ಏನಿದು ಸಮಸ್ಯೆ? ಇಕೊಸ್ಪೋರ್ಟ್ ಡೀಸೆಲ್ ಕಾರು ರಿಕಾಲ್

By Nagaraja

ಇನ್ನೇನು ಲಾಂಚ್ ಆದ ಕೆಲವೇ ದಿನಗಳೊಳಗೆ ಫೋರ್ಡ್ ಇಕೊಸ್ಪೋರ್ಟ್ ನೂತನ ಸಮಸ್ಯೆ ಎದುರಿಸತೊಡಗಿದೆ. ಇದೇ ಕಾರಣಕ್ಕಾಗಿ ಈ ವರೆಗೆ ಹಸ್ತಾಂತರಿಸಲಾದ ಡೀಸೆಲ್ ಆವೃತ್ತಿಗಳನ್ನು ವಾಪಾಸ್ ಪಡೆದು ಸರಿಪಡಿಸಿ ಕೊಡಲು ಕಂಪನಿ ನಿರ್ಧರಿಸಿದೆ.

ಏನಿದು ಸಮಸ್ಯೆ?
ಫೋರ್ಡ್ ಕಂಪನಿಯ ಪ್ರಕಾರ ಗ್ಲೋ ಪ್ಲಗ್ ಮಾಡ್ಯೂಲ್ ಸ್ಥಾಪನೆ ಮಾಡಿರುವುದರಲ್ಲಿ ಸಮಸ್ಯೆ ಕಂಡುಬಂದಿದೆ. ಹಾಗಾಗಿ ಶೀಘ್ರದಲ್ಲೇ ಗ್ಲೋ ಪ್ಲಗ್ ಮ್ಯಾಡೂಲ್ ಮರುಸ್ಥಾಪಿಸಲಾಗುವುದು ಎಂದಿದೆ. ಮುಂಜಾಗ್ರತಾ ಕ್ರಮವಾಗಿ ಕಂಪನಿಯಿಂದ ಇಂತಹದೊಂದು ಕ್ರಮ ಕಂಡುಬಂದಿದೆ.

ಕಳೆದ ತಿಂಗಳಷ್ಟೇ ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಲಾಂಚ್ ಆಗಿತ್ತಲ್ಲದೆ ಭಾರಿ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಕೊಸ್ಪೋರ್ಟ್ ಡೀಸೆಲ್ ಕಾರು ರಿಕಾಲ್

ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಕಾರು ಈಗಾಗಲೇ 10,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದೆ.

ಇಕೊಸ್ಪೋರ್ಟ್ ಡೀಸೆಲ್ ಕಾರು ರಿಕಾಲ್

ಈ ಪೈಕಿ 972 ಡೀಸೆಲ್ ಕಾರುಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ.

ಇಕೊಸ್ಪೋರ್ಟ್ ಡೀಸೆಲ್ ಕಾರು ರಿಕಾಲ್

ಗ್ರಾಹಕರು ಫೋರ್ಡ್ ಅಧಿಕೃತ ಡೀಲರುಗಳ ಬಳಿ ತೆರಳಿ ಕಾರಿನ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.

ಇಕೊಸ್ಪೋರ್ಟ್ ಡೀಸೆಲ್ ಕಾರು ರಿಕಾಲ್

ಸಂಪೂರ್ಣ ಉಚಿತವಾಗಿ ಗ್ಲೋ ಪ್ಲಗ್ ಮಾಡ್ಯೂಲ್ ಮರು ಸ್ಥಾಪಿಸಲಾಗುವುದು. ಇದಕ್ಕೆ 90 ನಿಮಿಷಗಳಷ್ಟು ಸಮಯ ತಗುಲಲಿದೆ.

ಇಕೊಸ್ಪೋರ್ಟ್ ಡೀಸೆಲ್ ಕಾರು ರಿಕಾಲ್

ಗ್ಲೋ ಪ್ಲಗ್ ಮಾಡ್ಯೂಲ್‌ನಿಂದ ಇದುವರೆಗೆ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಡೀಸೆಲ್ ಕಾರುಗಳನ್ನು ವಾಪಾಸ್ ಪಡೆಯಲಾಗುತ್ತಿದೆ.

ಇಕೊಸ್ಪೋರ್ಟ್ ಡೀಸೆಲ್ ಕಾರು ರಿಕಾಲ್

ಗ್ರಾಹಕರ ಸುರಕ್ಷತೆ ಹಾಗೂ ತೃಪ್ತಿಗಾಗಿ ಫೋರ್ಡ್ ಇಂತಹದೊಂದು ಕ್ರಮ ಕೈಗೊಂಡಿದೆ.

ಫೋರ್ಡ್ ದೈನಂದಿನ ಪರಿಶೀಲನೆ ವೇಳೆ ಸಮಸ್ಯೆ ಕಂಡುಹಿಡಿಯಲಾಗಿದೆ. ಇದರಿಂದಾಗಿ ತಾತ್ಕಾಲಿಕ ರಿಕಾಲ್ ಆದೇಶಿಸಲಾಗಿದೆ.

More from DriveSpark

Article Published On: Friday, July 12, 2013, 11:03 [IST]
English summary
Ford India has recalled diesel variant EcoSport just two weeks after its formal launch in India. The company has released a statement which says, “As a part of routine checks, we discovered a potential concern with EcoSport diesel variants related to the glow plug module which requires relocating the module. We are contacting customers to take their vehicle to their Ford dealership to have the work carried out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+