ಫೋರ್ಡ್ ಸೌರಶಕ್ತಿ ಕಾರಿನ ಸ್ಟೈಲೇ ಬೇರೆ..!
ನೀವು ಈಗಾಗಲೇ ಫೋರ್ಡ್ ಸಿ ಮ್ಯಾಕ್ಸ್ ಹೈಬ್ರಿಡ್ ಕಾರಿನ ಬಗ್ಗೆ ಕೇಳಿರುವೀರಾ. ಆದರೆ ಇದಕ್ಕೂ ಮುಂದುವರಿದ ತಂತ್ರಗಾರಿಕೆಗೆ ಮೊರೆ ಹೋಗಿರುವ ಅಮೆರಿಕ ಮೂಲದ ಈ ವಾಹನ ತಯಾರಕ ಸಂಸ್ಥೆಯು ನೂತನ ಸಿ ಮ್ಯಾಕ್ಸ್ ಸೌರಶಕ್ತಿಯ ಕಾನ್ಸೆಪ್ಟ್ ಕಾರೊಂದನ್ನು ಅಭಿವೃದ್ಧಿಪಡಿಸಿದೆ.
ಸೂರ್ಯ ಶಾಖದಿಂದ ಚೈತನ್ಯ ತುಂಬುವ ವೋಲ್ವೋ ಕಾರು
ಪ್ರಸ್ತುತ ಸಿ ಮ್ಯಾಕ್ಸ್ ಎನರ್ಜಿ ಪ್ಲಗ್ ಇನ್ ಹೈಬ್ರಿಡ್ ಸೋಲರ್ ಕಾರನ್ನು 2014 ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋದಲ್ಲಿ ಪ್ರದರ್ಶನಗೊಳಿಸಲಿದೆ. ಇದರ ಹಸಿರು ಕಾರಿನ ವಿಶೇಷ ಅಂಶವೆಂದರೆ ಸೌರಶಾಖದಲ್ಲಿ ಚಾರ್ಜ್ ಆಗಲಿದೆ.

ಜಾರ್ಜಿಯಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕ್ಯಾಲಿಫೋರ್ನಿಯಾ ತಲಹದಿಯ ಸಂಸ್ಥೆ ಸನ್‌ಪವರ್ ಜೊತೆಯಲ್ಲಿ ಈ ಫೋರ್ಡ್ ಸಿ ಮ್ಯಾಕ್ಸ್ ಎನರ್ಜಿ ಕಾನ್ಸೆಪ್ಟ್ ಅಭಿವೃದ್ಧಿಪಡಿಸಿದೆ.

ಪ್ರಸ್ತುತ ಕಾರಿನ ಮೇಲ್ಚಾವಣಿಯಲ್ಲಿ ಸೋಲರ್ ಪ್ಯಾನೆಲ್ ಲಗತ್ತಿಸಲಾಗುವುದು. ಇದರ ಫ್ರೆಸ್ನಲ್ ಲೆನ್ಸ್‌ಗಳು ಸೋಲರ್ ಸೆಲ್‌ಗಳಿಗೆ ಶಕ್ತಿ ರವಾನಿಸಲಿದೆ.

ಫೋರ್ಡ್ ಸಂಸ್ಥೆಯ ಪ್ರಕಾರ ದಿನವೊಂದರಲ್ಲಿ ಸೋಲರ್ ಪ್ಯಾನೆಲ್‌ನಲ್ಲಿ ವಿದ್ಯುತ್ ಶಕ್ತಿ ಉತ್ಪಾದಿಸಬಹುದಾಗಿದೆ. ಇದು ನಾಲ್ಕು ಗಂಟೆಗಳ ಚಾರ್ಜಿಂಗ್‌ಗೆ ಸಮಾನವಾಗಿದೆ.

ಪೆಟ್ರೋಲ್ ಹಾಗೂ ವಿದ್ಯುತ್ ಶಕ್ತಿ ಜಟಿಯಾಗಿ ಸಿ ಮ್ಯಾಕ್ಸ್ ಸೋಲರ್ ಎನರ್ಜಿ ಕಾನ್ಸೆಪ್ಟ್ 1000 ಕೀ.ಮೀ. ರೇಂಜ್ ವರೆಗೂ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ಪೈಕಿ ಎಲೆಕ್ಟ್ರಿಕ್ ಶಕ್ತಿ ಮಾತ್ರವಾಗಿ 33 ಕೀ.ಮೀ. ವರೆಗೂ ಚಲಿಸಬಹುದಾಗಿದೆ.

ಕೇವಲ ಸೌರಶಕ್ತಿ ಮಾತ್ರವಲ್ಲದೆ ಸಾಮಾನ್ಯ ವಿದ್ಯುತ್ ಸಾಕೆಟ್‍ನಿಂದಲೂ ಚಾರ್ಜ್ ಮಾಡಿಸಬಹುದೆಂಬುದು ಪ್ರಮುಖ ಅಂಶವಾಗಿದೆ. 2014 ಸಿಇಎಸ್ ಪಾದರ್ಪಣೆ ಬಳಿಕೆ ಟೆಸ್ಟಿಂಗ್ ಕಾರ್ಯವನ್ನು ಫೋರ್ಡ್ ಆರಂಭಿಸಲಿದೆ.


Click it and Unblock the Notifications








