ಅತ್ಯುತ್ತಮ ಮೈಲೇಜ್ ನೀಡುವ ದೇಶದ ಹ್ಯಾಚ್‌ಬ್ಯಾಕ್ ಕಾರುಗಳು
ನಿರಂತರ ಅಂತರಾಳದಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿರುವಂತೆಯೇ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳ ಹೆಚ್ಚೆಚ್ಚು ಬಳಕೆ ಮಾಡುವುದರತ್ತ ವಾಹನ ಜಗತ್ತು ಪ್ರೇರಿತವಾಗುತ್ತಿದೆ. ಹಾಗಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಬದಲಿ ವ್ಯವಸ್ಥೆ ಪ್ರಾಯೋಗಿಕವಾಗಿ ಅಷ್ಟೊಂದು ಸುಲಭವಲ್ಲ.
ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಇಂತಹ ಕಾರುಗಳನ್ನು ಹೆಚ್ಚೆಚ್ಚು ನೋಡಸಿಗಬಹುದು. ಹಾಗಿದ್ದರೂ ಸದ್ಯ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಬೇಡಿಕೆಯೇನೂ ಕಮ್ಮಿಯಾಗಿಲ್ಲ. ಇದೇ ನಿಟ್ಟಿನಲ್ಲಿ ಚಿಂತಮಗ್ನವಾಗಿರುವ ನಮ್ಮ ಡ್ರೈವ್ ಸ್ಪಾರ್ಕ್ ಓದುಗರಿಗಾಗಿ ವಿಶೇಷ ಲೇಖನವೊಂದನ್ನು ಸಿದ್ಧಪಡಿಸಿದೆ. ಈ ಲೇಖನ ಮೂಖಾಂತರ ದೇಶದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಹ್ಯಾಚ್‌ಬ್ಯಾಕ್ ಕಾರುಗಳ ಕುರಿತಾಗಿ ತಿಳಿದುಕೊಳ್ಳಬಹುದಾಗಿದೆ.
ಇದಕ್ಕೆ ಪೂರಕವಾಗಿ ನಿರ್ದಿಷ್ಟ ಮಾಡೆಲ್‌ಗಳ ದರ ಮಾಹಿತಿಯನ್ನು ಸಹ ಕೊಡಲಾಗಿದೆ. ಹಾಗಿದ್ದರೆ ಇನ್ಯಾಕೆ ತಡ, ದೇಶದಲ್ಲಿ ಸದ್ಯ ಲಭ್ಯವಿರುವ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಕಡಿಮೆ ದರಗಳಲ್ಲಿ ಹೆಚ್ಚು ಮೈಲೇಜ್ ನೀಡುವ ಕಾರುಗಳ ಬಗ್ಗೆ ತಿಳಿದುಕೊಳ್ಳಿರಿ...

ಎಆರ್‌ಎಐ ಮೈಲೇಜ್
ಭಾರತೀಯ ವಾಹನ ಅಧ್ಯಯನ ಸಂಸ್ಥೆ ಎಆರ್‌ಎಐ ಮಾನ್ಯತೆ ನೀಡಿರುವ ಪ್ರಕಾರ ಮೈಲೇಜ್ ಆಧಾರದಲ್ಲಿ ಪಟ್ಟಿಯನ್ನು ತಯಾರಿಸಲಾಗಿದೆ. ಮುಂದಿನ ಸ್ಲೈಡರ್ ಮುಖಾಂತರ ದೇಶದಲ್ಲಿ ಗರಿಷ್ಠ ಮೈಲೇಜ್ ನೀಡುವ ಕಡಿಮೆ ದರದ ಕಾರುಗಳ ಪಟ್ಟಿಯನ್ನು ನೋಡುತ್ತಾ ಸಾಗಿರಿ...

ಟಾಟಾ ನ್ಯಾನೋ
ಮೈಲೇಜ್: 25.4 kmpl
ದರ ಮಾಹಿತಿ: 1.54 ಲಕ್ಷ ರು.ಗಳಿಂದ 2.18 ಲಕ್ಷ ರು.
ವಿಶ್ವದ ಅತಿ ಅಗ್ಗದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟಾಟಾ ನ್ಯಾನೋ ದೇಶದಲ್ಲಿ ಸದ್ಯ ಲಭ್ಯವಿರುವ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಅತಿ ಹೆಚ್ಚು ಇಂಧನ ಕ್ಷಮತೆಯನ್ನು ಹೊಂದಿದೆ. ಕಂಪನಿಯ ಪ್ರಕಾರ ನ್ಯಾನೋ ಪ್ರತಿ ಲೀಟರ್‌ಗೆ 25 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಂದ ಹಾಗೆ ನಿಮ್ಮ ನ್ಯಾನೋ ಕಾರು ಎಷ್ಟು ಮೈಲೇಜ್ ನೀಡುತ್ತಿದೆ?

ಮಾರುತಿ ಆಲ್ಟೊ 800
ಮೈಲೇಜ್: 22.4 kmpl
ದರ ಮಾಹಿತಿ: 2.78 ಲಕ್ಷ ರು.ಗಳಿಂದ 3.56 ಲಕ್ಷ ರು.
ದೇಶದಲ್ಲಿ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಅತಿ ಜನಪ್ರಿಯ ಆಲ್ಟೊ ಕಾರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಹ್ಯುಂಡೈ ಇಯಾನ್
ಮೈಲೇಜ್: 21.10 kmpl
ದರ ಮಾಹಿತಿ: 2.86 ಲಕ್ಷ ರು.ಗಳಿಂದ 3.87 ಲಕ್ಷ ರು.
2011ರಲ್ಲಿ ಲಾಂಚ್ ಆಗಿದ್ದ ಆಲ್ಟೊ ಪ್ರತಿಸ್ಪರ್ಧಿ ಹ್ಯುಂಡೈ ಕೂಡಾ ಮೈಲೇಜ್ ಲೆಕ್ಕಾಚಾರದಲ್ಲೂ ನಿಕಟ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದೆ.

ಹ್ಯುಂಡೈ ಐ10
ಮೈಲೇಜ್: 20.36 kmpl
ದರ ಮಾಹಿತಿ: 3.76 ಲಕ್ಷ ರು.ಗಳಿಂದ 6.21 ಲಕ್ಷ ರು.
ಹ್ಯುಂಡೈ ಪೈಕಿ ಅತ್ಯಂತ ಜನಪ್ರಿಯ ಆವೃತ್ತಿಯಾಗಿರುವ ಹ್ಯುಂಡೈ ಐ20 ಪ್ರತಿ ಲೀಟರ್‌ಗೆ 20 ಕೀ.ಮೀ. ಮೈಲೇಜ್ ನೀಡಲು ಸಕ್ಷಮವಾಗಿದೆ.

ಮಾರುತಿ ಆಲ್ಟೊ ಕೆ10
ಮೈಲೇಜ್: 20.20 kmpl
ದರ ಮಾಹಿತಿ: 3.21 ಲಕ್ಷ ರು.ಗಳಿಂದ 3.34 ಲಕ್ಷ ರು.
ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರೆಂಬ ಹೆಗ್ಗಳಿಕೆಗೆ ಮಾರುತಿ ಆಲ್ಟೊ ಪಾತ್ರವಾಗಿದೆ. ಇದರಂತೆ ಕಂಪನಿಯ ಆಲ್ಟೊ ಕೆ10 ದೇಶದ ಮಧ್ಯದ ವರ್ಗದ ಕಾರು ಕನಸನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ.

ಮಾರುತಿ ಎ-ಸ್ಟಾರ್
ಮೈಲೇಜ್: 19 kmpl
ದರ ಮಾಹಿತಿ: 3.81 ಲಕ್ಷ ರು.ಗಳಿಂದ 4.66 ಲಕ್ಷ ರು.
ಕೆ ಸಿರೀಸ್ ಎಂಜಿನ್‌ನೊಂದಿಗೆ ಪಾದರ್ಪಣೆ ಮಾಡಿದ್ದ ಮಾರುತಿ ಎ ಸ್ಟಾರ್ ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಿದೆ.

ಮಾರುತಿ ವ್ಯಾಗನಾರ್
ಮೈಲೇಜ್: 18.9 kmpl
ದರ ಮಾಹಿತಿ: 3.58 ಲಕ್ಷ ರು.ಗಳಿಂದ 4.45 ಲಕ್ಷ ರು.
ದೊಡ್ಡದಾದ ಬಾಡಿ ವಿನ್ಯಾಸವನ್ನು ಹೊಂದಿರುವ ಮಾರುತಿ ವ್ಯಾಗನಾರ್ ನಾಲ್ಕು ಜನರಿಗೆ ಆರಾಮದಾಯಕವಾಗಿ ಪ್ರಯಾಣಿಸುವ ಸಿಟ್ಟಿಂಗ್ ವ್ಯವಸ್ಥೆ ಹೊಂದಿದೆ.

ಷೆವರ್ಲೆ ಬೀಟ್
ಮೈಲೇಜ್: 18.6 kmpl
ದರ ಮಾಹಿತಿ: 4.54 ಲಕ್ಷ ರು.ಗಳಿಂದ 18.6 ಲಕ್ಷ ರು.
ಅಮೆರಿಕದ ಮೂಲದ ಜನರಲ್ ಮೋಟಾರ್ಸ್‌ನಿಂದ ದೇಶಕ್ಕೆ ಪರಿಚಯಗೊಂಡಿರುವ ಅತ್ಯಂತ ಜನಪ್ರಿಯ ಆವೃತ್ತಿಯಾಗಿದೆ ಷೆವರ್ಲೆ ಬೀಟ್.

ಷೆವರ್ಲೆ ಸ್ಪಾರ್ಕ್
ಮೈಲೇಜ್: 18 kmpl
ದರ ಮಾಹಿತಿ: 3.88 ಲಕ್ಷ ರು.ಗಳಿಂದ 4.52 ಲಕ್ಷ ರು.
ಇದು ಷೆವರ್ಲೆಯಿಂದ ಲಾಂಚ್ ಆಗಿರುವ ಇನ್ನೊಂದು ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರಾಗಿದೆ.


Click it and Unblock the Notifications








