ನಿರೀಕ್ಷಿಸಿ ಮಾರುತಿ, ಟಾಟಾ, ಮಹೀಂದ್ರ ಎಲೆಕ್ಟ್ರಿಕ್ ಟ್ಯಾಕ್ಸಿ
ಒಂದೆಡೆ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ವಿದ್ಯುತ್ ಚಾಲಿತ ಪ್ರಯಾಣಿಕ ಕಾರುಗಳ ವಿಭಾಗದಲ್ಲಿ ಮುಂಬಡ್ತಿಯನ್ನು ಪಡೆದ್ದಲ್ಲಿ ಇನ್ನೊಂದೆಡೆ ದೇಶದ ಮುಂಚೂಣಿಯ ವಾಹನ ಸಂಸ್ಥೆಗಳಾದ ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ ಅದೇ ಹಾದಿ ತುಳಿಯುತ್ತಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಆದರೆ ಇಲ್ಲಿ ಸ್ವಲ್ಪ ವಿಭಿನ್ನವಾದ ನಡೆಯನ್ನು ಕಾಣಬಹುದು. ಹೌದು, ಅನುಕ್ರಮವಾಗಿ ದೇಶದ ಅತಿ ದೊಡ್ಡ ಕಾರು ಹಾಗೂ ವಾಹನ ಸಂಸ್ಥೆಗಳ ಪಟ್ಟ ಕಟ್ಟಿಕೊಂಡಿರುವ ಮಾರುತಿ ಹಾಗೂ ಟಾಟಾ ಸಂಸ್ಥೆಗಳು ವಿದ್ಯುತ್ ಚಾಲಿತ ವಾಹನಗಳನ್ನು ನಿರ್ಮಿಸಲು ಹೊರಟಿವೆ. ಈ ನಡುವೆ ಈಗಾಗಲೇ ಎಲೆಕ್ಟ್ರಿಕ್ ಪ್ರಯಾಣಿಕ ಸೆಗ್ಮೆಂಟ್‌ನಲ್ಲಿ ತನ್ನ ಸ್ಥಾನ ಭದ್ರ ಮಾಡಿಕೊಂಡಿರುವ ಮಹೀಂದ್ರ ಕೂಡಾ ತಾವೇನೂ ಕಮ್ಮಿಯಲ್ಲವೆಂಬಂತೆ ವಿದ್ಯುತ್ ಚಾಲಿತ ಟ್ಯಾಕ್ಸಿ ವಾಹನಗಳನ್ನು ತಯಾರಿಸುವುದರತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಯೋಜನೆಯ ಅಂಗವಾಗಿ ಮುಂಬರುವ ಎಪ್ರಿಲ್ ತಿಂಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುವುದುದಾಗಿ ಕೇಂದ್ರ ಸರಕಾರ ಯೋಜನೆ ಹಮ್ಮಿಕೊಂಡಿರುವುದು ಕಂಪನಿಗಳಿಗೆ ಇನ್ನಷ್ಟು ಉತ್ತೇಜನ ನೀಡುವಂತಾಗಿದೆ.

ಪ್ರಾರಂಭಿಕ ಹಂತವಾಗಿ ದೆಹಲಿಯಲ್ಲಿ ವಿದ್ಯುತ್ ಚಾಲಿತ ವಾಹನಗಳು ಓಡಾಡಲಿದೆ. ಇದು ಆರಂಭದಲ್ಲಿ 5ರಿಂದ 6 ಕೀ.ಮೀ. ತನಕ ದೂರ ಕ್ರಮಿಸಲಿದೆ.

ಅಂದ ಹಾಗೆ ಮಹೀಂದ್ರವು ಮಾಕ್ಸಿಮೊ ಎಲೆಕ್ಟ್ರಿಕ್ ವಾಹನ ಉತ್ಪಾದಿಸುವ ಯೋಜನೆ ಹೊಂದಿದೆ. ಅದೇ ಹೊತ್ತಿಗೆ ಟಾಟಾ ಮೋಟಾರ್ಸ್ ಹಾಗೂ ಮಾರುತಿ ಸುಜುಕಿ ಸಹ ಇದೇ ಹಾದಿಯನ್ನು ತುಳಿಯಲಿದೆ.

ಈ ಹಿಂದಿನ ಆಟೋ ಶೋದಲ್ಲಿಯೇ ಎಲೆಕ್ಟ್ರಿಕ್ ಉತ್ಪನ್ನ ವರ್ಷನ್ ವಾಹನಗಳನ್ನು ಪ್ರದರ್ಶಿಸಿರುವುದರಿಂದ ಇದನ್ನು ತಯಾರಿಸುವುದು ಕಂಪನಿಗಳಇಗೆ ಅಷ್ಟೊಂದ ದೊಡ್ಡ ಸಮಸ್ಯೆಯಾಗಲ್ಲ ಎಂಬುದು ಅಭಿಪ್ರಾಯವಾಗಿದೆ.

ಮಾರುತಿ ಸುಜುಕಿ ಎಲೆಕ್ಟ್ರಿಕ್ ಇಕೊ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದರೆ ಟಾಟಾ ಮೋಟಾರ್ಸ್ ವಿದ್ಯುತ್ ಚಾಲಿತ ಏಸ್ ಗಾಡಿ ಹೊರತರುವ ಸಾಧ್ಯತೆಯಿದೆ.


Click it and Unblock the Notifications








