ಹೊಸ ಇಕೊಸ್ಪೋರ್ಟ್ ಕಾರಿನಲ್ಲಿರುವ ಬದಲಾವಣೆಗಳೇನು?
ಭಾರತ ಸೇರಿದಂತೆ ಹಲವು ಜಾಗತಿಕ ಮಾರುಕಟ್ಟೆಯಲ್ಲಿ ವ್ಯಾಪಕ ಯಶಸ್ಸು ಸಾಧಿಸಿರುವ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಮಾದರಿಯ ಹೊಸ ರೂಪವು ಸ್ವಿಜರ್ಲೆಂಡ್‌ನಲ್ಲಿ ಸಾಗುತ್ತಿರುವ 2015 ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿದೆ. ಇದು ಈಗಿರುವ ಮಾದರಿಗಿಂತಲೂ ಹೆಚ್ಚಿನ ವೈವಿಧ್ಯತೆ ಕಾಪಾಡಿಕೊಂಡಿದೆ.
ಅಮೆರಿಕದ ಫೋರ್ಡ್ ಸಂಸ್ಥೆಯು ಇಕೊಸ್ಪೋರ್ಟ್‌ನಲ್ಲಿ ಪರಿಚಯಿಸಿರುವ ಇಕೊಬೂಸ್ಟ್ ಎಂಜಿನ್ ಅತಿ ಹೆಚ್ಚಿನ ಗಮನ ಕೇಂದ್ರಿತವಾಗಿತ್ತು. ಈಗ ಆಧುನಿಕತೆಗೆ ತಕ್ಕಂತೆ ಕೆಲವೊಂದು ಬದಲಾವಣೆಯೊಂದಿಗೆ ಹೊಸ ಇಕೊಸ್ಪೋರ್ಟ್ ಕ್ರೀಡಾ ಬಳಕೆಯ ವಾಹನದಲ್ಲಿ ಕಾಣಬಹುದಾಗಿದೆ.

ಸಾಮಾನ್ಯವಾಗಿ ಕಾಂಪಾಕ್ಟ್ ಎಸ್‌ಯುವಿಗಳನ್ನು ಮಿನಿ ಎಸ್‌ಯುವಿ ಎಂದೇ ಪ್ರೀತಿಯಿಂದ ಕರೆಯಲಾಗುತ್ತದೆ. ಅಂತೆಯೇ ಹಿಂಬದಿಯಲ್ಲಿ ಹೆಚ್ಚುವರಿ ಚಕ್ರಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ.

ಉಳಿದಂತೆ 17 ಇಂಚಿನ ಅಲಾಯ್ ವೀಲ್, ಬ್ಲ್ಯಾಕ್ ರೂಫ್, ಮಿರರ್ ಕ್ಯಾಪ್, ಪ್ರೈವಸಿ ಗಾಜು ಹಾಗೂ ರಿಯರ್ ಡಿಫ್ಯೂಸರ್ ಕ್ರೀಡಾತ್ಮಕ ವಿನ್ಯಾಸಕ್ಕೆ ಕಾರಣವಾಗಲಿದೆ.

ಇನ್ನು ಕಾರಿನ ನಾಯ್ಸ್, ವೈಬ್ರೇಷನ್ ಹಾಗೂ ಹಾರ್ಶ್‌ನೆಶ್ (ಎನ್‌ವಿಎಚ್) ಕಡಿಮೆ ಮಾಡುವುದರಲ್ಲಿ ಫೋರ್ಡ್ ಪರಿಣಾಮಕಾರಿಯೆನಿಸಿಕೊಂಡಿದೆ.

ಕಾರಿನೊಳಗೆ ನಾಲ್ಕು ಇಂಚಿನ ಡಿಸ್‌ಪ್ಲೇ, ಮರು ಸ್ಥಳಾಂತರಗೊಂಡಿರುವ ಹ್ಯಾಂಡ್ ಬ್ರೇಕ್, ಲೆಥರ್ ಸೀಟು, ಹೀಟಡ್ ವಿಂಡ್ ಸ್ಕ್ರೀನ್ ಮುಂತಾದ ವ್ಯವಸ್ಥೆಗಳು ಕಂಡುಬರಲಿದೆ.

ಹಾಗಿದ್ದರೂ ನೀವು ಹಿಂಬದಿಯಲ್ಲಿ ಹೆಚ್ಚುವರಿ ಚಕ್ರವನ್ನು ಬಯಸುವುದಾದ್ದಲ್ಲಿ ಇದಕ್ಕೂ ಫೋರ್ಡ್ ವ್ಯವಸ್ಥೆ ಕಲ್ಪಿಸಿಕೊಡಲಿದೆ. ಇದನ್ನು ಗ್ರಾಹಕರ ಅಭಿರುಚಿಗೆ ಬಿಡಲಾಗಿದೆ.

ವೈಶಿಷ್ಟ್ಯ
- ಭಾಗಶ: ಲೆಥರ್ ಸೀಟು,
- ಕಪ್ಪು ವರ್ಣದ ಇನ್ಸ್ಟ್ರುಮೆಂಟ್ ಪ್ಯಾನೆಲ್,
- ಸೆಂಟ್ರಲ್ ಕನ್ಸಾಲ್, ಡೋರ್ ಪ್ಯಾನೆಲ್,
- 4 ಇಂಚಿನ್ ಮಾಹಿತಿ ಮನರಂಜನಾ ವ್ಯವಸ್ಥೆ,
- ಕ್ರೋಮ್ ಪರ್ ವಿಂಡೋ ಸ್ವಿಚ್,
- ಖಾಸಗಿ ಗಾಜು,
- ಹ್ಯಾಂಡ್ ಬ್ರೇಕ್ ಸ್ಥಾನಪಲ್ಲಟ

ಅಷ್ಟಕ್ಕೂ ಹೊಸ ಇಕೊಸ್ಪೋರ್ಟ್ ಮಾದರಿಯು ಭಾರತಕ್ಕೆ ಯಾವಾಗ ಪ್ರವೇಶಿಸಲಿದೆ ಎಂಬುದು ಇನ್ನು ತಿಳಿದುಬಂದಿಲ್ಲ. ಈ ಬಗೆಗಿನ ನಿರಂತರ ಸುದ್ದಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.


Click it and Unblock the Notifications








