ನೆಕ್ಸ್ಟ್ ಜನರೇಷನ್ ಫಿಗೊ ಕಾನ್ಸೆಪ್ಟ್ ಅನಾವರಣ

By Nagaraja

ದೇಶದ ಜನಪ್ರಿಯ ಕಾರುಗಳಲ್ಲಿ ಫೋರ್ಡ್ ಫಿಗೊ ಕೂಡಾ ಒಂದಾಗಿದೆ. ಪ್ರಸ್ತುತ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ನೆಕ್ಸ್ಟ್ ಜನರೇಷನ್ ಫಿಗೊ ಹ್ಯಾಚ್‌ಬ್ಯಾಕ್ ಮಾದರಿಯನ್ನು ಬ್ರೆಜಿಲ್‌ನಲ್ಲಿ ಅನಾವರಣಗೊಳಿಸಿದೆ.

ಬ್ರೆಜಿಲ್‌ನಲ್ಲಿ ಪ್ರದರ್ಶನ ಕಂಡಿರುವ ಮುಂದಿನ ತಲೆಮಾರಿನ ಫಿಗೊ ಕಾನ್ಸೆಪ್ಟ್ ಫೋರ್ಡ್ 'ಕಾ' (Ka) ಎಂದರಿಲ್ಪಡಲಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಈ ಸಣ್ಣ ಕಾರು ಸದ್ಯದಲ್ಲೇ ದಕ್ಷಿಣ ಅಮೆರಿಕ ರಾಷ್ಟ್ರದಲ್ಲಿ ಬಿಡುಗಡೆಯಾಗಲಿದೆ.

ನೆಕ್ಸ್ಟ್ ಜನರೇಷನ್ ಫಿಗೊ ಕಾನ್ಸೆಪ್ಟ್ ಅನಾವರಣ

ಹಿಂದಿನ ಜನರೇಷನ್ ಫಿಗೊ ಮಾದರಿಯನ್ನು ಹೋಲಿಸಿದಾಗ ಫೋರ್ಡ್ ಕಾ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ನೆಕ್ಸ್ಟ್ ಜನರೇಷನ್ ಫಿಗೊ ಕಾನ್ಸೆಪ್ಟ್ ಅನಾವರಣ

ಇದರ ಫ್ರಂಟ್ ಗ್ರಿಲ್‌ನಿಂದ ಹಿಡಿದು ಆಕ್ರಮಣಕಾರಿ ವಿನ್ಯಾಸಕ್ಕೆ ಒತ್ತು ಕೊಡಲಾಗಿದೆ. ಇದು ಸಮತಲದ ಫ್ರಂಟ್ ಗ್ರಿಲ್ ಬದಲಾಗಿ ಇಕೊಸ್ಪೋರ್ಟ್‌ನಲ್ಲಿರುವಂತಹ ಫೋರ್ಡ್ ಟ್ರೇಡ್ ಮಾರ್ಕ್ ಆಗಿರುವ ಹನಿಕಾಂಬ್ ಗ್ರಿಲ್ ಪಡೆದುಕೊಂಡಿದೆ.

ನೆಕ್ಸ್ಟ್ ಜನರೇಷನ್ ಫಿಗೊ ಕಾನ್ಸೆಪ್ಟ್ ಅನಾವರಣ

ಉಳಿದಂತೆ ನಿರ್ಮಾಣ ವರ್ಷನ್‌ನಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ ಹಾಗೆಯೇ ಮುಂಭಾಗದ ಹೆಡ್‌ಲ್ಯಾಂಪ್‌‍ನಲ್ಲಿ ಸಮಾನ ಆಕಾರ ಉಳಿಸಿಕೊಳ್ಳಲಾಗಿದೆ.

ನೆಕ್ಸ್ಟ್ ಜನರೇಷನ್ ಫಿಗೊ ಕಾನ್ಸೆಪ್ಟ್ ಅನಾವರಣ

ಇದರ 1.0 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ 85 ಬಿಎಚ್‌ಪಿ (105 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ.

ನೆಕ್ಸ್ಟ್ ಜನರೇಷನ್ ಫಿಗೊ ಕಾನ್ಸೆಪ್ಟ್ ಅನಾವರಣ

ಅಂದ ಹಾಗೆ ಫೋರ್ಡ್ ಮುಂದಿನ ತಲೆಮಾರಿನ ಕಾ ಕಾನ್ಸೆಪ್ಟ್ ಭಾರತ ಮಾರುಕಟ್ಟೆಯನ್ನು ಮುಂದಿನ ವರ್ಷ ಪ್ರವೇಶ ಪಡೆಯಲಿದೆ. ಅಲ್ಲದೆ ಬಹುತೇಕ ಇದೇ ವಿನ್ಯಾಸ ಕಾಪಾಡಿಕೊಳ್ಳುವ ಸಾಧ್ಯತೆಯಿದೆ. ಆದರೆ ಭಾರತ ಮಾದರಿಯಲ್ಲಿ ಡೀಸೆಲ್ ಎಂಜಿನ್ ಸೇರ್ಪಡೆಯಾಗುವ ಸಾಧ್ಯತೆಯಿದೆ.

More from DriveSpark

Article Published On: Wednesday, June 11, 2014, 17:21 [IST]
English summary
Ford Brazil has revealed the production version of the Ka Concept hatchback that was first revealed in November last year. The Ka hatchback will be launched soon in the South American country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+