ನ್ಯಾನೋಗೆ ಬೆಂಕಿ ಓಕೆ, ಆದರೆ ಆಡಿ ಪ್ರಾಬ್ಲಂ ಏನು?

ವಿಶ್ವದ ಅತಿ ಅಗ್ಗದ ಕಾರಾಗಿರುವ ಟಾಟಾ ನ್ಯಾನೋಗೆ ಹಲವು ಬಾರಿ ಬೆಂಕಿ ತಗಲಿರುವುದರ ಬಗ್ಗೆ ನಾವು ಹಲವು ಬಾರಿ ಸುದ್ದಿ ಮಾಧ್ಯಮಗಳಲ್ಲಿ ಓದಿರುತ್ತೇವೆ. ಇದು ನ್ಯಾನೋ ತಾಂತ್ರಿಕತೆಯ ಬಗ್ಗೆ ಗ್ರಾಹಕರಲ್ಲಿ ಅನುಮಾನ ಮೂಡಲು ಕಾರಣವಾಗಿದ್ದವು.

ಆದರೆ ಇದೀಗ ವಿಶ್ವ ಪ್ರಸಿದ್ಧ ಪ್ರೀಮಿಯಂ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಜರ್ಮನಿಯ ಆಡಿ ಕಾರಿಗೆ ಆಕಸ್ಮಾತ್ ಬೆಂಕಿ ಹಚ್ಚಿಕೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ನ್ಯಾನೋದಲ್ಲಿ ಕಡಿಮೆ ಗುಣಮಟ್ಟದ ತಂತ್ರಜ್ಞಾನ ಬಳಸಿರುವುದೇ ಕಾರು ಹೊತ್ತಿ ಉರಿಯಲು ಕಾರಣವಾಗಿತ್ತು ಎಂಬ ಅಪವಾದಗಳು ಎದಿದ್ದವು. ಆದರೆ ಇದೀಗ ಎರಡು ಕೋಟಿ ರೂಪಾಯಿ ಬೆಳೆಬಾಳುವ ಆಡಿ ಆರ್8 ಕಾರಿಗೆ ಬೆಂಕಿ ತಗಲಿರುವುದರ ಬಗ್ಗೆ ನೀವೇನು ಹೇಳಲು ಬಯಸುವೀರಾ? (ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ)

ಮುಂಬೈನ ಬಾಂದ್ರಾ-ವಾರ್ಲಿ ಸಮುದ್ರ ಕಿನಾರೆಯಲ್ಲಿ ಜನವರಿ 27, ಭಾನುವಾರದಂದು ನಡೆದ ಸೂಪರ್ ಕಾರು ರ‌್ಯಾಲಿ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸೂಪರ್ ಕಾರು ರ‌್ಯಾಲಿಯಲ್ಲಿ ವರ್ಷಂಪ್ರತಿ ಆಡಿ, ಫೆರಾರಿ, ಫೋರ್ಷೆ, ಆಸ್ಟನ್ ಮಾರ್ಟಿನ್, ಬೆಂಟ್ಲಿಗಳಂತಹ ವಿಶ್ವ ಪ್ರಸಿದ್ಧ ಕಾರು ಬ್ರಾಂಡ್‌ಗಳು ಭಾಗವಹಿಸುತ್ತವೆ.

ಹಾಗಿದ್ದರೂ ಬೆಂಕಿ ತಗಲಿರುವ ಆಡಿ ಆರ್8, ಸೂಪರ್ ಕಾರು ರ‌್ಯಾಲಿಯ ಭಾಗವಾಗಿರಲಿಲ್ಲ ಎಂಬುದನ್ನು ಸಂಘಟಕರು ಖಚಿತಪಡಿಸಿದ್ದಾರೆ. ಅಂತೂ ಕಾರಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿರುವುದೇ ಸಂತಸದ ವಿಚಾರವಾಗಿದೆ.

ಕಾಕತಾಳೀಯವೆಂಬಂತೆ ಆಡಿ ಇಂಡಿಯಾ ಬಾಸ್ Michael Perschke ಕೂಡಾ ಸೂಪರ್ ಕಾರು ರ‌್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಇದೀಗ ಅವರ ಸಮೀಪದಲ್ಲೇ ಘಟನೆ ಸಂಭವಿಸಿರುವುದು ವಿವಾದಕ್ಕೆ ಇನ್ನಷ್ಟು ಕಿಡಿ ಹೊತ್ತಿಸಿದೆ.

ಇತ್ತೀಚೆಗಷ್ಟೇ 2013 ಆಡಿ ಆರ್8 ಕಾರು ಲಾಂಚ್ ಮಾಡಲಾಗಿತ್ತು. ಪ್ರಸ್ತುತ ಕಾರಿಗೆ ಬೆಂಕಿ ತಗಲಿರುವ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಆಡಿ ಕಾರಿಗೆ ಬೆಂಕಿ ತಗಲಿರುವ ಪ್ರಕರಣ ಈ ಐಷಾರಾಮಿ ಕಾರಿನ ಬ್ರಾಂಡ್ ಇಮೇಜ್‌ಗೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

 Audi R8 Catches Fire In Mumbai

ಮುಂಬೈನಲ್ಲಿ ಐಷಾರಾಮಿ ಆಡಿ ಕಾರಿಗೆ ಅಚಾನಕ್ ತಗಲಿತು ಬೆಂಕಿ

 Audi R8 Catches Fire In Mumbai

ಮುಂಬೈನಲ್ಲಿ ಐಷಾರಾಮಿ ಆಡಿ ಕಾರಿಗೆ ಅಚಾನಕ್ ತಗಲಿತು ಬೆಂಕಿ- ತನಿಖೆ ಆರಂಭ

 Audi R8 Catches Fire In Mumbai

ಮುಂಬೈನಲ್ಲಿ ಐಷಾರಾಮಿ ಆಡಿ ಕಾರಿಗೆ ಅಚಾನಕ್ ತಗಲಿತು ಬೆಂಕಿ- ಸಮಸ್ಯೆಯಾದರೂ ಏನು?

 Audi R8 Catches Fire In Mumbai

ಮುಂಬೈನಲ್ಲಿ ಐಷಾರಾಮಿ ಆಡಿ ಕಾರಿಗೆ ಅಚಾನಕ್ ತಗಲಿತು ಬೆಂಕಿ- ಬೆಂಕಿ ನಂದಿಸಿದ ಅಗ್ನಿ ಶಾಮಕ ದಳ

 Audi R8 Catches Fire In Mumbai

ಮುಂಬೈನಲ್ಲಿ ಐಷಾರಾಮಿ ಆಡಿ ಕಾರಿಗೆ ಅಚಾನಕ್ ತಗಲಿತು ಬೆಂಕಿ- ನಿಮ್ಮ ಅಭಿಮತ ನಮ್ಮ ಜತೆ ಹಂಚಿಕೊಳ್ಳಿರಿ.

 Audi R8 Catches Fire In Mumbai

ಐಷಾರಾಮಿ ಆಡಿ ಆರ್8 2013 ಕಾರನ್ನು ಇತ್ತೀಚೆಗಷ್ಟೇ ಲಾಂಚ್ ಮಾಡಲಾಗಿತ್ತು.

 Audi R8 Catches Fire In Mumbai

ಆಡಿ ಆರ್8 ಐಷಾರಾಮಿ ಲುಕ್

 Audi R8 Catches Fire In Mumbai

ಆಡಿ ಆರ್8 ಫ್ರಂಚ್ ವ್ಯೂ

 Audi R8 Catches Fire In Mumbai

ಆಡಿ ಆರ್8 ಇಂಟಿರಿಯರ್

 Audi R8 Catches Fire In Mumbai

ಆಡಿ ಆರ್8 ಲಗ್ಷುರಿ ಸೀಟ್

 Audi R8 Catches Fire In Mumbai

ಆಡಿ ಆರ್8

More from DriveSpark

Article Published On: Tuesday, January 29, 2013, 12:41 [IST]
English summary
Now what would you say if you have a car worth nearly INR 2 crores that catches fire? An Audi R8 has been reported to have caught fire in Mumbai on Sunday, 27th January, during a super car rally. The R8 caught fire on the Bandra-Worli sea link.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+