ದೇಶದ ರಸ್ತೆಗಳಲ್ಲಿ ಸದ್ದು ಮಾಡಲಿರುವ ಐಕಾನಿಕ್ ಜೀಪ್
ದೇಶದ ರಸ್ತೆಗಳಲ್ಲಿ ಜೀಪ್ ಮತ್ತೆ ಸದ್ದು ಮಾಡಲಿದೆ. ಹೌದು, ಫಿಯೆಟ್ ಇಂಡಿಯಾ ಐಕಾನಿಕ್ ಜೀಪ್ ಬ್ರಾಂಡ್ ದೇಶಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.
ಪ್ರಮುಖವಾಗಿಯೂ ಜೀಪ್ ಗ್ರಾಂಡ್ ಚೆರೋಕೀ ಹಾಗೂ ವ್ರಾಂಗ್ಲರ್ (Grand Cherokee and Wrangler) ಭಾರತಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಈಗಾಗಲೇ ಭಾರತೀಯ ರಸ್ತೆಗಳಲ್ಲಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆಸಿಕ್ಕಿರುವ ಈ ಐಕಾನಿಕ್ ಬ್ರಾಂಡ್‌ಗಳು ವಾಹನ ಪ್ರಿಯರಲ್ಲಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಅಷ್ಟಕ್ಕೂ ಭಾರತಕ್ಕೆ ಪರಿಚಯವಾಗಲಿರುವ ಜೀಪ್ ಬ್ರಾಂಡ್ 2013 ವರ್ಷನ್ ಅಥವಾ ನೂತನ 2014 ವರ್ಷನ್ ಆಗಿರಲಿದೆಯೇ ಎಂಬುದು ಇನ್ನೂ ರಹಸ್ಯವಾಗಿದೆ.

ಟೆಸ್ಟ್ ಡ್ರೈವ್
ಕಳೆದ ವರ್ಷವೇ ಫಿಯೆಟ್ ಜೀಪ್ ಬ್ರಾಂಡ್ ಭಾರತ ರಸ್ತೆ ಪ್ರವೇಶಿಸುವ ಬಗ್ಗೆ ಮಾಹಿತಿ ದೊರಕಿತ್ತು. ಇದೀಗ ದೇಶದ ರಸ್ತೆಗಳಲ್ಲಿ ಜೀಪ್ ಕ್ರಿಯಾತ್ಮಕತೆಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಟೆಸ್ಟ್ ಡ್ರೈವ್ ನಡೆಸಲಾಗುತ್ತಿದೆ.
ಫೋಟೊ ಕೃಪೆ: ರಷ್‌ಲೇನ್
ಆಟೋ ಶೋ
ಈ ಹಿಂದೆ 2013 ಡೆಟ್ರಾಯ್ಟ್ ಆಟೋ ಶೋದಲ್ಲಿ ಪ್ರದರ್ಶನ ಕಂಡಿರುವ 2014 ಜೀಪ್ ಗ್ರಾಂಡ್ ಚೆರೋಕೀ ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.
ಫೋಟೊ ಕೃಪೆ: ರಷ್‌ಲೇನ್
2014 ಗ್ರಾಂಡ್ ಕೆರೊಕೆ
ಇದಕ್ಕೆ ಪೂರಕವೆಂಬಂತೆ 2014 ಗ್ರಾಂಡ್ ಚೆರೋಕೀ ಭಾರತೀಯ ರಸ್ತೆಗಳಲ್ಲಿ ಟೆಸ್ಟಿಂಗ್ ನಡೆಸುತ್ತಿದೆ. ಭಾರತಕ್ಕೆ 2013 ಆವೃತ್ತಿಯ ಬದಲು 2014 ನೂತನ ಕಾರು ಆಗಮನವಾಗಲಿರುವುದು ಬಹುತೇಕ ಖಚಿತವಾಗಿದೆ.
ಫೋಟೊ ಕೃಪೆ: ರಷ್‌ಲೇನ್
ವೆರಿಯಂಟ್
2014 ಜೀಪ್ ಗ್ರಾಂಡ್ ಚೆರೋಕೀ ಲ್ಯಾರೆಡೊ, ಲ್ಯಾರೆಡೊ ಇ, ಲಿಮಿಟೆಡ್, ಓವರ್ ಲ್ಯಾಂಡ್, ಓವರ್ ಲ್ಯಾಂಡ್ ಸಮ್ಮಿತ್ ಹಾಗೂ ಎಸ್‌ಆರ್‌ಟಿ8 ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.
ಫೋಟೊ ಕೃಪೆ: ರಷ್‌ಲೇನ್
ಎಂಜಿನ್ ಮಾಹಿತಿ
ಇದರಲ್ಲಿ 3.0 ಲೀಟರ್ 4x4 ಎಂಜಿನ್ ಆಳವಡಿಸಲಾಗುತ್ತಿದ್ದು, 243 ಪಿಎಸ್ ಪವರ್ (569 ಟಾರ್ಕ್) ಉತ್ಪಾದಿಸುವ ಸಾರರ್ಥ್ಯ ಹೊಂದಿದೆ. ಹಾಗೆಯೇ ಪೆಡಲ್ ಶಿಫ್ಟರ್ ಜತೆಗೆ 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.
ಫೋಟೊ ಕೃಪೆ: ರಷ್‌ಲೇನ್
ದರ ಮಾಹಿತಿ
ದರದ ಬಗ್ಗೆ ಮಾತನಾಡುವುದಾದರೆ ನೂತನ ಜೀಪ್ ಚೆರೋಕೀ ಎಕ್ಸ್ ಶೋ ರೂಂ ದರ 45ರಿಂದ 50 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.
ಫೋಟೊ ಕೃಪೆ: ರಷ್‌ಲೇನ್
ಲಾಂಚ್
ಅಂದ ಹಾಗೆ ನೂತ ಜೀಪ್ ಬ್ರಾಂಡ್ ಭಾರತೀಯ ರಸ್ತೆಯನ್ನು ಮುಂದಿನ ಅಕ್ಟೋಬರ್ ತಿಂಗಳಲ್ಲಿ ಪ್ರವೇಶಿಸುವ ಸಾಧ್ಯತೆಯಿದೆ.
ಫೋಟೊ ಕೃಪೆ: ರಷ್‌ಲೇನ್
ಸಿಬಿಯು
ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಫಿಯೆಟ್ ಇಂಡಿಯಾ, ಭಾರತಕ್ಕೆ ಜೀಪ್ ಬ್ರಾಂಡ್ ಪರಿಚಯಿಸುವ ಯೋಜನೆ ಹೊಂದಿದೆ.
ಫೋಟೊ ಕೃಪೆ: ರಷ್‌ಲೇನ್
ಜೋಡಣೆ
ಹಾಗಿದ್ದರೂ ಸದ್ಯದಲ್ಲೇ ಈ ಪ್ರೀಮಿಯಂ ಎಸ್‌ಯುವಿ ಜೀಪ್‌ನ ಸ್ಥಳೀಯ ಜೋಡಣೆ ಕಾರ್ಯ ಸದ್ಯದಲ್ಲೇ ಆರಂಭಿಸುವ ಸೂಚನೆ ನೀಡಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ನೆರವಾಗಲಿದೆ.
ಫೋಟೊ ಕೃಪೆ: ರಷ್‌ಲೇನ್
ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...
ಫೋಟೊ ಕೃಪೆ: ರಷ್‌ಲೇನ್

Click it and Unblock the Notifications








