ಬಂತು ನೋಡಿ ಡಿಸಿ ಡಿಸೈನ್ ಮರು ವಿನ್ಯಾಸಗೊಳಿಸಿದ ಡಸ್ಟರ್
ಕೆಲವು ದಿನಗಳ ಹಿಂದೆಯಷ್ಟೇ ಜನಪ್ರಿಯ ರೆನೊ ಡಸ್ಟರ್ ಅನ್ನು ದೇಶದ ಹೆಸರಾಂತ ವಿನ್ಯಾಸ ಕಂಪನಿಯಾದ ಡಿಸಿ ಡಿಸೈನ್ ಮರು ವಿನ್ಯಾಸಗೊಳಿಸಲಿದೆ ಎಂಬುದರ ಬಗ್ಗೆ ಲೇಖನವೊಂದನ್ನು ನಾವು ಬರೆದಿದ್ದೆವು. ಅಂದು ಇದಕ್ಕೆ ಸಂಬಂಧಿಸಿದಂತೆ ಒಂದು ಚಿತ್ರವನ್ನು ಪ್ರಕಟಿಸಿದ್ದೆವು.
ಈ ಬಗ್ಗೆ ಹೆಚ್ಚಿನ ಮಾಹಿತಿ ಜತೆಗೆ ಆಕರ್ಷಕ ಚಿತ್ರಗಳು ಇದೀಗ ಬಿಡುಗಡೆಗೊಂಡಿದೆ. ದಿಲೀಪ್ ಛಾಬ್ರಿಯಾ ಒಡೆತನದ ಡಿಸಿ ಡಿಸೈನ್, ಡಸ್ಟರ್‌ಗೆ ಹೊಸ ವಿನ್ಯಾಸ ನೀಡುವುದರಲ್ಲಿ ಯಶಸ್ವಿಯಾಗಿದೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕಸ್ಟಮೈಸ್ಡ್ ಡಸ್ಟರ್ ಕಾರನ್ನು ಡಿಸಿ ಡಿಸೈನ್ ಪ್ರಕಟಿಸಿದೆ. ಇದರ ಕಸ್ಟಮೈಸ್ಡ್ ದರವು 3.49 ಲಕ್ಷ ರು.ಗಳಿಂದ ಆರಂಭವಾಗುತ್ತಿದೆ.

ಬಸ್, ಕಾರುಗಳನ್ನು ಕಸ್ಟಮೈಸ್ಡ್ ಮಾಡುವುದರಲ್ಲಿ ದಿಲೀಪ್ ಛಾಬ್ರಿಯಾ ಅವರ ಡಿಸಿ ಡಿಸೈನ್ ಹೆಚ್ಚು ಪ್ರಖ್ಯಾತವಾಗಿದೆ.

ಮರು ವಿನ್ಯಾಸಗೊಳಿಸದಾಗ ರೆನೊ ಡಸ್ಟರ್ ಎಕ್ಸ್‌ಟೀರಿಯರ್ ಭಾಗಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಹಾಗಿದ್ದರೂ ಮುಂಭಾಗದಲ್ಲಿ ಎಲ್‌ಇಡಿ ಲೈಟಿಂಗ್, ಬೊನೆಟ್ ಲಿಡ್ ಸೌಲಭ್ಯಗಳು ಹೆಚ್ಚಿನ ಆಕರ್ಷಣೆ ನೀಡುತ್ತಿದೆ.

ಆಕರ್ಷಕ ಕಲರ್ ವೆರಿಯಂಟ್ ಹಾಗೂ 10 ಸ್ಪೋಕ್ಡ್ ಅಲಾಯ್ ವೀಲ್ ಹೊರಂಗಣ ವಿನ್ಯಾಸವನ್ನು ಸಂಪೂರ್ಣಗೊಳಿಸುತ್ತದೆ.

ಇನ್ನು ಆಂತರಿಕ ಭಾಗವನ್ನು ಕಸ್ಟಮೈಸ್ಡ್ ಮಾಡುವಲ್ಲಿ ಡಿಸಿ ಡಿಸೈನ್ ಎತ್ತಿದ ಕೈ. ಇಲ್ಲಿ ನೋಡಿ ಲಗ್ಷುರಿ ಲುಕ್.

ಆಂತರಿಕ ಭಾಗಗಳಿಗೆ ವುಡನ್ ಟಚ್ ನೀಡಲಾಗಿದ್ದು, ಸೀಟ್‌ಗಳಿಗೆ ಲೆಥರ್ ಕವಚ ಕೊಡಲಾಗಿದೆ.

ವೈಯಕ್ತಿಕ ಮಲ್ಟಿಮೀಡಿಯಾ ಸಿಸ್ಟಂ, ಫುಡ್, ಲ್ಯಾಪ್‌ಟಾಪ್ ಟ್ರೇ ಹಾಗೂ ತೋಳಾಸರೆಯು ಹೆಚ್ಚಿನ ವೈಶಿಷ್ಟಕ್ಕೆ ಕಾರಣವಾಗಿದೆ.

ಚಿತ್ರದಲ್ಲಿ ತೋರಿಸಿರುವಂತೆಯೇ ಸೀಟನ್ನು ವಿವಿಧ ಮೋಡ್‌ಗಳಲ್ಲಾಗಿ ಹೊಂದಾಣಿಕೆ ಮಾಡಬಹುದಾಗಿದೆ.

ಇದೀಗ ಡಿಸಿ ಡಿಸೈನ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








