ಒಂದು ಕಾರು ಖರೀದಿಸಿ ಮತ್ತೊಂದು ಸಂಪೂರ್ಣ ಉಚಿತ!

ಯಾವುದೇ ಆಟಿಕೆ ವಸ್ತು ಅಥವಾ ಬಟ್ಟೆ ಅಂಗಡಿಗಳಲ್ಲಿ ಒಂದು ಜೀನ್ಸ್ ಪ್ಯಾಂಟ್ ಅಥವಾ ಶರ್ಟ್ ಖರೀದಿಸಿದರೆ ಮತ್ತೊಂದು ಸಂಪೂರ್ಣ ಉಚಿತ ಎಂಬ ಬೋರ್ಡ್‌‍ಗಳನ್ನು ತೂಗು ಹಾಕಿರುವುದನ್ನು ನಾವು ನೋಡಿರಬಹುದು. ಆದರೆ ಇದೀಗ ಕಾರು ಮಾರುಕಟ್ಟೆಗಳು ಹೊರತಾಗಿಲ್ಲ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.

ಇದನ್ನು ಆಟೋಮೊಬೈಲ್ ರಂಗದ ಉನ್ನತ್ತಿಯೇ ಅಥವಾ ಹಿನ್ನಡೆಯೇ ಎಂಬುದನ್ನು ವ್ಯಾಖ್ಯಾನಿಸಲು ಮಾತ್ರ ನಮ್ಮಿಂದ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಗುಜರಾತ್‌ನಲ್ಲಿ ಕಾರು ಡೀಲರ್‌ವೊಬ್ಬರು ಒಂದು ಕಾರು ಖರೀದಿಸಿದರೆ ಮತ್ತೊಂದು ಸಂಪೂರ್ಣವಾಗಿ ಉಚಿತವಾಗಿ ನೀಡುವುದಾಗಿ ಘೋಷಿಸಿರುತ್ತಾರೆ.

ಇದು ಅವಿಶ್ವಸನೀಯ ಎಂದೆನಿಸಿದರೂ ನೀವಿದನ್ನು ನಂಬಲೇಬೇಕಾಗುತ್ತದೆ. ಯಾಕೆಂದರೆ ಗುಜರಾತ್‌ನ ಸ್ಕೋಡಾ ಡೀಲರ್‌ವೊಬ್ಬರು, ರ‌್ಯಾಪಿಡ್ ಸೆಡಾನ್ ಖರೀದಿಸಿದರೆ ಫಾಬಿಯಾ ಹ್ಯಾಚ್‌ಬ್ಯಾಕ್ ಸಂಪೂರ್ಣ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ನೀವು ಇದಕ್ಕಾಗಿ 2018ರ ವರೆಗೆ ಕಾಯಬೇಕಾಗುತ್ತದೆ. ಅಂದರೆ ಐದು ವರ್ಷಗಳ ಬಳಿಕ ಹ್ಯಾಚ್‌ಬ್ಯಾಕ್ ಕಾರು ನಿಮ್ಮ ಕೈ ಸೇರಲಿದೆ.

ಯಾಕೆ ಹೀಗಾಯ್ತು..?
ಕಳೆದ ಕೆಲವು ತಿಂಗಳುಗಳಿಂದ ಕಾರು ಮಾರುಕಟ್ಟೆ ದೊಪ್ಪನೆ ಕುಸಿಯುತ್ತಿರುವುದರಿಂದ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಾರು ತಯಾರಕ ಕಂಪನಿ ಹಾಗೂ ಡೀಲರ್‌ಗಳು ಇಂತಹ ಅತಿ ನೂತನ ಪ್ರಯೋಗಕ್ಕೆ ಮುಂದಾಗಿವೆ.

Buy a car and get another free

ಇದೇ ರೀತಿಯ ಆಫರ್ ಮುಂದಿಟ್ಟಿರುವ ಫೋಕ್ಸ್‌ವ್ಯಾಗನ್, ಕೇವಲ ಒಂದು ರೂಪಾಯಿ ಮಾತ್ರ ಪಾವತಿಸಿ ಹೊಸ ವೆಂಟೊ ಸೆಡಾನ್‌ಗಾಗಿ ನಿಮ್ಮ ಹಳೆಯ ಕಾರು ಮಾರಾಟ ಮಾಡಬಹುದಾಗಿದೆ ಎಂದು ಘೋಷಿಸಿದೆ. ಒಂದು ವರ್ಷದ ಬಳಿಕ ನೀವಿದನ್ನು ಪೂರ್ಣವಾಗಿಯೂ ಅಥವಾ 36 ಇಎಂಐ ಮೂಲಕವೂ ಪಾವತಿಸಬಹುದಾಗಿದೆ.

Buy a car and get another free

ಫೋಕ್ಯ್‌ವ್ಯಾಗನ್ ಇಂತಹುದೇ ಮತ್ತೊಂದು ಆಫರ್ ಮುಂದಿರಿಸಿದ್ದು, ನೂತನ ಪೊಲೊ ಖರೀದಿಸುವಾಗ ಶೇಕಡಾ 50ರಷ್ಟು ದರ ಮಾತ್ರ ನೀಡಿದರೆ ಸಾಕು. ಉಳಿದ ಹಣವನ್ನು ಒಂದು ವರ್ಷದ ಬಳಿಕ ಪಾವತಿಸಬಹುದಾಗಿದೆ.

Buy a car and get another free

ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಆಡಿ ಕೂಡಾ 'ಬೀಟ್ ದಿ ಟ್ಯಾಕ್ಸ್ ಹೈಕ್' ಸ್ಕೀಮ್‌ನೊಂದಿಗೆ ಆಗಮನವಾಗಿದ್ದು, ಮಾರ್ಚ್ 15ರೊಳಗೆ ಆಡಿ ಎಸ್‌ಯುವಿ ಖರೀದಿಸಿದ್ದಲ್ಲಿ ಬಟೆಜ್ ಪೂರ್ವ ದರದಲ್ಲೇ ಲಭಿಸಲಿದೆ. ಪ್ರಸ್ತುತ ಬಜೆಟ್‌ನಲ್ಲಿ ಎಸ್‌ಯುವಿ ಕಾರಿನ ದರಗಳನ್ನು ಶೇಕಡಾ 3ರಷ್ಟು ಏರಿಕೆಗೊಳಿಸಲಾಗಿತ್ತು.

Buy a car and get another free

ಕಳೆದೊಂದು ದಶಕದಲ್ಲೇ ಪ್ರಸಕ್ತ ಸಾಲಿನಲ್ಲಿ ಕಾರು ತಯಾರಕ ಸಂಸ್ಥೆ ಹಾಗೂ ಡೀಲರ್‌ಗಳು ಭಾರಿ ಕುಸಿತ ಅನುಭವಿಸಿರುವುದು ಇಂತಹದೊಂದು ಬೆಳವಣಿಗೆಗೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ಗ್ರಾಹಕರನ್ನು ಆಕರ್ಷಿಸಲು ಆಫರ್‌ಗಳನ್ನು ಪ್ರಕಟಿಸಲಾಗುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

Buy a car and get another free

ಹಬ್ಬದ ಆವೃತ್ತಿಯ ಬಳಿಕವೂ 2012 ಡಿಸೆಂಬರ್ ತಿಂಗಳಲ್ಲಿ ಹಲವು ಮುಂಚೂಣಿಯ ಕಾರು ತಯಾರಕ ಸಂಸ್ಥೆಗಳು ಭಾರಿ ಆಫರ್‌ಗಳನ್ನು ಮುಂದಿರಿಸಿದ್ದವು. ಇದೇ ರೀತಿ ಗುಜರಾತ್ ಸ್ಕೋಡಾ ಡೀಲರ್ ಫೆಬ್ರವರಿ 26ರರಂದು 'ಕಾರಿಗೊಂದು ಕಾರು ಉಚಿತ' ಆಫರ್ ಪ್ರಕಟಿಸಿದ ಬಳಿಕ 600ರಷ್ಟು ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ವರದಿಗಳು ತಿಳಿಸಿವೆ.

Buy a car and get another free

ಹಾಗೊಂದು ವೇಳೆ ನೀವು ಪೆಟ್ರೋಲ್ ರ‌್ಯಾಪಿಡ್ ಖರೀದಿಸಿದ್ದಲ್ಲಿ ಪೆಟ್ರೋಲ್ ಫಾಬಿಯಾ ಬೇಸ್ ವರ್ಷನ್ ಉಚಿತವಾಗಿ ಪಡೆಯಲಿದ್ದೀರಿ. ಇನ್ನು ಡೀಸೆಲ್ ಎಂಜಿನ್ ಆಯ್ಕೆ ಮಾಡಿದ್ದಲ್ಲಿ ಡೀಸೆಲ್ ಫಾಬಿಯಾ ವೆರಿಯಂಟ್ ಗಳಿಸಲಿದ್ದೀರಿ.

Buy a car and get another free

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮುಂದಿನ ಕೆಲವು ತಿಂಗಳುಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಆಟೋ ಜಗತ್ತಿನಲ್ಲಿ ಭಾರಿ ಆತಂಕ ಸೃಷ್ಟಿ ಮಾಡಲು ಕಾರಣವಾಗಿದೆ.

Buy a car and get another free

ಇನ್ನು ನಮ್ಮ ಬೆಂಗಳೂರಿನ ಡೀಲರ್‌ಗಳು ಇದೇ ರೀತಿಯ ಆಫರ್‌ಗಳನ್ನು ಮುಂದಿರಿಸಿದ್ದರೆ ಯಾರೂ ಅಚ್ಚರಿಪಡಬೇಕಾಗಿಲ್ಲ. ಹಾಗಿದ್ದರೆ ಒಂದು ಕಾರು ಖರೀದಿ ಮಾಡಿ ಮತ್ತೊಂದನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯಲು ಸಜ್ಜಾಗಿರಿ! ನಿಮ್ಮಗೆಲ್ಲರಿಗೂ ಶುಭವಾಗಲಿ!

ಇದೀಗ ನಿಮ್ಮ ಅನಿಸಿಕೆ, ಸಲಹೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ವ್ಯಕ್ತಪಡಿಸಿರಿ...

More from DriveSpark

Article Published On: Wednesday, March 6, 2013, 15:42 [IST]
English summary
Torque Auto, a Skoda dealership in Gujarat is offering a free Fabia hatchback to anyone who buys a Skoda Rapid. Skoda Fabia will be given under conditions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+