ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

By Nagaraja

ಈ ಸುದ್ದಿ ಕೇಳಿದ ತಕ್ಷಣ ನಿಮ್ಮಲ್ಲಿ ಆಶ್ಚರ್ಯವುಂಟಾಗಬಹುದು. ಭಾರತದಲ್ಲೂ ಚೀನಾ ಗ್ರೇಟ್ ವಾಲ್ ನಿರ್ಮಾಣವಾಗುತ್ತಿದೆಯೇ ಎಂಬ ಆತಂಕ ಕಾಡಬಹುದು. ವಿಷಯ ಇಷ್ಟೇ ಚೀನಾ ತಲಹದಿಯ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಉತ್ಪಾದಕ ಸಂಸ್ಥೆಯೊಂದು ಭಾರತದಲ್ಲಿ ತನ್ನ ನೆಲೆ ಸ್ಥಾಪಿಸುತ್ತಿದೆ.

ಆಟೋಮೊಬೈಲ್ ಜಗತ್ತಿನ ಪಾಲಿಗೆ ಇಂದೊಂದು ಸಿಹಿ ಸುದ್ದಿಯಾಗಿದೆ. ರಾಜಕೀಯ ದೃಷ್ಟಿಕೋನದಲ್ಲಿ ಭಾರತೀಯ ಆಂತರಿಕ ಭದ್ರತೆಗೆ ಚೀನಾ ಸವಾಲಾಗಿದ್ದರೂ ಪ್ರಸ್ತುತ ಬೆಳವಣಿಗೆಯನ್ನು ಧನಾತ್ಮಕವಾಗಿ ಪರಿಗಣಿಸಲಾಗುತ್ತಿದೆ.

ಚೀನಾದ ಎಸ್‌ಯುವಿ ದೈತ್ಯ ಕಂಪನಿಯಾಗಿರುವ ಗ್ರೇಟ್ ವಾಲ್ ಮೋಟಾರ್ಸ್, ಪುಣೆಯಲ್ಲಿ ನೂತನ ಘಟಕ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ಘಟಕ ಆರಂಭಗೊಳ್ಳಲಿದ್ದು, ಗ್ರಾಹಕರಿಗೆ ಆತ್ಯಾಧುನಿಕ ಎಸ್‌ಯುವಿ ಅನುಭವ ನೀಡಲಿದೆ.

ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

ನಿಮ್ಮ ಮಾಹಿತಿಗಾಗಿ ಚೀನಾದಲ್ಲಿ ಯಶಸ್ಸು ಕಂಡಿರುವ ಹವೆಲ್ ಎಚ್5 ಎಸ್‌ಯುವಿ ಕಾರನ್ನು ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯ ಮಾಡಿಕೊಡಲು ಗ್ರೇಟ್ ವಾಲ್ ಮೋಟಾರ್ಸ್ ಯೋಜನೆ ಹೊಂದಿದೆ. ಈ ಮೂಲಕ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

ಎಸ್‌ಯುವಿಗಳ ಜತೆಗೆ ಇತರ ಸೆಗ್ಮೆಂಟ್ ಕಾರುಗಳನ್ನು ಯೋಜನೆಯನ್ನು ಚೀನಾದಲ್ಲಿ ಎಂಟನೇ ಅತಿದೊಡ್ಡ ವಾಹನ ತಯಾರಕ ಎನಿಸಿಕೊಂಡಿರುವ (ಉತ್ಪನ್ನದಲ್ಲಿ 6ನೇ ಸ್ಥಾನ) ಗ್ರೇಟ್ ವಾಲ್ ಮೋಟಾರ್ಸ್ ಹೊಂದಿದೆ.

ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

ಇದೇ ಮೊದಲ ಬಾರಿಗೆ ಚೀನಾ ವಾಹನ ತಯಾರಕ ಕಂಪನಿಯೊಂದು ಭಾರತಕ್ಕೆ ಎಂಟ್ರಿ ಕೊಡುತ್ತಿದೆ. ಭಾರತದಲ್ಲೇ ಉತ್ಪಾದನೆ ನಡೆಯಲಿರುವುದರಿಂದ ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗಲಿದೆ.

ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

ಅಷ್ಟೇ ಅಲ್ಲದೆ ಮುಂದಿನ ವರ್ಷ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ, ಹವೆಲ್ ಎಚ್5 ಎಸ್‌ಯುವಿ ಅನಾವರಣಗೊಳ್ಳಲಿದೆ. ಹಾಗೆಯೇ 2016ರ ವೇಳೆಗೆ ಕಾರು ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

ಆರಂಭದಲ್ಲಿ ತಮಿಳುನಾಡು ಹಾಗೂ ಗುಜರಾತ್‌ನಲ್ಲಿ ಘಟಕ ಆರಂಭಿಸುವ ಕುರಿತು ಆಸಕ್ತಿ ತಾಳಿತ್ತಾದರೂ ಮುಂದುವರಿದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಸರಕಾರದಿಂದ ಪೂರಕ ಬೆಂಬಲ ದೊರಕಿರುವುದರಿಂದ ಪುಣೆಯಲ್ಲಿ ಘಟಕ ತೆರೆಯಲು ನಿರ್ಧರಿಸಿದೆ.

ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

ಈ ಹಿಂದೆ ನವದೆಹಲಿ ಮೂಲದ ಟ್ರಾಕ್ಟರ್ ಉತ್ಪಾದಕ ಅಂತರಾಷ್ಟ್ರೀಯ ಕಾರು ಹಾಗೂ ಮೋಟಾರ್ ಲಿಮಿಟೆಡ್ ಜತೆ ಪಾಲುದಾರಿಕೆ ನಡೆಸಲು ಗ್ರೇಟ್ ವಾಲ್ ಮೋಟಾರ್ಸ್ ಯೋಜನೆ ಹೊಂದಿತ್ತು. ಆದರೆ ಕಾರಣಾಂತರಗಳಿಂದಾಗಿ ಯೋಜನೆ ವಿಫಲಗೊಂಡಿದ್ದರಿಂದ ಸ್ವತಂತ್ರವಾಗಿ ಭಾರತಕ್ಕೆ ಲಗ್ಗೆಯಿಡಲು ಕಂಪನಿ ನಿರ್ಧರಿಸಿದೆ.

ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

ಗ್ರೇಟ್ ವಾಲ್ ಮೋಟಾರ್ಸ್ ಭಾರತಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದ್ದು, 1,500 ಕೋಟಿ ರು.ಗಿಂತಹೂಲ ಹೆಚ್ಚು ಮೊತ್ತ ಹೂಡಿಕೆ ಮಾಡುವ ಸಂಭವವಿದೆ.

ಭಾರತದಲ್ಲೂ ನಿರ್ಮಾಣವಾಗಲಿದೆ ಚೀನಾ ಗ್ರೇಟ್ ವಾಲ್

ಒಟ್ಟಿನಲ್ಲಿ ಭಾರತದಲ್ಲೂ ಚೀನಾ ಗ್ರೇಟ್ ವಾಲ್ ನಿರ್ಮಾಣವಾಗಲು ಸಿದ್ಧತೆ ನಡೆಯುತ್ತಿದೆ. ಇದೀಗ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

More from DriveSpark

Article Published On: Tuesday, June 11, 2013, 9:28 [IST]
English summary
Great Wall Motors, China's largest SUV manufacturer and the country's eighth largest automaker overall (sixth largest in terms of volume), is working towards setting up a manufacturing plant in Pune. Great Wall Motors is expected to introduce the Havel H5 suv along with a host of other cars for the Indian market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+