ಆಡಿಯಿಂದ ಶಕ್ತಿಶಾಲಿ ಕಾರು ಲಾಂಚ್; ದರ ಜಸ್ಟ್ 1.28 ಕೋಟಿ..!

By Nagaraja

ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿ, ಮಗದೊಂದು ನಿರ್ವಹಣಾ ಕಾರನ್ನು ಭಾರತಕ್ಕೆ ಪರಿಚಯಿಸಿದೆ. ಹೌದು ಮುಂಬೈನಲ್ಲಿ ನಡೆದ ಆದ್ಧೂರಿ ಕಾರ್ಯಕ್ರಮದಲ್ಲಿ ಆಡಿ ಆರ್‌ಎಸ್7 ಸ್ಪೋರ್ಟ್ಸ್‌ಬ್ಯಾಕ್ ನಿರ್ವಹಣಾ ಕಾರನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಲಾಂಚ್ ಮಾಡಿದ್ದಾರೆ.

ದರ ಮಾಹಿತಿ: 1.28 ಕೋಟಿ ರು. (ಮುಂಬೈ ಎಕ್ಸ್ ಶೋ ರೂಂ)

ಆಡಿಯ ಈ ಪವರ್‌ಫುಲ್ ಆವೃತ್ತಿಯು 4.0 ಲೀಟರ್ ಟಿಎಫ್‌ಎಸ್‌ಐ ಟ್ವಿನ್ ಟರ್ಬೊ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 560 ಬಿಎಚ್‌ಪಿ (700 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿ ಲಭ್ಯವಿರುತ್ತದೆ.

Audi RS7 Sportback launched in India

ಇದು ಕೇವಲ 3.9 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗತೆ ಪಡೆದುಕೊಳ್ಳಲಿದೆ. ಇದರ ಜತೆಗೆ ಎಲ್ಲ ಆರ್‌ಎಸ್ ವಾಹನಗಳನ್ನು ಕ್ವಾಟ್ರೊ ಫೋರ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಪಡೆಯಲಿದೆ.

Audi RS7 Sportback launched in India

ಆಡಿ ಆರ್7 ಸ್ಪೋರ್ಟ್ಸ್‌ಬ್ಯಾಕ್‌ಗಿಂತಲೂ ಕಾರಿನ ಹೊರಮೈ ವಿನ್ಯಾಸದಲ್ಲಿ ಹಲವಾರು ವ್ಯತ್ಯಾಸಗಳನ್ನು ತರಲಾಗಿದೆ. ಹಾಗೆಯೇ ಗರಿಷ್ಠ ಇಂಧನ ಕ್ಷಮತೆಯತ್ತ ಗಮನ ವಹಿಸಲಾಗಿದೆ. ಪ್ರಸ್ತುತ ಆರ್‌ಎಸ್7, ಬಿಎಂಡಬ್ಲ್ಯು ಎಂ5 ಮತ್ತು ಮರ್ಸಿಡಿಸ್ ಬೆಂಝ್ ಇ63 ಎಎಂಜಿ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

Audi RS7 Sportback launched in India

ಕಳೆದ ವರ್ಷ ಡೆಟ್ರಾಯ್ಟ್‌ನಲ್ಲಿ ಅನಾವರಣಗೊಂಡಿದ್ದ ಆಡಿ ಎ7 ಸೆಡಾನ್ ಕಾರಿನ ನಿರ್ವಹಣಾ ವರ್ಷನ್ ಆಗಿರುವ ಆಡಿ ಆರ್‌ಎಸ್7 ಎಲ್ಲ ಹಂತದಲ್ಲೂ ಆಕ್ರಮಣಕಾರಿ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Audi RS7 Sportback launched in India

ಕಳೆದ ಸಾಲಿನಲ್ಲಿ 10,000 ಯುನಿಟ್‌ಗಳನ್ನು ಮಾರಾಟ ಮಾಡಿದ ದೇಶದ ಮೊದಲ ಐಷಾರಾಮಿ ವಾಹನ ತಯಾರಕ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಆಡಿ, ಇದೇ ಸಂತೋಷದೊಂದಿಗೆ ನೂತನ ಐದು ಡೋರಿನ ಕೂಪೆ ಕಾರನ್ನು ದೇಶಕ್ಕೆ ಪರಿಚಯಿಸಿದೆ.

ವಿನ್ಯಾಸ ಹಾಗೂ ದೇಹ ಶೈಲಿ

ವಿನ್ಯಾಸ ಹಾಗೂ ದೇಹ ಶೈಲಿ

  • ದೊಡ್ಡದಾದ ಐದು ಡೋರಿನ ಕೂಪೆ ಜತೆ ಸ್ಪೋರ್ಟಿ ವಿನ್ಯಾಸ,
  • ವಿಶಿಷ್ಟ ಆರ್‌ಎಸ್ ನಿಶ್ಚಿತ ವಿನ್ಯಾಸ
  • ಕಡಿಮೆ ಭಾರದ ವಿನ್ಯಾಸ, ಹೈಬ್ರಿಡ್ ಅಲ್ಯೂಮಿನಿಯಂ ಬಾಡಿ
  • ಎಂಜಿನ್

    ಎಂಜಿನ್

    • 4.0 ಟಿಎಫ್‌ಎಸ್‌ಐ, ಬೈ ಟರ್ಬೊ ವಿ8 3993 ಸಿಸಿ (560 ಅಶ್ವಶಕ್ತಿ),
    • ವೇಗತೆ: 3.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.
    • ಗರಿಷ್ಠ ವೇಗತೆ: ಗಂಟೆಗೆ 305 ಕೀ.ಮೀ.
    • ಆಡಿ ಸಿಲಿಂಡರ್ ಆನ್ ಡಿಮ್ಯಾಂಡ್ ತಂತ್ರಗಾರಿಕೆ,
    • ಇಸಿಇ ಸೈಕಲ್ ಇಂಧನ ಉಳಿತಾಯ- ಪ್ರತಿ 100 ಕೀ.ಮೀ.ಗೆ 9.8 ಲೀಟರ್.
    • ಪವರ್ ಟ್ರಾನ್ಸ್‌ಮಿಷನ್

      ಪವರ್ ಟ್ರಾನ್ಸ್‌ಮಿಷನ್

      • ಎಂಟು ಸ್ಪೀಡ್ ಟಿಪ್‌ಟ್ರಾನಿಕ್ ಜತೆಗೆ ಡೈನಾಮಿಕ್ ಸ್ವಭಾವ
      • ಕ್ವಾಟ್ರೊ ಸ್ಥಿರವಾದ ಆಲ್ ವೀಲ್ ಡ್ರೈವ್ ಡ್ರೈವ್
      • ಚಾಸೀಸ್

        ಚಾಸೀಸ್

        • ಆರ್ ಎಸ್ ಅಡಾಪ್ಟಿವ್ ಏರ್ ಸಸ್ಪೆಷನ್,
        • ಆರ್‌ಎಸ್ ಸ್ಪೋರ್ಟ್ ಸಸ್ಪೆಷನ್ ಪ್ಲಸ್ ಜತೆ ಡೈನಾಮಿಕ್ ರೈಡ್ ಕಂಟ್ರೋಲ್ (ಡಿಆರ್‌ಸಿ),
        • ಆಡಿ ಡ್ರೈವ್ ಸೆಲೆಕ್ಟ್ ವೆಹಿಕಲ್ ಡೈನಾಮಿಕ್ಸ್ ಸಿಸ್ಟಂ ಜತೆ ಡೈನಾಮಿಕ್ ಸ್ಟೀರಿಂಗ್ ಸ್ಟಾಂಡರ್ಡ್,
        • 20 ಇಂಚು ವೀಲ್ಸ್ ಸ್ಟಾಂಡರ್ಡ್, ಐಚ್ಛಿಕ 21 ಇಂಚಿನ ವೀಲ್ಸ್,
        • ವೇವ್ ಡಿಸೈನ್ ಬ್ರೇಕ್ ಡಿಸ್ಕ್, ಐಚ್ಛಿಕ ಸೆರಾಮಿಕ್ ಬ್ರೇಕ್ಸ್,
        • ಎಲೆಕ್ಟ್ರಾನಿಕ್ ಸ್ಟೆಬಿಲೈಜಷನ್ ಕಂಟ್ರೋಲ್ ಜತೆಗೆ ಕ್ರೀಡಾ ಮೋಡ್

          ಇಂಟಿರಿಯರ್

          ಇಂಟಿರಿಯರ್

          • ಬ್ಲ್ಯಾಕ್ ಇಂಟಿರಿಯರ್, ಕಾರ್ಬನ್ ಇನ್‌ಲೇಯ್ಸ್, ಅಲ್ಯೂಮಿನಿಯಂ ಲುಕ್,
          • ಬೆಳಗುವ ಡೋರ್‌ಸಿಲ್ ಟ್ರಿಮ್‌‌ಸ್ಟ್ರಿಪ್ಸ್, ಒಳಗಡೆ ಆರ್‌ಎಸ್7 ಲೊಗೊ,
          • ಆರ್‌ಎಸ್ ಸ್ಪೋರ್ಟ್ ಸೀಟ್,
          • ಟು ರಿಯರ್ ಸೀಟ್ ಜತೆ ಸ್ಪೋರ್ಟಿ
          • ಉಪಕರಣ

            ಉಪಕರಣ

            • ಎಲ್‌ಇಡಿ ಹೆಡ್ ಲೈಟ್ ಮತ್ತು ರಿಯರ್ ಲೈಟ್ಸ್,
            • ಆರ್ ಎಸ್ ಚಾಲಕ ಮಾಹಿತಿ ವ್ಯವಸ್ಥೆ ಜತೆ ಶಿಫ್ಟ್ ಲೈಟ್,
            • ಎಂಎಂಐ ನೇವಿಗೇಷನ್ ಪ್ಲಸ್ ಜತೆಗೆ ಎಂಎಂಐ ಟಚ್ ಮತ್ತು ಬೋಸ್ ಸೌಂಡ್ ಸಿಸ್ಟಂ,
            • ನಾವೀನ್ಯತೆಯ ಹಲವಾರು ಸಲಹಾ ಸಿಸ್ಟಂ,
            • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಜತೆ ಏರ್ ಪ್ರೆಶರ್ ಮತ್ತು ತಾಪಮಾನ ಪರದೆ

Article Published On: Tuesday, January 7, 2014, 6:02 [IST]
English summary
With 560PS, Audi has just launched its most powerful car in India, the 2014 RS7 Sportback at Rs Crore, (ex-showroom, Mumbai )
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+