ಅಶೋಕ್ ಲೇಲ್ಯಾಂಡ್ 'ಸ್ಟೈಲ್' ಸ್ಟೈಲಿಷ್ ಎಂಟ್ರಿ
ಇತ್ತೀಚೆಗಷ್ಟೇ ಅಶೋಕ್ ಲೇಲ್ಯಾಂಡ್ ಸ್ಟೈಲ್ ಎಂಪಿವಿ ಆಗಮನದ ಕುರಿತು ನಾವು ಮಾಹಿತಿ ಕೊಟ್ಟಿದ್ದೆವು. ಇದೀಗ ನಡೆದ ಕಾರ್ಯಕ್ರಮದಲ್ಲಿ ನಿಸ್ಸಾನ್ ಇವಾಲಿಯಾದಿಂದ ರಿ ಬ್ಯಾಡ್ಜ್ ಪಡೆದುಕೊಂಡಿರುವ ಸ್ಟೈಲ್ ಭರ್ಜರಿ ಅನಾವರಣಗೊಂಡಿದೆ.
ರೆನೊ-ನಿಸ್ಸಾನ್ ಮೈತ್ರಿಯ ಸಿಇಒ ಕಾರ್ಲಸ್ ಘೋಸ್ನ್ ನೂತನ ಸ್ಟೈಲ್ ಎಂಪಿವಿ ಕಾರನ್ನು ಅನಾವರಣಗೊಳಿಸಿದರು. ಮೂಲಗಳ ಪ್ರಕಾರ ಸ್ಟೈಲ್ ಮುಂಬರುವ ಹಬ್ಬದ ಆವೃತ್ತಿ ವೇಳೆ ಆಗಮನವಾಗಲಿದೆ.
ಆದರೆ ನಿಸ್ಸಾನ್ ಇವಾಲಿಯಾಗಿಂತಲೂ ವಿಭಿನ್ನವಾಗಿ ಅಶೋಕ್ ಲೇಲ್ಯಾಂಡ್ ಸ್ಟೈಲ್, ವಾಣಿಜ್ಯ ವಾಹನವಾಗಿಯೂ ಬಳಕೆ ಮಾಡಬಹುದಾಗಿದೆ. ಅಂದರೆ ಟ್ಯಾಕ್ಸಿ ಸೇವೆ, ಅಂಬ್ಯುಲನ್ಸ್, ಕೊರಿಯರ್ ಸೇವೆ, ಪ್ರವಾಸ ಹಾಗೂ ಹೋಟೆಲ್ ಸೇವೆಗಳಿಗೆ ಬಳಕೆ ಮಾಡಬಹುದಾಗಿದೆ.

ನೂತನ ಅಶೋಕ್ ಲೇಲ್ಯಾಂಡ್ ಸ್ಟೈಲ್ ಹೊರಭಾಗದಲ್ಲಿ ನಿಸ್ಸಾನ್ ಇವಾಲಿಯಾ ಶೈಲಿಗೆ ಸಾಮತ್ಯೆ ಹೊಂದಿದೆ. ಹೆಡ್‌ಲ್ಯಾಂಪ್ ಹೊರತುಪಡಿಸಿ ಫ್ರಂಟ್ ಗ್ರಿಲ್ ಹಾಗೂ ಬಂಪರ್ ಹೊಸ ಲುಕ್ ಪಡೆದಿದೆ. ಹಾಗೆಯೇ ಕಲರ್‌ಫುಲ್ ಬಾಡಿ ಗ್ರಾಫಿಕ್ಸ್ ಹೆಚ್ಚಿನ ಅಂದತೆಗೆ ಕಾರಣವಾಗಿದೆ.

ಸ್ಟೈಲ್ ಎಂಪಿವಿಯಲ್ಲಿ ರೆನೊ 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ನೂತನ ಲೇಲ್ಯಾಂಡ್ ಸ್ಟೈಲ್ ಪೆಟ್ರೋಲ್ ಎಂಜಿನ್ ಹಾಗೂ ಸಿಎನ್‌ಜಿ ಹೈಬ್ರಿಡ್ ಮಾಡೆಲ್‌ನಲ್ಲಿ ಲಭ್ಯವಿರಲಿದೆ.

ಏಳು ಹಾಗೂ ಎಂಟು ಪ್ರಯಾಣಿಕರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳುವ ಸಿಟ್ಟಿಂಗ್ ವ್ಯವಸ್ಥೆಯೊಂದಿಗೆ ಸ್ಟೈಲ್ ಆಗಮನವಾಗಲಿದೆ.

ಹಾಗಿದ್ದರೂ ದರದ ಬಗ್ಗೆಯ ಯಾವುದೇ ಮಾಹಿತಿಗಳು ಹೊರಬಂದಿಲ್ಲ. ಇಲ್ಲಿದೆ ನೋಡಿ ನ್ಯೂಯಾರ್ಕ್ ಸಿಟಿಯಲ್ಲಿರುವ ನಿಸ್ಸಾನ್ ಎನ್‌ವಿ200 ಟ್ಯಾಕ್ಸಿ.


Click it and Unblock the Notifications








