ತ್ವರೆ ಮಾಡಿ; ಫೋರ್ಡ್ ಕ್ಲಾಸಿಕ್ ದರ 1 ಲಕ್ಷದ ವರೆಗೂ ಕಡಿತ

Written By:

ಎಂಟ್ರಿ ಲೆವೆಲ್ ಸೆಡಾನ್ ಕಾರು ಸೆಗ್ಮೆಂಟ್‌ಗಳಲ್ಲಿ ನಿಕಟ ಸ್ಪರ್ಧೆಯನ್ನು ಸ್ಪಷ್ಟವಾಗಿ ಅರಿತುಕೊಂಡಿರುವ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ತನ್ನ ಕ್ಲಾಸಿಕ್ ಕಾರಿನ ದರಗಳನ್ನು ಕಡಿತಗೊಳಿಸಿದೆ.

ಮೂಲಗಳ ಪ್ರಕಾರ ಫೋರ್ಡ್ ಕ್ಲಾಸಿಕ್ ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಸಂಸ್ಥೆಯು 70,000 ರು.ಗಳಿಂದ 1 ಲಕ್ಷ ರು.ಗಳ ರು.ಗಳ ವರೆಗೆ ದರ ಇಳಿಕೆಗೊಳಿಸಿದೆ. ಇದು ಖಂಡಿತವಾಗಿಯೂ ಫೋರ್ಡ್ ಬ್ರಾಂಡ್ ಇಷ್ಟಪಡುವ ಗ್ರಾಹಕರಲ್ಲಿ ನಗೆ ಬೀರುವಂತಾಗಿದೆ.

ತ್ವರೆ ಮಾಡಿ; ಫೋರ್ಡ್ ಕ್ಲಾಸಿಕ್ ದರ 1 ಲಕ್ಷದ ವರೆಗೂ ಕಡಿತ

ಇದರೊಂದಿಗೆ ಫೋರ್ಡ್ ಕ್ಲಾಸಿಕ್ ಎಂಟ್ರಿ ಲೆವೆಲ್ ಸೆಡಾನ್ ಕಾರಿನ ಆರಂಭಿಕ ದರ 4.99 ಲಕ್ಷ ರು. ಹಾಗೂ ಟಾಪ್ ಎಂಡ್ ವೆರಿಯಂಟ್ ದರ 7.6 ರು.ಗಳಿಗೆ ನಿಗದಿಯಾಗಿದೆ.

ತ್ವರೆ ಮಾಡಿ; ಫೋರ್ಡ್ ಕ್ಲಾಸಿಕ್ ದರ 1 ಲಕ್ಷದ ವರೆಗೂ ಕಡಿತ

ನಿಮ್ಮ ಮಾಹಿತಿಗಾಗಿ, 2012ರ ಮಧ್ಯಂತರ ಅವಧಿಯಲ್ಲಿ ಫೋರ್ಡ್ ಫಿಯೆಸ್ಟಾ ಜಾಗದಲ್ಲಿ ಕ್ಲಾಸಿಕ್ ಪರಿಚಯಿಸಲಾಗಿತ್ತು.

ತ್ವರೆ ಮಾಡಿ; ಫೋರ್ಡ್ ಕ್ಲಾಸಿಕ್ ದರ 1 ಲಕ್ಷದ ವರೆಗೂ ಕಡಿತ

ಅಂದರೆ ನೂತನ ಫೋರ್ಡ್ ಕ್ಲಾಸಿಕ್ ಕಾರು, ಕಾಂಪಾಕ್ಟ್ ಸೆಡಾನ್ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೇಜ್ ಮತ್ತು ಇನ್ನಷ್ಟೇ ಆಗಮನವಾಗಬೇಕಾಗಿರುವ ಸಬ್ ಫೋರ್ ಮೀಟರ್ ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಕಾರುಗಳಿಗೆ ಸ್ಪರ್ಧೆ ಒಡ್ಡಲಿದೆ.

ತ್ವರೆ ಮಾಡಿ; ಫೋರ್ಡ್ ಕ್ಲಾಸಿಕ್ ದರ 1 ಲಕ್ಷದ ವರೆಗೂ ಕಡಿತ

ಫೋರ್ಡ್ ಕಾರುಗಳ ಪೈಕಿ ಇಕೊಸ್ಪೋರ್ಟ್ ಅತಿ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಂಡಿದೆ. ಆದರೆ ಕ್ಲಾಸಿಕ್ ಆವೃತ್ತಿಗೆ ನಿರೀಕ್ಷಿಸಿದಷ್ಟು ಯಶ ಸಿಗಲಿಲ್ಲ. 2013ನೇ ಶೇಕಡಾ 61ರಷ್ಟು ಕುಸಿತ ದಾಖಲಿಸಿದ್ದ ಕ್ಲಾಸಿಕ್ ಒಟ್ಟು 5,900 ಯುನಿಟ್‌ಗಳಷ್ಟೇ ಮಾರಾಟ ಕಂಡುಕೊಂಡಿದ್ದವು. ಕಳೆದ ಬಾರಿಯಿದು 15,250 ಯುನಿಟ್‌ಗಳಿದ್ದವು.

ತ್ವರೆ ಮಾಡಿ; ಫೋರ್ಡ್ ಕ್ಲಾಸಿಕ್ ದರ 1 ಲಕ್ಷದ ವರೆಗೂ ಕಡಿತ

ಒಟ್ಟಾರೆಯಾಗಿ ಕ್ಲಾಸಿಕ್ ಬೆನ್ನಲ್ಲೇ ಫಿಯೆಸ್ಟಾ ಆವೃತ್ತಿಯನ್ನು ಸ್ಥಾನ ಮರು ನಿರ್ಣಯಿಸುವ ಸಾಧ್ಯತೆಗಳಿದೆ. ಇದು ಈಗಷ್ಟೇ ಎಂಟ್ರಿ ಕೊಟ್ಟಿರುವ ಹೋಂಡಾ ಸಿಟಿ, ಹ್ಯುಂಡೈ ವರ್ನಾ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಸವಾಲುಗಳನ್ನು ಎದುರಿಸಲಿದೆ.

Story first published: Friday, January 17, 2014, 7:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark