ಹೋಂಡಾ ಅಮೇಜ್ ರೆಡಿ; ಅಮೆಜಿಂಗ್ ಮೈಲೇಜ್
ಬಹುನಿರೀಕ್ಷಿತ ಹೋಂಡಾ ಅಮೇಜ್ ಡೀಸೆಲ್ ಆವೃತ್ತಿ ಬಿಡುಗಡೆ ಸಿದ್ಧಗೊಂಡಿರುವಂತೆಯೇ ಮೈಲೇಜ್ ಸೇರಿದಂತೆ ಇತರ ಮಹತ್ವಪೂರ್ಣ ವೈಶಿಷ್ಟ್ಯಗಳ ಬಗೆಗಿನ ವಿವರಣೆಗಳು ಲಭ್ಯವಾಗಿದೆ.
ಹೋಂಡಾ ಅಮೇಜ್ ಬಿಡುಗಡೆ ದಿನಾಂಕ: 11 ಎಪ್ರಿಲ್, 2013
ಪ್ರಮುಖವಾಗಿಯೂ ದೇಶದ ಕಾರು ಖರೀದಿ ಗ್ರಾಹಕರು ಕಾರು ನಿರ್ವಹಣೆ ಹಾಗೂ ಮೈಲೇಜ್ ಮೇಲೆ ಹೆಚ್ಚಿನ ಗಮನ ಕೊಡುತ್ತಾರೆ. ಅದೇ ರೀತಿ ಹೋಂಡಾ ಅಮೇಜ್ ನಿಜಕ್ಕೂ ಅಮೆಜಿಂಗ್ ಎನಿಸಿಕೊಂಡಿದ್ದು, ಎಆರ್‌ಎಐ (ARAI) ಮಾನ್ಯತೆ ಪ್ರಕಾರ ಈ ಸೆಡಾನ್ ಕಾರು ಪ್ರತಿ ಲೀಟರ್‌ಗೆ 25.8 ಲೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.
ದೇಶದ ಪ್ರಮುಖ ಆಟೋ ಮೊಬೈಲ್ ವೆಬ್‌ಸೈಟ್ ರಷ್‌ಲೈನ್‌ನಲ್ಲಿ ಇದು ವ್ಯಕ್ತವಾಗಿದೆ. ಈ ಮೂಲಕ ದೇಶದ ಅತ್ಯುತ್ತಮ ಇಂಧನ ದಕ್ಷತೆಯ ಕಾರು ಎನಿಸಿಕೊಳ್ಳಲಿದೆ.
ಅಂದ ಹಾಗೆ ಹೋಂಡಾ ಅಮೇಜ್‌ನಲ್ಲಿ 1.5 ಲೀಟರ್ ಐ-ಡಿಟೆಕ್ (i-DTEC) ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಹಾಗಿದ್ದರೆ ಬನ್ನಿ ಕಾರಿನ ವೈಶಿಷ್ಟ್ಯಗಳ ಬಗ್ಗೆ ಫೋಟೊ ಫೀಚರ್ ಮೂಲಕ ತಿಳಿಯೋಣವೇ...(ಫೋಟೊ ಕೃಪೆ: ರಷ್‌ಲೈನ್)

ಹೋಂಡಾ ಅಮೇಜ್
ಬ್ರಿಯೊ ತಲಹದಿಯಲ್ಲಿ ನೂತನ ಅಮೇಜ್ ತಯಾರಿಸಲಾಗಿದೆ. ಆದರೆ ಬ್ರಿಯೊ ಅಂತ ಅಲಕ್ಷ್ಯ ಮಾಡಬೇಡಿರಿ. ಯಾಕೆಂದರೆ ಹೋಂಡಾ ಅಮೇಜ್ ಹೆಚ್ಚುವರಿ 400 ಲೀಟರ್ ಬೂಟ್ ಸ್ಪೇಸ್ ಪಡೆದಿದೆ.

ಹೋಂಡಾ ಅಮೇಜ್
ಈ 1.5 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಕಾರಿನಲ್ಲಿ ಹೆಚ್ಚಿನ ಲೆಗ್ ರೂಂ ಸಹಿತ ಹೆಡ್ ರೂಂ ಕೂಡಾ ಒದಗಿಸಲಾಗಿದೆ.

ಹೋಂಡಾ ಅಮೇಜ್
ಹೋಂಡಾ ಅಮೇಜ್ ಪೆಟ್ರೋಲ್ ಆವೃತ್ತಿಯಲ್ಲೂ ಲಭ್ಯವಿದ್ದು, 1.2 ಲೀಟರ್ ಐ-ವಿಟೆಕ್ ( i-VTEC) ಎಂಜಿನ್, 88 ಪಿಎಸ್ ಪವರ್ (109 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೋಂಡಾ ಅಮೇಜ್
ಅಮೇಜ್ ಪೆಟ್ರೋಲ್ ಆವೃತ್ತಿ ಐದು ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನಲ್ಲಿ ಲಭ್ಯವಿರಲಿದೆ. ಹಾಗೆಯೇ ಅಮೇಜ್ ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯಂಟ್ ಪ್ರತಿ ಲೀಟರ್‌ಗೆ 15.5 ಹಾಗೂ ಮ್ಯಾನುವಲ್ ಟ್ರಾನ್‌ಮಿಷನ್ 18 ಕೀ.ಮೀ. ಮೈಲೇಜ್ ನೀಡಲಿದೆ.

ಹೋಂಡಾ ಅಮೇಜ್
ಹಾಗಿದ್ದರೂ ದರದ ಬಗ್ಗೆ ಯಾವುದೇ ಮಾಹಿತಿಗಳು ಹೊರಬಂದಿಲ್ಲ. ಪ್ರಸ್ತುತ ಕಾರು ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್‌ಗೆ ಪ್ರಮುಖ ಪೈಪೋಟಿಯಾಗಿರಲಿದೆ.

ಹೋಂಡಾ ಅಮೇಜ್
ಬಲ್ಲ ಮೂಲಗಳ ಪ್ರಕಾರ ಹೋಂಡಾ ಅಮೇಜ್ ಪೆಟ್ರೋಲ್ ವೆರಿಯಂಟ್ 6 ಲಕ್ಷ ರು. ಹಾಗೂ ಡೀಸೆಲ್ ವೆರಿಯಂಟ್ 7 ಲಕ್ಷ ರು. ಅಸುಪಾಸಿನಲ್ಲಿರಲಿದೆ.

ಹೋಂಡಾ ಅಮೇಜ್
ಇನ್ನು ಡೀಸೆಲ್ ವೆರಿಯಂಟ್ 100 ಪಿಎಸ್ (200 ಎನ್‌ಎಂ ಟರ್ಕ್ಯೂ) ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಲೀಟರ್‌ಗೆ 25.8 ಲೀಟರ್ ಮೈಲೇಜ್ ನೀಡಲಿದೆ ಎಂಬುದು ಎಲ್ಲರನ್ನು ಅಚ್ಚರಿಗೊಳಿಸಿದೆ.

ಹೋಂಡಾ ಅಮೇಜ್
ಅಮೇಜ್‌ಗೆ ಹೊಂದಿಕೆಯಾಗಬಲ್ಲ ವಿಶೇಷವಾಗಿ ರೂಪಿಸಿದ ಹೊಸ ಎಂಜಿನ್ ರೂಪಿಸಿರುವುದರಿಂದ ಗರಿಷ್ಠ ಇಂಧನ ಕ್ಷಮತೆ ಲಭ್ಯವಾಗಿದೆ.

ಹೋಂಡಾ ಅಮೇಜ್
ಡೈಮೆಷನ್
ಉದ್ದ- 3990 ಎಂಎಂ
ಎತ್ತರ- 1505 ಎಂಎಂ
ಅಗಲ- 1680 ಎಂಎಂ
ವೀಲ್ ಬೇಸ್- 2405 ಎಂಎಂ

ಹೋಂಡಾ ಅಮೇಜ್
ಒಟ್ಟು ಆರು ಕಲರ್ ವೆರಿಯಂಟ್‌ಗಲ್ಲಿ ಹೋಂಡಾ ಅಮೇಜ್ ಲಭ್ಯವಿರುತ್ತದೆ.

ಹೋಂಡಾ ಅಮೇಜ್
ಹೋಂಡಾ ಅಮೇಜ್ ಡೀಸೆಲ್ ವೆರಿಯಂಟ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನಲ್ಲಿ ಮಾತ್ರ ಲಭ್ಯವಿದ್ದು, ಸದ್ಯಕ್ಕೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಳವಡಿಸುವ ಯಾವುದೇ ಯೋಜನೆ ಇಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಹೋಂಡಾ ಅಮೇಜ್
ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಹೋಂಡಾ ಅಮೇಜ್ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭವಗೊಂಡಿದೆ. ಪುಣೆಯ ಕ್ರೈಸ್ಟಲ್ ಹೋಂಡಾದಲ್ಲಿ 10,000 ರು.ಗಳ ಮುಗಂಡ ಪಾವತಿಗೆ ಬುಕ್ಕಿಂಗ್ ಸ್ವೀಕರಿಸಲಾಗುತ್ತಿದೆ.

ಹೋಂಡಾ ಅಮೇಜ್
ಹಾಗೊಂದು ವೇಳೆ ಮಾರುತಿ ಸ್ವಿಫ್ಟ್ ಡಿಜೈರ್‌ಗೆ ಎದುರಾಳಿಯಾಗಿ ಮಾರುಕಟ್ಟೆಗೆ ಸ್ಪರ್ಧಾತ್ಮಕ ದರದಲ್ಲಿ ಬಿಡುಗಡೆಗೊಳಿಸಲು ಸಾಧ್ಯವಾದ್ದಲ್ಲಿ ಖಂಡಿತವಾಗಿಯೂ ಭಾರಿ ಯಶ ಸಾಧಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.


Click it and Unblock the Notifications








