ಭಾರತಕ್ಕೆ ಬಂದಿತೇ ಫೋರ್ಡ್‌ ಎಸ್-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್?

By Nagaraja

ಬಹುನಿರೀಕ್ಷಿತ 2014 ಪ್ಯಾರಿಸ್ ಮೋಟಾರು ಶೋ ಸಮೀಪಿಸುತ್ತಿರುವಂತೆಯೇ ಅಮೆರಿಕ ಮೂಲದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್ ಹೊಸತಾದ ಎಸ-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವಾಹನವನ್ನು ಪ್ರದರ್ಶಿಸಲು ಸನ್ನದ್ಧವಾಗಿ ನಿಂತಿದೆ.

ನೂತನ ಫೋರ್ಡ್ ಎಸ್ ಮ್ಯಾಕ್ಸ್ ವೆಹಿಕಲ್ 2.0 ಲೀಟರ್ ಟಿಡಿಸಿಐ (TDCi) ಡೀಸೆಲ್ ಮತ್ತು 1.5 ಲೀಟರ್ ಇಕೊಬೂಸ್ಟ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಹೊಸ ಫೋರ್ಡ್ ಎಸ್ ಮ್ಯಾಕ್ಸ್ ಕಾರಿನ ಪ್ರಮುಖ ವೈಶಿಷ್ಟ್ಯವೆಂದರೆ ಚಾಲಕನಿಗೆ ಸಣ್ಣ ಕಾರಿನ ಚಾಲನಾ ಅನುಭವ ಪಡೆಯಬಹುದಾದರೂ ಏಳು ಮಂದಿ ಪ್ರಯಾಣಿಕರಿಗೆ ಆರಾಮವಾಗಿ ಚಲಿಸಬಹುದಾಗಿದೆ.

ಫೋರ್ಡ್‌ ಎಸ್-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್

ಹಾಗೊಂದು ವೇಳೆ ಹೊಸ ಎಕ್ಸ್ ಮ್ಯಾಕ್ಸ್ ಕಾರು ಭಾರತ ಪ್ರವೇಶ ಪಡೆದ್ದಲ್ಲಿ ಹೋಂಡಾ ಮೊಬಿಲಿಯೊ, ಮಾರುತಿ ಸುಜುಕಿ ಎರ್ಟಿಗಾ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ದಟ್ಸನ್ ಗೊ ಪ್ಲಸ್ ಮಾದರಿಗಳಿಗೆ ನೇರ ಪೈಪೋಟಿ ಒಡ್ಡಲಿದೆ.

ಫೋರ್ಡ್‌ ಎಸ್-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್

ಈ ಮೊದಲೇ ತಿಳಿಸಿರುವಂತೆಯೇ 2014 ಪ್ಯಾರಿಸ್ ಮೋಟಾರು ಶೋದಲ್ಲಿ ಪ್ರದರ್ಶನ ಕಾಣಲಿರುವ ಎಕ್ಸ್ ಮ್ಯಾಕ್ಸ್ ವಿನ್ಯಾಸ ರೂಪಿಸುವುದರಲ್ಲಿ ತಯಾರಕರು ಯಾವುದೇ ರಾಜಿಗೂ ತಯಾರಾಗಿಲ್ಲ. ಇದು ತಾಜಾ ಹಾಗೂ ವಿಭಿನ್ನ ಹೊರ ವಿನ್ಯಾಸ ಪಡೆದುಕೊಂಡಿದೆ.

ಫೋರ್ಡ್‌ ಎಸ್-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್

ಯುರೋಪ್‌ನಲ್ಲಿ ಅತ್ಯಂತ ಹೆಚ್ಚು ಜನಪ್ರಿಯವಾಗಿರುವ ಎಸ್ ಮ್ಯಾಕ್ಸ್ 2007ನೇ ಇಸವಿಯಲ್ಲೇ 'ವರ್ಷದ ಕಾರು' ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಅಂತೆಯೇ ಮುಂದುಗಡೆ ಫೋರ್ಡ್‌ನ ವಿಶಿಷ್ಟ ಗ್ರಿಲ್ ಪಡೆದುಕೊಂಡಿದೆ.

ಫೋರ್ಡ್‌ ಎಸ್-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್

ಇನ್ನು ಬದಿಯಿಂದ ವೀಕ್ಷಿಸಿದಾಗ ಎಸ್ ಮ್ಯಾಕ್ಸ್ ಉದ್ದವಾಗಿ ಗೋಚರಿಸುತ್ತಿದ್ದರೂ ಚಾಲಕರಿಗೆ ಸಣ್ಣ ಕಾರಿನ ಅನುಭವ ನೀಡಲಿದೆ. ಇದಕ್ಕೆ ಮಲ್ಟಿ ಸ್ಪೋಕ್ ಅಲಾಯ್ ವೀಲ್ ಸಹ ಲಗತ್ತಿಸಲಾಗಿದೆ.

ಫೋರ್ಡ್‌ ಎಸ್-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್

ಹಿಂದುಗಡೆ ಉದ್ದವಾದ ಸ್ಟೈಲಿಷ್ ಟೈಲ್ ಲೈಟ್ ಕಾರಿಗೆ ಹೆಚ್ಚು ಆಕರ್ಷಣೆ ನೀಡುತ್ತದೆ. ಅದೇ ರೀತಿ ಡ್ಯುಯಲ್ ಎಕ್ಸಾಸ್ಟ್ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ.

ಫೋರ್ಡ್‌ ಎಸ್-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್

ಕಾರಿನೊಳಗೆ ಫೋರ್ಡ್ ಸಂಸ್ಥೆಯು ಶುಭ್ರವಾಗಿರಿಸಿದ್ದು, ಕನಿಷ್ಠ ಡಿವೈಸ್‌ಗಳೊಂದಿಗೆ ಗರಿಷ್ಠ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ. ಇಲ್ಲಿ ಅಲ್ಯೂಮಿನಿಯಂ ಮಿಶ್ರಿತ ಕಪ್ಪು ಇಂಟಿರಿಯರ್ ಅನುಭವ ಸವಿಯಬಹುದಾಗಿದೆ. ಇದರಲ್ಲಿ ಮಾಹಿತಿ ಮನರಂಜನಾ ವ್ಯವಸ್ಥೆಯ ಜೊತೆಗೆ ಹಿಂದುಗಡೆ ಪ್ರಯಾಣಿಕರಿಗೂ ಮೀಸಲಾದ ತಾಪಮಾನ ನಿಯಂತ್ರಣ ವ್ಯವಸ್ಥೆಯಿರಲಿದೆ.

ಫೋರ್ಡ್‌ ಎಸ್-ಮ್ಯಾಕ್ಸ್ ಸ್ಪೋರ್ಟ್ಸ್ ಆಕ್ಟಿವಿಟಿ ವೆಹಿಕಲ್

ಒಟ್ಟಾರೆಯಾಗಿ ಮೊದಲು ಯುರೋಪ್ ಮಾರುಕಟ್ಟೆ ಪ್ರವೇಶಿಸಿರುವ ಫೋರ್ಡ್ ಎಸ್ ಮ್ಯಾಕ್ಸ್ ಭಾರತ ಪ್ರವೇಶ ಪಡೆಯಲಿದೆಯೇ ಎಂಬುದು ಇನ್ನಷ್ಟೇ ಘೋಷಣೆಯಾಗಬೇಕಿದೆ.

More from DriveSpark

Article Published On: Wednesday, September 17, 2014, 15:07 [IST]
English summary
The Paris Motor Show is an event where the world's top and best manufacturers showcase their products. The American based four wheeler company Ford will also be revealing its new Sports Activity Vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+