್ಲಿ ಆಪಲ್ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದೆ.

ವಿ.ಸೂ: ಸಾಂದರ್ಭಿಕ ಚಿತ್ರ
ಐಫೋನ್ ದೈತ್ಯ ಆಪಲ್‌ನಿಂದ ಬರುತ್ತಿದೆ ಎಲೆಕ್ಟ್ರಿಕ್ ಕಾರು

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಸರ್ಚ್ ಎಂಜಿನ್ ದೈತ್ಯ ಗೂಗಲ್ ಈಗಾಗಲೇ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿಸಿದೆ. ಈಗ ಆಪಲ್ ಕೂಡಾ ವಾಹನೋದ್ಯಮದತ್ತ ಹೆಜ್ಜೆಯನ್ನಿಟ್ಟಿದೆ.

ವಿ.ಸೂ: ಸಾಂದರ್ಭಿಕ ಚಿತ್ರ
ಐಫೋನ್ ದೈತ್ಯ ಆಪಲ್‌ನಿಂದ ಬರುತ್ತಿದೆ ಎಲೆಕ್ಟ್ರಿಕ್ ಕಾರು

ನಿಮ್ಮ ಮಾಹಿತಿಗಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ಆಪಲ್ ಕಾರಿನಲ್ಲಿ ನಾವೀನ್ಯತೆಯ ಕಾರ್ ಪ್ಲೇ ಪರಿಚಯಿಸಿತ್ತು. ಇದು ಐಫೋನ್ ಮಾಲಿಕರಿಗೆ ನೂತನ ಅನುಭವ ನೀಡುವುದಷ್ಟೇ ಅಲ್ಲದೆ ಹೆಚ್ಚು ಸುರಕ್ಷತೆಯನ್ನು ಪ್ರದಾನ ಮಾಡುತ್ತಿದೆ.

ವಿ.ಸೂ: ಸಾಂದರ್ಭಿಕ ಚಿತ್ರ
ಐಫೋನ್ ದೈತ್ಯ ಆಪಲ್‌ನಿಂದ ಬರುತ್ತಿದೆ ಎಲೆಕ್ಟ್ರಿಕ್ ಕಾರು

ಸದ್ಯಕ್ಕೆ ಆಪಲ್ ಎಲೆಕ್ಟ್ರಿಕ್ ಕಾರು ಯೋಜನೆ ಯಾವಾಗ ಪೂರ್ಣಗೊಳ್ಳಲಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಈ ಸಂಬಂಧ ಆಪಲ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ವಿ.ಸೂ: ಸಾಂದರ್ಭಿಕ ಚಿತ್ರ

More from DriveSpark

Article Published On: Wednesday, February 18, 2015, 10:43 [IST]
English summary
Apple Inc. is now planning on entering the electric vehicle segment. It is rumoured that the company has developed a prototype that looks like a minivan. It is also been reported that Apple has formed a secret lab for their project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+