ನ್ಯಾನೋ ಕೊರತೆಗಳನ್ನು ನೀಗಿಸಿದ ಟ್ವಿಸ್ಟ್ ಆಕ್ಟಿವ್ ಕಾನ್ಸೆಪ್ಟ್

By Nagaraja

ವಿಶ್ವದ ಅತಿ ಅಗ್ಗದ ಕಾರಾಗಿರುವ ನ್ಯಾನೋ ಕುಂದು ಕೊರತೆಗಳನ್ನು ಒಂದೊದಾಗಿ ನಿವಾರಿಸುವ ಪ್ರಯತ್ನದಲ್ಲಿರುವ ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 12ನೇ ಆಟೋ ಎಕ್ಸ್ ಪೋದಲ್ಲಿ ನೂತನ ನ್ಯಾನೋ ಟ್ವಿಸ್ಟ್ ಆಕ್ಟಿವ್ ಕಾನ್ಸೆಪ್ಟ್ ಅನಾವರಣಗೊಳಿಸಿದೆ.

2014 ಆಟೋ ಎಕ್ಸ್ ಪೋ

ಈ ಮೂಲಕ ನ್ಯಾನೋ ಜನಮನ್ನಣೆ ಗಳಿಸುವತ್ತ ಟಾಟಾ ನಿರಂತರ ಪ್ರಯತ್ನದಲ್ಲಿ ತೊಡಗಿದೆ. ಪ್ರಸ್ತುತ ಕಾನ್ಸೆಪ್ಟ್ ಹಂತದಲ್ಲಿರುವ ನ್ಯಾನೋ ಟ್ವಿಸ್ಟ್ ಆಕ್ಟಿವ್, ಟಾಟಾದ ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರವಾಗುವ ನಿರೀಕ್ಷೆಯಲ್ಲಿದೆ. ಹಿಂದಿನ ಆವೃತ್ತಿಗಳಲ್ಲಿ ನ್ಯಾನೋ ಸ್ಟೀರಿಂಗ್ ದೊಡ್ಡ ಸಮಸ್ಯೆಗಳಿಗೆ ಕಾರಣವಾಗಿತ್ತು. ಆದರೆ ನೂತನ ಟ್ವಿಸ್ಟ್ ಆಕ್ಟಿವ್‌ನಲ್ಲಿರುವ ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಸ್ಟೀರಿಂಗ್ ವೀಲ್ ಇಂತಹದೊಂದು ಸಮಸ್ಯೆವನ್ನು ನಿವಾರಿಸಲಿದೆ.

ನ್ಯಾನೋ ಕೊರತೆಗಳನ್ನು ನೀಗಿಸಿದ ಟ್ವಿಸ್ಟ್ ಆಕ್ಟಿವ್ ಕಾನ್ಸೆಪ್ಟ್

ಅದೇ ರೀತಿ ಸ್ಮಾಲ್ ಸಿಟಿ ಕಾರೆಂದು ಬಿಂಬಿಸಲ್ಪಟ್ಟಿರುವ ನ್ಯಾನೋ ಹಿಂದುಗಡೆ ಬೂಟ್ ಸ್ಪೇಸ್‌ ತೆರೆಯಲು ಬಾಗಿಲಿನ ಕೊರತೆ ಕಾಡುತ್ತಿತ್ತು. ನೂತನ ಟ್ವಿಸ್ಟ್ ಆಕ್ಟಿವ್ ಮೂಲಕ ಈ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನ ಮಾಡಲಾಗಿದೆ.

ನ್ಯಾನೋ ಕೊರತೆಗಳನ್ನು ನೀಗಿಸಿದ ಟ್ವಿಸ್ಟ್ ಆಕ್ಟಿವ್ ಕಾನ್ಸೆಪ್ಟ್

ಈಗಿರುವ ನ್ಯಾನೋ ಕಾರುಗಳಲ್ಲಿ ಹಿಂದಿನ ಸೀಟುಗಳನ್ನು ಮಡಚಿದ್ದಲ್ಲಿ ಮಾತ್ರ ಬೂಟ್ ಸ್ಪೇಸ್ ತೆರೆದುಕೊಳ್ಳಬಹುದಾಗಿದೆ. ಆದರೆ ನೂತನ ಟ್ವಿಸ್ಟ್ ಆಕ್ಟಿವ್‌ನಲ್ಲಿ ಬೂಟ್ ಡೋರ್ ಒದಗಿಸಿಕೊಡಲಾಗುವುದು.

ನ್ಯಾನೋ ಕೊರತೆಗಳನ್ನು ನೀಗಿಸಿದ ಟ್ವಿಸ್ಟ್ ಆಕ್ಟಿವ್ ಕಾನ್ಸೆಪ್ಟ್

ಹಾಗಿದ್ದರೂ ನೂತನ ನ್ಯಾನೋ ಟ್ವಿಸ್ಟ್ ಆಕ್ಟಿವ್ ಹಿಂದಿನ ಆವೃತ್ತಿಗಿಂತಲೂ 70 ಕೀ.ಮೀ. ಹೆಚ್ಚು ಭಾರ ಹೊಂದಿರಲಿದೆ. ಆದರೆ ಇದು ನೆಗೆಟಿವ್ ಪರಿಣಾಮ ಬೀರಲಿದ್ದು, ಇಂಧನ ಕ್ಷಮತೆ ಕಡಿತಗೊಳ್ಳಲಿದೆ.

ನ್ಯಾನೋ ಕೊರತೆಗಳನ್ನು ನೀಗಿಸಿದ ಟ್ವಿಸ್ಟ್ ಆಕ್ಟಿವ್ ಕಾನ್ಸೆಪ್ಟ್

ಅದೇ ರೀತಿ ಇಂಧ ಟ್ಯಾಂಕ್ ಸಾಮರ್ಥ್ಯವನ್ನು 25 ಲೀಟರ್‌ಗೆ ಏರಿಕೆಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಮುಂದುಗಡೆ ನೂತನ ಡಿಸೈನ್ ಕೂಡಾ ಪಡೆದುಕೊಂಡಿದೆ. ಇದರ ಫಾಗ್ ಲ್ಯಾಂಪ್ ವಿನ್ಯಾಸ ಕೂಡಾ ಪರಿಷ್ಕೃತಗೊಳಿಸಲಾಗಿದೆ.

ನ್ಯಾನೋ ಕೊರತೆಗಳನ್ನು ನೀಗಿಸಿದ ಟ್ವಿಸ್ಟ್ ಆಕ್ಟಿವ್ ಕಾನ್ಸೆಪ್ಟ್

ಒಟ್ಟಾರೆಯಾಗಿ ಕಾನ್ಸೆಪ್ಟ್ ಹಂತದಲ್ಲಿರುವ ನ್ಯಾನೋ ಟ್ವಿಸ್ಟ್ ಪ್ರಸಕ್ತ ಸಾಲಿನಲ್ಲೇ ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿದೆ.

More from DriveSpark

Article Published On: Saturday, February 8, 2014, 14:57 [IST]
English summary
Tata Motors' efforts to upgrade and revive the Nano small car continues as the automaker today brought out a concept variant called the Twist Active at the 2014 Auto Expo. Only a concept model as of now, the Twist Active has the solution to one of the Nano's long standing problems.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+