ಶಿವಣ್ಣ ಕೈಯಲ್ಲಿ ಬೆಂಗ್ಳೂರು ಪ್ರವೇಶ ಪಡೆದ ದಟ್ಸನ್ ಗೊ
ನಿರೀಕ್ಷೆಯೆಂತೆಯೇ ದಟ್ಸನ್ ಗೊ ಸಣ್ಣ ಹ್ಯಾಚ್‌ಬ್ಯಾಕ್ ಕಾರು ಬೆಂಗಳೂರಿಗೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ 'ಹ್ಯಾಟ್ರಿಕ್ ಹೀರೊ' ಶಿವರಾಜ್ ಕುಮಾರ್ ಬಿಳಿ ಬಣ್ಣದ ದಟ್ಸನ್ ಗೊ ಕಾರನ್ನು ಬಿಡುಗಡೆಗೊಳಿಸಿದರು.
ದಟ್ಸನ್ ಗೊ ಖರೀದಿಗೂ ಮುನ್ನ ನೀವು ತಿಳಿದುಕೊಳ್ಳಬೇಕಾದ ಅಂಶಗಳು
ನಿಮ್ಮ ಮಾಹಿತಿಗಾಗಿ ಬೆಂಗಳೂರಿನಲ್ಲಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರಿನ ಪ್ರಾರಂಭಿಕ ದರ 3.17 ಲಕ್ಷ ರು.ಗಳಾಗಿರಲಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದೆ. ಶಿವಣ್ಣ ಹಾಗೂ ದಟ್ಸನ್ ಗೊ ಆಕರ್ಷಕ ಚಿತ್ರಗಳಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಅಂದ ಹಾಗೆ ದಟ್ಸನ್ ಗೊ ಬೇಸ್ ಡಿ, ಮಿಡ್ ಎ ಹಾಗೂ ಟಾಪ್ ಎಂಡ್ ಟಿಗಳೆಂಬ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದು ಪ್ರಮುಖವಾಗಿಯೂ ಮಾರುತಿಯ ಜನಪ್ರಿಯ ಆಲ್ಟೊ ಕೆ10 ಹಾಗೂ ಹ್ಯುಂಡೈ ಐ10 ಆವೃತ್ತಿಗಳಿಗೆ ಪೈಪೋಟಿ ಒಡ್ಡಲಿದೆ.

ಈ ಹಿಂದೆ ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣಗೊಂಡಿದ್ದ ದಟ್ಸನ್ ಗೊ ಸಣ್ಣ ಕಾರು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಲಿದ್ದು, 1.2 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ (68 ಬಿಎಚ್‌ಪಿ, 110 ಎನ್‌ಎಂ ಟಾರ್ಕ್) ಆಳವಡಿಸಲಾಗಿದೆ.

ನಿಸ್ಸಾನ್ ಮೈಕ್ರಾ ತಲಹದಿಯಲ್ಲಿ ನಿರ್ಮಾಣವಾಗಿರುವ ದಟ್ಸನ್ ಗೊ ಪ್ರತಿ ಲೀಟರ್‌ಗೆ 20.63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಭಾರತೀಯ ರಸ್ತೆ ಪರಿಸ್ಥಿತಿಯಲ್ಲಿ ಉತ್ತಮವಾಗಿದೆ.

ಇನ್ನು ಸ್ಮರ್ಧಾತ್ಮಕ ದರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬೇಸ್ ವೆರಿಯಂಟ್‌ಗಳಲ್ಲಿ ಎಸಿ ಹಾಗೂ ಪವರ್ ಸ್ಟೀರಿಂಗ್ ಕೊರತೆ ಕಾಡಲಿದೆ. ಆದರೆ ತನ್ನ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಸ್ಥಳಾವಕಾಶ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಾರಿನೊಳಗೆ ಎಂಜಿನ್ ಶಬ್ದ ಕಡಿಮೆ ಮಾಡುವುದರತ್ತ ಗಮನ ಕೊಡಲಾಗಿದ್ದು, ನಿಮ್ಮ ಸಂಭಾಷನೆ ಹಾಗೂ ಸಂಗೀತವನ್ನು ಇನ್ನಷ್ಟು ಆನಂದದಾಯಕವಾಗಿ ಆಲಿಸಬಹುದಾಗಿದೆ.

ಒಟ್ಟಿನಲ್ಲಿ ದಟ್ಸನ್ ಗೊ ಸಣ್ಣ ಕಾರು ಬೆಂಗಳೂರು ಗ್ರಾಹಕರನ್ನು ಆಕರ್ಷಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.


Click it and Unblock the Notifications