ಫೋರ್ಡ್‌ನಿಂದ ಫಿಗೊ ಕಾಂಪಾಕ್ಟ್ ಸೆಡಾನ್ ಕಾರು ಬಯಲು
ಇದೀಗಷ್ಟೇ ಫೋರ್ಡ್ ಸಂಸ್ಥೆಯು ಫಿಗೊ ಜಾಗತಿಕ ಕಾನ್ಸೆಪ್ಟ್ ಕಾರೊಂದನ್ನು ಅನಾವರಣಗೊಳಿಸಿದೆ. ಫೋರ್ಡ್ ಫಿಗೊ ಕಾನ್ಸೆಪ್ಟ್ ಕಾರೆಂದು ಹೆಸರಿಸಿಕೊಂಡಿರುವ ಹೊಸ ಮಾದರಿ ಸಬ್ 4 ಮೀಟರ್ ಸೆಡಾನ್ ಕಾರಾಗಿರಲಿದೆ.
ಈ ಹಿಂದೆ ಬ್ರೆಜಿಲ್‌ನಲ್ಲಿ ಅನಾವರಣಗೊಂಡಿದ್ದ ಫೋರ್ಡ್ ಕಾ ಕಾನ್ಸೆಪ್ಟ್‌ನಿಂದ ಸ್ಫೂರ್ತಿ ಪಡೆದು ಇದರ ವಿನ್ಯಾಸ ರಚಿಸಲಾಗಿದೆ. ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಸಂಸ್ಥೆಯು, ದೇಶದ ಬಿ ಸೆಗ್ಮೆಂಟ್ ಬೇಡಿಕೆಗಳನ್ನು ಫೋರ್ಡ್ ನೂತನ ಕಾರು ಪೊರೈಸಲಿದೆ ಎಂದಿದೆ.

ಕಾರಿನ ಎಂಜಿನ್ ಮತ್ತಿತರ ವೈಶಿಷ್ಟ್ಯಗಳ ಬಗ್ಗೆ ಫೋರ್ಡ್ ಸಂಸ್ಥೆ ಮಾಹಿತಿ ಬಹಿರಂಗಪಡಿಸಿಲ್ಲ. ಹಾಗಿದ್ದರೂ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಪವರ್ ಫೋಲ್ಡ್ ಕನ್ನಡಿ ಫೋರ್ಡ್ ಪಡೆಯಲಿದೆ ಎಂಬುದು ತಿಳಿದು ಬಂದಿದೆ. ಇದು ಬಾಗುವಂತಹ ವಿನ್ಯಾಸ ಪಡೆದಿದ್ದು, ಢಿಕ್ಕಿಯಾದ ಸಂದರ್ಭದಲ್ಲೂ ಒಡೆದು ಹೋಗುವುದಿಲ್ಲ.

ಕಾರಿನೊಳಗೂ ನಾವೀನ್ಯತೆಯ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಇದರಲ್ಲಿ ಎಂಪಿ3 ಡಿವೈಸ್, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಜತೆಗೆ ನೇವಿಗೇಷನ್ ತಂತ್ರಜ್ಞಾನವಿರಲಿದೆ.

ಭಾರತದಲ್ಲೀಗ ಹೊಸ ಕಾರು ಖರೀದಿಗಾರರು ಸೇರಿದಂತೆ ಎಲ್ಲ ಗ್ರಾಹಕರು ತಮ್ಮ ಕೊಳ್ಳುವ ಕಾರಿನಲ್ಲಿ ಅತಿ ಹೆಚ್ಚು ವೈಶಿಷ್ಟ್ಯಗಳನ್ನು ಬಯಸುತ್ತಾರೆ. ಇದು ಸ್ಮರ್ಧಾತ್ಮಕ ದರಗಳ ಜತೆಗೆ ಗರಿಷ್ಠ ಇಂಧನ ಕ್ಷಮತೆಯನ್ನು ನೀಡುವ ಸಾಮರ್ಥ್ಯ ಹೊಂದಿರಬೇಕು.

ಇಲ್ಲಿ ಆಸಕ್ತಿದಾಯಕ ವಿಚಾರವೆಂದರೆ ಯಾರೂ ಕೂಡಾ ಈ ಕಾನ್ಸೆಪ್ಟ್ ಕಾರಿಗೆ ಫಿಗೊ ಹೆಸರು ಸೂಚಿಸಲಿದೆಯೆಂದು ಅಂದುಕೊಂಡಿರಲಿಲ್ಲ. ಆದರೆ ಎಲ್ಲರಲ್ಲೂ ಬೆರಗುಗೊಳಿಸಿರುವ ಫೋರ್ಡ್ ಸಂಸ್ಥೆಯು ಫಿಗೊ ಕಾನ್ಸೆಪ್ಟ್ ಕಾಂಪಾಕ್ಟ್ ಸೆಡಾನ್ ಕಾರನ್ನು ಅನಾವರಣಗೊಳಿಸಿದೆ.

ಫೋರ್ಡ್ ಫಿಗೊ ಕಾನ್ಸೆಪ್ಟ್ ಹೊಸತೇನಲ್ಲ. ಆದರೆ ಫ್ರಂಟ್ ಗ್ರಿಲ್ ವಿಶ್ವದರ್ಜೆಯ ಗುಣಮಟ್ಟವನ್ನು ಕಾಪಾಡಿಕೊಂಡಿದೆ. ಇದು ಆಕರ್ಷಕ ಎಲ್‌ಇಡಿ ವಿನ್ಯಾಸ ಪಡೆದುಕೊಂಡಿದೆ. ನಿರ್ಮಾಣ ಮಾದರಿಯಲ್ಲೂ ಇದೇ ವಿನ್ಯಾಸವನ್ನು ಕಾಪಾಡಿಕೊಳ್ಳಲಿದೆಯೇ ಎಂಬುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ.

ಫೋರ್ಡ್ ಸಂಸ್ಥೆಯ ಪ್ರಕಾರ ನೂತನ ಕಾನ್ಸೆಪ್ಟ್ ಕಾರಿನ ಒಳಗಡೆ ಶಬ್ದ ಕಡಿಮೆ ಮಾಡುವುದರತ್ತ ನಿರಂತರ ಅಧ್ಯಯನ ಮಾಡಲಾಗಿದೆ. ಹಾಗೆಯೇ ಏರೋಡೈನಾಮಿಕ್ ವಿನ್ಯಾಸದತ್ತ ಗಮನ ಹರಿಸಲಾಗಿದೆ.

ಇದಕ್ಕೂ ಮೊದಲು ಟಾಟಾ ಮೋಟಾರ್ಸ್ ತನ್ನ ನೂತನ ಜೆಸ್ಟ್ ಕಾಂಪಾಕ್ಟ್ ಮಾದರಿಯನ್ನು ಅನಾವರಣಗೊಳಿಸಿತ್ತು. ಇದು ಈ ವಿಭಾಗದಲ್ಲಿ ಇನ್ನಷ್ಟು ಸ್ಪರ್ಧೆಗೆ ಕಾರಣವಾಗಿದೆ. ಈಗಾಗಲೇ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಮತ್ತು ಕಳೆದ ವರ್ಷ ಲಾಂಚ್ ಆಗಿದ್ದ ಹೋಂಡಾ ಅಮೇಜ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮೂಲಗಳ ಪ್ರಕಾರ ಫೋರ್ಡ್ ಫಿಗೊ ಕಾಂಪಾಕ್ಟ್ ಸೆಡಾನ್ ಕಾರು ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಆದರೆ ದರಗಳ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಸದ್ಯ ಈ ಹೊಸ ಮಾದರಿ ಕಾರು ಪ್ರಿಯರ ಮೆಚ್ಚುಗೆಗೆ ಪಾತ್ರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








