ಮುಂದಿನ ಆರ್ಥಿಕ ಸಾಲಿನಲ್ಲಿ ಪಜೆರೊ ಸ್ಪೋರ್ಟ್ ಲಾಂಚ್
ಹಿಂದೂಸ್ತಾನ್ ಮೋಟಾರ್ಸ್ ಜತೆ ಜತೆಗಾರಿಕೆ ಹೊಂದಿರುವ ಜಪಾನ್ ಮೂಲದ ಮಿಟ್ಸುಬಿಸಿ ಸಂಸ್ಥೆಯು ನೂತನ ಪಜೆರೊ ಸ್ಪೋರ್ಟ್ಸ್ ಕಾರನ್ನು ಭಾರತ ಮಾರುಕಟ್ಟೆಗೆ ಪರಿಚಯಿಸಲಿದೆ.
ಬಲ್ಲ ಮೂಲಗಳ ಪ್ರಕಾರ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ತಂತ್ರಗಾರಿಕೆ ಹೊಂದಿರುವ ಪಜೆರೊ ಸ್ಪೋರ್ಟ್ ಕಾರನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ದೇಶಕ್ಕೆ ಹಿಂದೂಸ್ತಾನ್ ಮೋಟಾರ್ಸ್ ಪರಿಚಯಿಸಲಿದೆ.

2012ರಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮೂಲಕ ಪಜೆರೊ ದೇಶಕ್ಕೆ ಆಗಮಿಸಿತ್ತು. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕೂಡಾ ಪಡೆದಿತ್ತಲ್ಲದೆ 178 ಬಿಎಚ್‌ಪಿ (400 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.

ಇದರ ಜತಗೆ ಮಿಟ್ಸುಬಿಸಿ ಸೂಪರ್ ಸೆಲೆಕ್ಟ್ 4ಡಬ್ಲ್ಯುಡಿ ಸಿಸ್ಟಂ ಕೂಡಾ ಹೊಂದಿದೆ. ಹಾಗೆಯೇ ಕೊನೆಯದಾಗಿ ಜುಲೈ ತಿಂಗಳಲ್ಲಿ ಪಜೆರೊ ಸ್ಪೋರ್ಟ್ ವಾರ್ಷಿಕ ಎಡಿಷನ್ ಲಾಂಚ್ ಮಾಡಲಾಗಿತ್ತು.

ಈ ನಡುವೆ ಔಟ್ಲೆಂಡರ್, ಸಿಡಿಯಾ ಸ್ಪೋರ್ಟ್ ಮತ್ತು ಇವೊ ಎಕ್ಸ್ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಭಾರತದಲ್ಲಿ ಪಜೆರೊ ಸ್ಪೋರ್ಟ್ ಮತ್ತು ಮೊಂಟೆರೊ ಆವೃತ್ತಿಗಳನ್ನು ಮಾತ್ರ ಮಿಟ್ಸುಬಿಸಿ ಮಾರಾಟ ಮಾಡುತ್ತಿವೆ.

ಪಜೆರೊ ಸ್ಪೋರ್ಟ್ ಆಟೋಮ್ಯಾಟಿಕ್ ವರ್ಷನ್ ಐಎನ್‌ವಿಸಿಎಸ್-II 5 ಸ್ಪೀಡನ್ ಜತೆ ಸ್ಪೋರ್ಟ್‌ಟ್ರಾನಿಕ್ ಟ್ರಾನ್ಸ್‌ಮಿಷನ್ ಪಡೆದಲಿದೆ. ಪ್ರಸ್ತುತ ಕಾರು ಥಾಯ್ಲೆಂಡ್‌ನಲ್ಲಿ ಈಗಾಗಲೇ ಮಾರಾಟದಲ್ಲಿದೆ.

ಒಟ್ಟಾರೆಯಾಗಿ ಪ್ರಸಕ್ತ ವರ್ಷದಲ್ಲೇ 2014 ಔಟ್ಲೆಂಡರ್ ಜತೆಗೆ ಪಜೆರೊ ಸ್ಪೋರ್ಟ್ ಆಟೋಮ್ಯಾಟಿಕ್ ಕಾರನ್ನು ಲಾಂಚ್ ಮಾಡುವ ಇರಾದೆಯನ್ನು ಮಿಟ್ಸುಬಿಸಿ ಹೊಂದಿದೆ.


Click it and Unblock the Notifications








