ದೀಪಾವಳಿ ಬಂಪರ್; ನಿಮ್ಮ ನೆಚ್ಚಿನ ಕಾರುಗಳಿಗೆ ಭಾರಿ ಆಫರ್!
ಬದುಕನ್ನು ಕತ್ತಲಿಂದ ಬೆಳಕಿನೆಡೆಗೆ ಕೊಂಡೊಯ್ಯುವ 'ದೀಪಾವಳಿ' ಹಬ್ಬ ಬಂದೇ ಬಿಟ್ಟಿದೆ. ಈ ಸುಸಂದರ್ಭದಲ್ಲಿ ಹೊಸ ಕಾರು ಖರೀದಿಗೆ ಸೂಕ್ತವಾದ ಕಾಲ ಎಂಬ ಮಾತು ಬಹಳ ಹಿಂದಿನಿಂದಲೇ ಜಾರಿಯಲ್ಲಿದೆ. ಇದರಂತೆ ಈ ಹಬ್ಬದ ಆವೃತ್ತಿಯಲ್ಲಿ ಅತಿ ಹೆಚ್ಚಿನ ಸಂಖ್ಯೆ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ದೇಶದ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಭಾರಿ ಕೊಡುಗೆಗಳೊಂದಿಗೆ ಮುಂದೆ ಬಂದಿದೆ.
ಎಂದಿನಂತೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಬಜೆಟ್ ಕಾರುಗಳಿಂದ ಜರ್ಮನಿಯ ಅತಿ ದುಬಾರಿ ಮರ್ಸಿಡಿಸ್ ಬೆಂಝ್ ಕಾರುಗಳ ವರೆಗೂ ಈ ಡಿಸ್ಕೌಂಟ್ ಮೇಳ ಮುಂದುವರಿಯುತ್ತದೆ. ಅಷ್ಟಕ್ಕೂ ಈ ದೀಪಾವಳಿ ಬಂಪರ್ ಆಫರುಗಳ ಬಗ್ಗೆ ತಿಳಿದುಕೊಳ್ಳಲು ನೀವು ಮಿಸ್ ಮಾಡಿಕೊಂಡಿರುವೀರಾ? ಖಂಡಿತ ಇಲ್ಲ ಈ ನಿಟ್ಟಿನಲ್ಲಿ ನಮ್ಮ ಈ ಲೇಖನ ನಿಮಗೆ ನೆರವಾಗಲಿದೆ. ಇದಕ್ಕಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

ಆಡಿ
ಜರ್ಮನಿಯ ಲಗ್ಷುರಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ ಈ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ತನ್ನ ಜನಪ್ರಿಯ ಕ್ಯೂ5 ಮತ್ತು ಎ6 ಖರೀದಿ ವೇಳೆ 4 ಲಕ್ಷ ರು.ಗಳ ವರೆಗೆ ಗ್ರಾಹಕರಿಗೆ ಪ್ರಯೋಜನ ಒದಗಿಸುತ್ತಿದೆ. ಅಷ್ಟೇ ಯಾಕೆ ಎ8 ಖರೀದಿ ವೇಳೆ ಫ್ಲ್ಯಾಟ್ ಎಂಟು ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ಲಭ್ಯವಿರಲಿದೆ.

ಬಿಎಂಡಬ್ಲ್ಯು
ಜರ್ಮನಿಯ ಮಗದೊಂಡು ದುಬಾರಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯುನ ಎಂಟ್ರಿ ಲೆವೆಲ್ 1 ಸಿರೀಸ್ ಖರೀದಿ ವೇಳೆ 3.5ರಿಂದ 4 ಲಕ್ಷ ರು.ಗಳ ವರೆಗೆ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ. ಅದೇ ರೀತಿ ಫ್ಲ್ಯಾಗ್‌ಶಿಪ್ 7 ಸಿರೀಸ್ ಸೆಡಾನ್ ಕಾರಿನಲ್ಲಿ 14 ಲಕ್ಷ ರು. ವರೆಗೆ ಆಫರ್ ನೀಡಲಾಗುತ್ತಿದೆ.

ಷೆವರ್ಲೆ
ಅಮೆರಿಕ ಮೂಲದ ಷೆವರ್ಲೆ ಸಂಸ್ಥೆಯು ಸಹ ತನ್ನೆಲ್ಲ ಮಾದರಿಗಳಿಗೆ ಅತ್ಯಾಕರ್ಷಕ ಆಫರ್ ನೀಡುವ ಮೂಲಕ ಹಬ್ಬವನ್ನು ಬರಮಾಡಿಕೊಂಡಿದೆ.
ಪ್ರಯೋಜನ
ಸ್ಪಾರ್ಕ್ ಹ್ಯಾಚ್‌ಬ್ಯಾಕ್ - ರು. 63,000 ವರೆಗೆ
ಬೀಟ್ - ರು. 78,000 ವೆರೆಗೆ
ಪ್ರೀಮಿಯಂ ಸೈಲ್ ಹ್ಯಾಚ್‌ಬ್ಯಾಕ್ - ರು. 43,000 ವರೆಗೆ
ಸೈಲ್ ಸೆಡಾನ್ - ರು. 45,000 ವೆರೆಗೆ
ಕ್ರೂಜ್ ಸೆಡಾನ್ - ರು. 60,000 ವರೆಗೆ
ಎಂಜಾಯ್ ಎಂಪಿವಿ - ರು. 65,500 ವರೆಗೆ
ತವೆರಾ ಎಂಪಿವಿ - ರು. 47,000 ವರೆಗೆ
(ಪ್ರಯೋಜನಗಳು ರಿಯಾಯಿತಿ ದರ, ಲಾಯಲ್ಟಿ ಬೋನಸ್, ಎಕ್ಸ್‌ಚೇಂಜ್ ಬೋನಸ್ ಮತ್ತು ಕಾರ್ಪೋರೇಟ್ ಡಿಸ್ಕೌಂಟ್‌ಗಳನ್ನು ಹೊಂದಿರಲಿದೆ.)
ಹ್ಯುಂಡೈ
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ವಾಹನ ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ ಕೂಡಾ ಆಕರ್ಷಕ ಆಫರುಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.
ಐ10 ಹ್ಯಾಚ್‌ಬ್ಯಾಕ್ - ಉಚಿಮ ವಿಮೆ, ಎಕ್ಸ್‌ಚೇಂಜ್ ಬೋನಸ್ ಸೇರಿದಂತೆ ರು. 15,000 ವರೆಗೆ ಪ್ರಯೋಜನ
ಸ್ಯಾಂಟ್ರೊ ಕ್ಸಿಂಗ್ - 10,000 ರು.ಗಳ ರಿಯಾಯಿತಿ ದರ ಮತ್ತು ರು. 15,000 ಗಳ ಉಚಿತ ವಿಮೆ ಹಾಗೂ ಎಕ್ಸ್‌ಚೇಂಜ್ ಬೋನಸ್.
ಇಯಾನ್ - ರಿಯಾಯಿತಿ ದರ 13.500 ರು. ಮತ್ತು ರು. 25,000 ರು.ಗಳ ಎಕ್ಸ್‌ಚೇಂಜ್ ಬೋನಸ್.
ಇಯಾನ್ 1.0 - ಡಿಸ್ಕೌಂಟ್ 6,000 ರು. ಮತ್ತು ಉಚಿತ ವಿಮೆ.
ವೆರ್ನಾ 1.4 ಲೀಟರ್ ಮತ್ತು 1.6 ಲೀಟರ್ ಸೆಡಾನ್ ಕಾರಿಗೆ ಅನುಕ್ರಮವಾಗಿ ರು. 25,000 ಮತ್ತು 17,000 ರು.ಗಳ ಡಿಸ್ಕೌಂಟ್. ಅಲ್ಲದೆ ಎರಡು ಮಾದರಿಗಳಿಗೂ ಎಕ್ಸ್‌ಚೇಂಜ್ ಬೋನಸ್ ಸಹ ಲಭ್ಯವಿರುತ್ತದೆ.
ಎಲಂಟ್ರಾ - 10,000 ರು.ಗಳ ಡಿಸ್ಕೌಂಟ್ ಮತ್ತು 25,000 ರು.ಗಳ ಎಕ್ಸ್‌ಚೇಂಜ್ ಬೋನಸ್.

ಜಾಗ್ವಾರ್ ಲ್ಯಾಂಡ್ ರೋವರ್
ಟಾಟಾ ಅಧೀನತೆಯಲ್ಲಿರುವ ಜಾಗ್ವಾರ್ ಲ್ಯಾಂಡ್ ರೋವರ್‌ಗೆ 1.5 ಲಕ್ಷ ರು.ಗಳ ನಗದು ರಿಯಾಯಿತಿ ಹಾಗೂ 50,000 ರು.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಲಭ್ಯವಿರುತ್ತದೆ.
ಜಾಗ್ವಾರ್ ಎಕ್ಸ್‌ಎಫ್ ಸೆಡಾನ್ - 2 ಲಕ್ಷ ರು.ಗಳ ಫ್ಲ್ಯಾಟ್ ಡಿಸ್ಕೌಂಟ್, 50,000 ರು.ಗಳ ಎಕ್ಸ್‌ಚೇಂಜ್ ಬೋನಸ್ ಮತ್ತು 75,000 ರು.ಗಳ ಲಾಯಲ್ಟಿ ಬೋನಸ್.

ಮಾರುತಿ
ಈ ನಡುವೆ ದೇಶದ ಅತಿ ಹೆಚ್ಚು ನಂಬಿಕೆಗ್ರಸ್ತ ಹಾಗೂ ನಂ. 1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸಹ ಈ ಹಬ್ಬದ ಸಂದರ್ಭದಲ್ಲಿ ತನ್ನ ಗ್ರಾಹಕರನ್ನು ನಿರಾಸೆಗೊಳಿಸಿಲ್ಲ. ಇದು ತನ್ನ ನಾಲ್ಕು ಜನಪ್ರಿಯ ಮಾದರಿಗಳಿಗೆ ವಿಶೇಷ ಕೊಡುಗೆಗಳನ್ನು ಮುಂದಿರಿಸಿದೆ.
ಆಲ್ಟೊ 800 - 32,000 ರು.ಗಳ ಡಿಸ್ಕೌಂಟ್ ಮತ್ತು 20,000 ರು.ಗಳ ಎಕ್ಸ್‌ಚೇಂಜ್ ಬೋನಸ್.
ಇಕೊ - 8,000 ರು.ಗಳ ಡಿಸ್ಕೌಂಟ್ ಮತ್ತು 10,000 ರು.ಗಳ ಎಕ್ಸ್‌ಚೇಂಜ್ ಬೋನಸ್.
ರಿಟ್ಜ್ ಹ್ಯಾಚ್‌ಬ್ಯಾಕ್ - 40,000 ರು.ಗಳ ಡಿಸ್ಕೌಂಟ್ ಮತ್ತು 35,000 ರು.ಗಳ ಎಕ್ಸ್‌ಚೇಂಜ್ ಬೋನಸ್.
ಡಿಜೈರ್ - 5,000 ರು.ಗಳ ಡಿಸ್ಕೌಂಟ್ ಮತ್ತು 15,000 ರು.ಗಳ ಎಕ್ಸ್‌ಚೇಂಜ್ ಬೋನಸ್ (ಡೀಸೆಲ್ ಮಾದರಿಗೆ). ಅದೇ ಹೊತ್ತಿಗೆ ಪೆಟ್ರೋಲ್ ಮಾದರಿಗೆ 20,000 ರು.ಗಳ ವರೆಗೆ ಎಕ್ಸ್‌ಚೇಂಜ್ ಬೋನಸ್ ಲಭ್ಯವಿರುತ್ತದೆ.

ನಿಸ್ಸಾನ್
ಮೈಕ್ರಾ ಹ್ಯಾಚ್‌ಬ್ಯಾಕ್ - ರು. 40,000 ಗಳ ವರೆಗೆ ಪ್ರಯೋಜನ.
ಸನ್ನಿ ಸೆಡಾನ್ - ರು. 92.500 ರು.ಗಳ ವರೆಗೆ ಪ್ರಯೋಜನ
ಇವಾಲಿಯಾ ಎಂಪಿವಿ - ಉಚಿತ ವಿಮೆ.
ಟೆರನೊ - ಆಯ್ದ ಮಾದರಿಗಳಿಗೆ ರು. 50,000 ವರೆಗೆ ಡಿಸ್ಕೌಂಟ್.

ಟಾಟಾ ಮೋಟಾರ್ಸ್
ಅದೇ ಹೊತ್ತಿಗೆ ತಾವೇನು ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಸಹ ಗರಿಷ್ಠ ಕೊಡುಗೆಗಳೊಂದಿಗೆ ಮುಂದೆ ಬಂದಿದೆ.
ನ್ಯಾನೋ - 50,000 ರು. ಗಳ ವರೆಗೆ ಪ್ರಯೋಜನ.
ಇಂಡಿಯಾ - 40,000 ರು.ಗಳ ವರೆಗೆ ಪ್ರಯೋಜನ.
ವಿಸ್ಟಾ ಹ್ಯಾಚ್‌ಬ್ಯಾಕ್ - 55,000 ರು.ಗಳ ವರೆಗೆ ಪ್ರಯೋಜನ.
ಇಂಡಿಗೊ ಇಸಿಎಸ್ - 45,000 ರು.ಗಳ ವರೆಗೆ ಪ್ರಯೋಜನ.
ಸುಮೋ ಗೋಲ್ಡ್ - 35,000 ರು.ಗಳ ವರೆಗೆ ಪ್ರಯೋಜನ.
ಸಫಾರಿ ಸ್ಟ್ರೋಮ್ ಎಸ್‌ಯುವಿ - ರು. 95,000 ಗಳ ವರೆಗೆ ಪ್ರಯೋಜನ.
ಆರಿಯಾ - ರು. 15,000 ಗಳ ವರೆಗೆ ಪ್ರಯೋಜನ
(ಪ್ರಯೋಜನಗಳು ನಗದು ರಿಯಾಯಿತಿ, ಮೂರು ವರ್ಷಗಳ ವರೆಗೆ ವಿಮೆ ಮತ್ತು ಎಕ್ಸ್‌ಚೇಂಜ್ ಬೋನಸ್ ಒಳಗೊಂಡಿರಲಿದೆ.)

ಟೊಯೊಟಾ
ಜನಪ್ರಿಯ ಇನ್ನೋವಾ, ಇಟಿಯೋಸ್ ಮತ್ತು ಲಿವಾ ಮಾದರಿಗಳಿಗೆ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಆಫರ್ ಒದಗಿಸುತ್ತಿದೆ.
ಇನ್ನೋವಾ - ರು. 10,000 ವರೆಗೆ ನಗದು ರಿಯಾಯಿತಿ ಮತ್ತು ವಿಮೆಯಲ್ಲಿ ಶೇಕಡಾ 21ರಷ್ಟು ಡಿಸ್ಕೌಂಟ್.
ಇಟಿಯೋಸ್ ಸೆಡಾನ್ - ರು. 5,000 ಗಳ ಉಚಿತ ಆಕ್ಸೆಸರಿ ಮತ್ತು ಒಂದು ರು.ಗಳ ವಿಮೆ ಸೌಲಭ್ಯ.
ಲಿವಾ - ರು. 10,000 ಗಳ ಫ್ಲ್ಯಾಟ್ ಡಿಸ್ಕೌಂಟ್ ಮತ್ತು 5,000 ರು.ಗಳ ಉಚಿತ ಆಕ್ಸೆಸರಿಗಳು.

ಫೋಕ್ಸ್‌ವ್ಯಾಗನ್
ಈಗಾಗಲೇ 2014 ಫೋಕ್ಸ್‌ಫೆಸ್ಟ್ ಆರಂಭಿಸಿರುವ ಯುರೋಪ್‌ನ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಈ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಭಾರತದಲ್ಲೂ ಅನೇಕ ಜನಪ್ರಿಯ ಮಾದರಿಗಳಿಗೆ ಅನೇಕ ಆಫರುಗಳನ್ನು ಮುಂದಿಡುತ್ತಿದೆ. ಇದರಲ್ಲಿ ಆಫರ್, ಪ್ರಯೋಜನ ಮತ್ತು ಕೊಡುಗೆಗಳು ಒಳಗೊಂಡಿರಲಿದೆ. ಹೊಸ ಪೊಲೊದಲ್ಲಿ ಉಚಿತ ವಿಮೆ ಸೌಲಭ್ಯ ಅಂತೆಯೇ ವೆಂಟೊ ಮತ್ತು ಜೆಟ್ಟಾ ಖರೀದಿಯ ವೇಳೆ ಒಂದು ಲಕ್ಷ ರು.ಗಳ ವರೆಗೆ ಪ್ರಯೋಜನ ನೀಡಲಾಗುತ್ತಿದೆ.

ವೋಲ್ವೋ
ವಿ40 ಕ್ರಾಸ್ ಕಂಟ್ರಿ - 2.5 ಲಕ್ಷ ರು.ಗಳ ವರೆಗೆ ಪ್ರಯೋಜನ
ಎಸ್80 ಸೆಡಾನ್ - 5.5 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್.
ವಿ. ಸೂ: ಆಫರುಗಳ ಸಂಪೂರ್ಣ ಮಾಹಿತಿಗಾಗಿ ನಿಮ್ಮ ಹತ್ತಿರ ಡೀಲರುಗಳನ್ನು ಸಂಪರ್ಕಿಸಿ.


Click it and Unblock the Notifications








