2016ರಲ್ಲಿ ಬೆಂಟ್ಲಿ ಎಸ್‌ಯುವಿ ಆಗಮನ ಖಚಿತ
ಕಳೆದ ವರ್ಷದ ಜಿನೆವಾ ಮೋಟಾರ್ ಶೋದಲ್ಲಿ ಇಎಕ್ಸ್‌ಪಿ 9 ಎಫ್ ಕಾನ್ಸೆಪ್ಟ್ ಕಾರು ಪ್ರಮುಖ ಆಕರ್ಷಣೆಯಾಗಿತ್ತು. ಈ ಕಾರು ವಿಮರ್ಶಕರಿಂದ ಧನಾತ್ಮಕ ಹಾಗೂ ನೆಗೆಟಿವ್ ಭಾವನೆಗಳಿಂದಾಗಿ ಹೆಚ್ಚು ಗಮನ ಸೆಳೆದಿದ್ದವು.
ಹಾಗಿದ್ದರೂ ಈ ಬ್ರಿಟಷ್ ವಾಹನ ತಯಾರಕ ಸಂಸ್ಥೆಯು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ನೂತನ ಬೆಂಟ್ಲಿ ಎಸ್‌ಯುವಿ ಕಾರು 2016ರಲ್ಲಿ ಆಗಮನವಾಗಲಿರುವುದಾಗಿ ಕಂಪನಿ ಖಚಿತಪಡಿಸಿದೆ. ಬೆಂಟ್ಲಿ ಇಂತಹದೊಂದು ಯೋಜನೆಯ ಹಿಂದೆ ಹಲವಾರು ಕಾರಣಗಳಿವೆ. ಅದೇನಂತೀರಾ? ಇಲ್ಲಿದೆ ನೋಡಿ ವರದಿ

ಉದ್ಯೋಗವಕಾಶ
2016ನೇ ಇಸವಿಯಲ್ಲಿ ಬೆಂಟ್ಲಿ ಉತ್ಪಾದನಾ ವರ್ಷನ್‌ಗೆ ರೂಪಂತರಗೊಳ್ಳಲಿದೆ. ನೂತನ ಯೋಜನೆಯಿಂದ ಇಂಗ್ಲೆಂಡ್‌ನ 100ರಷ್ಟು ಮಂದಿಗೆ ಉದ್ಯೋಗ ದೊರಕಲಿದೆ.

ಬೃಹತ್ ಹೂಡಿಕೆ
ಮುಂದಿನ ಮೂರು ವರ್ಷಗಳಲ್ಲಾಗಿ ಬೆಂಟ್ಲಿ ಒಟ್ಟು 1.2 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಇದು ಬಹುನಿರೀಕ್ಷಿತ ಎಸ್‌ಯುವಿ ಹಾಗೂ ಇತರ ಯೋಜನೆಗಳಿಗೆ ಸಹಕಾರಿಯಾಗಲಿದೆ.

ನಾಲ್ಕನೇ ಮಾಡೆಲ್
ಈ ಎಸ್‌ಯುವಿ ಬೆಂಟ್ಲಿಯಿಂದ ಉತ್ಪಾದನೆಯಾಗುತ್ತಿರುವ ನಾಲ್ಕನೇ ಮಾಡಲ್ ಆಗಿದೆ. ಇದಕ್ಕೂ ಮೊದಲು ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್, ಕಾಟಿನೆಂಟಲ್ ಜಿಟಿ ಹಾಗೂ ಮಲ್ಸನೆ ರಸ್ತೆಗಿಳಿದಿತ್ತು.

ನೆಕ್ಸ್ಟ್ ಜನರೇಷನ್
ಪ್ರಸ್ತುತ ಮುಂದಿನ ಜನರೇಷನ್ ಬೆಂಟ್ಲಿ ಎಸ್‌ಯುವಿ ಕಾರು ಜನರಲ್ಲಿ ಕುತೂಹಲ ಮೂಡಿಸಿದೆ.

ಎಂಜಿನ್
ಇದರಲ್ಲಿ 4.0 ಲೀಟರ್ ವಿ8 ಎಂಜಿನ್ ಅಥವಾ ದೊಡ್ಡದಾದ 6.0 ಲೀಟರ್ ಟ್ವಿನ್ ಟರ್ಬೊ ಚಾರ್ಜ್ಡ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

ಬ್ರಿಟನ್ ಪ್ರಧಾನಿ ಹಾಜರಿ
ಬೆಂಟ್ಲಿ ತನ್ನ ನೂತನ ಎಸ್‌ಯುವಿ ಕಾರು ಆಗಮನದ ಕಾರ್ಯಕ್ರಮದಲ್ಲಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಉಪಸ್ಥಿತರಿದ್ದರು.


Click it and Unblock the Notifications








