ಮಾರುತಿಯನ್ನೇ ಬೆಚ್ಚಿಬೀಳಿಸಿದ ಹೋಂಡಾ ಅಮೇಜಿಂಗ್ ದರ
ನಿರೀಕ್ಷೆಯಂತೆಯೇ ಬಹುನಿರೀಕ್ಷಿತ ಹೋಂಡಾ ಅಮೇಜ್ ಡೀಸೆಲ್ ಕಾರು ಎಪ್ರಿಲ್ 11ರಂದು ಯುಗಾದಿ ಹಬ್ಬದ ಶುಭ ಸಂಭ್ರಮದಲ್ಲಿ ದೇಶದ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಪ್ರಮುಖವಾಗಿ ದೇಶದ ನಂ.1 ಹಾಗೂ ಅತ್ಯಂತ ಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ರೂಪುಗೊಂಡಿದ್ದ ಹೋಂಡಾ ಅಮೇಜ್ ಸ್ಪರ್ಧಾತ್ಮಕ ದರದಲ್ಲಿ ಮಾರುಕಟ್ಟೆಗಿಳಿಸುವ ಮೂಲಕ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಆಟೋ ಜಗತ್ತು ಕುಸಿದಿರುವ ಈ ಕ್ಲಿಷ್ಟಕರ ಸಂದರ್ಭದಲ್ಲಿ ಹೊಸ ನಿರೀಕ್ಷೆಯಾಗಿ ಆಗಮಿಸಿರುವ ಹೋಂಡಾ ಅಮೇಜ್ ಪೆಟ್ರೋಲ್ ಆವೃತ್ತಿಯ ಪ್ರಾರಂಭಿಕ ದರ ಐದು ಲಕ್ಷ ಹಾಗೂ ಡೀಸೆಲ್ ಆವೃತ್ತಿಯು ಆರು ಲಕ್ಷ ರು.ಗಳಲ್ಲಿ ದಾಖಲಾಗಿರುವುದು ಆಟೋ ವಿಶ್ಲೇಷಕರನ್ನೇ ಆಶ್ಚರ್ಯಚಕಿತಗೊಳಿಸಿದೆ.
ಹೋಂಡಾ ಅಮೇಜ್ ಪೆಟ್ರೋಲ್ ದೆಹಲಿ ಎಕ್ಸ್ ಶೋ ರೂಂ ಆರಂಭಿಕ ದರ: 4.99 ಲಕ್ಷ ರು.
ಹೋಂಡಾ ಅಮೇಜ್ ಡೀಸೆಲ್ ದೆಹಲಿ ಎಕ್ಸ್ ಶೋ ರೂಂ ಆರಂಭಿಕ ದರ: 5.99 ಲಕ್ಷ ರು.
ಇನ್ನು ಕಂಪನಿಯು ಈಗಾಗಲೇ ಪ್ರತಿಪಾದಿಸುತ್ತಿರುವಂತೆಯೇ ಹೋಂಡಾ ಅಮೇಜ್, ದೇಶದ ಅತಿ ಹೆಚ್ಚು ಇಂಧನ ಕ್ಷಮತೆಯುಳ್ಳ ಕಾರಾಗಿದ್ದು, ಪ್ರತಿ ಲೀಟರ್‌ಗೆ 25.8 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದೇ ಕಾರಣಕ್ಕಾಗಿ ಬಿಡುಗಡೆ ಮೊದಲೇ 5000ಕ್ಕೂ ಹೆಚ್ಚು ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹೋಂಡಾ ಅಮೇಜ್ ಜಪಾನ್ ಕಾರು ತಯಾರಕ ಸಂಸ್ಥೆಯಿಂದ ದೇಶಕ್ಕೆ ಪರಿಚಯವಾಗುತ್ತಿರುವ ಮೊದಲ ಡೀಸೆಲ್ ಕಾರಾಗಿದೆ. ಇದರಲ್ಲಿ 1.5 ಐ-ಡಿಟೆಕ್ ಡೀಸೆಲ್ ಹಾಗೂ 1.2 ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಹಾಗಿದ್ದರೆ ಬನ್ನಿ ಹೋಂಡಾ ಅಮೇಜ್ ಕೆಲವು ಕುತೂಹಲಕಾರಿ ಮಾಹಿತಿಯನ್ನು ಫೋಟೊ ಫೀಚರ್ ಮುಖಾಂತರ ಪಡೆದುಕೊಳ್ಳೋಣ...

ಪೆಟ್ರೋಲ್ ವೆರಿಯಂಟ್ ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಇ ಗ್ರೇಡ್- 4.99 ಲಕ್ಷ ರು.
ಇಎಕ್ಸ್ ಗ್ರೇಡ್- 5.24 ಲಕ್ಷ ರು.
ಎಕ್ಸ್ ಗ್ರೇಡ್- 5.62 ಲಕ್ಷ ರು.
ವಿಎಕ್ಸ್ ಗ್ರೇಡ್- 6.60 ಲಕ್ಷ ರು.
ಎಸ್ ಗ್ರೇಡ್ ಆಟೋಮ್ಯಾಟಿಕ್- 6.62 ಲಕ್ಷ ರು.
ವಿಎಕ್ಸ್ ಗ್ರೇಡ್ ಆಟೋಮ್ಯಾಟಿಕ್- 7.50 ಲಕ್ಷ ರು.

ಡೀಸೆಲ್ ವೆರಿಯಂಟ್ ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಇ ಗ್ರೇಡ್- 5.99 ಲಕ್ಷ ರು.
ಇಎಕ್ಸ್ ಗ್ರೇಡ್- 6.24 ಲಕ್ಷ ರು.
ಎಸ್ ಗ್ರೇಡ್- 6.67 ಲಕ್ಷ ರು.
ವಿಎಕ್ಸ್ ಗ್ರೇಡ್- 7.60 ಲಕ್ಷ ರು.

ಹೋಂಡಾ ಅಮೇಜ್ ಡೀಸೆಲ್
ಎಂಜಿನ್ ಕ್ಷಮತೆ- 1.5 ಲೀಟರ್ ಐ-ಡಿಟೆಕ್ (i-DTEC engine)
ಎಂಜಿನ್ ಪವರ್- 100 ಪಿಎಸ್, 200 ಎನ್‌ಎಂ ಟರ್ಕ್ಯೂ
ಮೈಲೇಜ್ (ಪ್ರತಿ ಲೀಟರ್‌ಗೆ)- 25.8 ಕೀ.ಮೀ

ಹೋಂಡಾ ಅಮೇಜ್
ಎಂಜಿನ್: ಪೆಟ್ರೋಲ್- 1198, ಡೀಸೆಲ್- 1498
ಮೈಲೇಜ್ (ಕೀ.ಮೀ): ಪೆಟ್ರೋಲ್- 18, ಡೀಸೆಲ್- 25.8
ದರ ಮಾಹಿತಿ (ಲಕ್ಷ ರು.ಗಳಲ್ಲಿ): 4.99-6.6, ಡೀಸೆಲ್- 5.99-7.6
ಸ್ವಿಫ್ಟ್ ಡಿಜೈರ್ ತಿಳಿದುಕೊಳ್ಳಲು ಮುಂದಿನ ಪುಟ ತಿರುವಿರಿ...

ಮಾರುತಿ ಸ್ವಿಫ್ಟ್ ಡಿಜೈರ್
ಎಂಜಿನ್: ಪೆಟ್ರೋಲ್- 1197, ಡೀಸೆಲ್- 1248
ಮೈಲೇಜ್ (ಕೀ.ಮೀ): ಪೆಟ್ರೋಲ್- 19.1, ಡೀಸೆಲ್- 23.4
ದರ ಮಾಹಿತಿ (ಲಕ್ಷ ರು.ಗಳಲ್ಲಿ): 4.92-6.44, ಡೀಸೆಲ್- 5.99-7.5
ಟೊಯೊಟಾ ಎಟಿಯೋಸ್ ತಿಳಿದುಕೊಳ್ಳಲು ಮುಂದಿನ ಪುಟ ತಿರುವಿರಿ...

ಟೊಯೊಟಾ ಎಟಿಯೋಸ್
ಎಂಜಿನ್: ಪೆಟ್ರೋಲ್- 1496, ಡೀಸೆಲ್- 1364
ಮೈಲೇಜ್ (ಕೀ.ಮೀ): ಪೆಟ್ರೋಲ್- 16.78, ಡೀಸೆಲ್- 23.59
ದರ ಮಾಹಿತಿ (ಲಕ್ಷ ರು.ಗಳಲ್ಲಿ): 5.45-7.08, ಡೀಸೆಲ್- 6.70-8.15

ಹೋಂಡಾ ಅಮೇಜ್
ಪ್ರಮುಖವಾಗಿಯೂ ಭಾರತೀಯ ಕಾರು ಖರೀದಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಹೋಂಡಾ ಅಮೇಜ್ ಸೆಡಾನ್ ಕಾರನ್ನು ತಯಾರಿಸಲಾಗಿದೆ. ಹೋಂಡಾ ಪ್ರಕಾರ ಈಗಾಗಲೇ 5000ಕ್ಕಿಂತಲೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿದ್ದು, ಕಾಯುವಿಕೆ ಅವಧಿ ಎರಡು ತಿಂಗಳಾಗಿರುತ್ತದೆ ಎಂದಿದೆ.

ಹೋಂಡಾ ಅಮೇಜ್
ದೇಶದಲ್ಲಿ ಅತ್ಯಂತ ಹೆಚ್ಚು ಜನಪ್ರಿಯ ಕಂಡಿರುವ ಸ್ವಿಫ್ಟ್ ಡಿಜೈರ್ ಪ್ರತಿ ತಿಂಗಳು 16,000ದಿಂದ 18,000 ಯುನಿಟ್‌ಗಳು ಮಾರಾಟವಾಗುತ್ತಿವೆ. ಹಾಗಿರುವಾಗ ಸ್ಪರ್ಧಾತ್ಮಕ ದರದಲ್ಲಿ ಆಗಮಿಸಿರುವ ಅಮೇಜ್ ಖಂಡಿತವಾಗಿಯೂ ಡಿಜೈರ್ ಲೀಡಿಂಗ್ ಮಾರುಕಟ್ಟೆಗೆ ಧಕ್ಕೆಯನ್ನುಂಟು ಮಾಡುವ ಎಲ್ಲ ಸಾಧ್ಯತೆಗಳು ಎದ್ದು ಕಾಣಿಸುತ್ತಿವೆ.

ಹೋಂಡಾ ಅಮೇಜ್
ದೇಶದ 97 ನಗರಗಳಲ್ಲಿರುವ 150 ರಿಟೈಲ್ ಔಟ್‌ಲೆಟ್‌ಗಳಲ್ಲಿ ಹೋಂಡಾ ಕಾರುಗಳು ಲಭ್ಯವಿದೆ. ಹಾಗೆಯೇ 2013-14 ಅಂತ್ಯದ ವೇಳೆಗೆ ಇದನ್ನು 102 ನಗರಗಳಲ್ಲಾಗಿ 162 ಔಟ್‌ಲೆಟ್‌ಗೆ ವಿಸ್ತರಿಸುವ ಯೋಜನೆ ಹೊಂದಿದೆ.

ಹೋಂಡಾ ಅಮೇಜ್
ಇನ್ನು ಕಾರಿನ ನಿರ್ವಹಣಾ ವೆಚ್ಚ ಕೂಡಾ ಗಮನಿಸಿದರೆ ಹೋಂಡಾ ಅಮೇಜ್ ನಿರ್ವಹಣಾ ವೆಚ್ಚ ಕಡಿಮೆಯಾಗಿರಲಿದೆ. ಇದು ಸಹ ಮಾರುತಿ ಜತೆ ಸ್ಪರ್ಧೆ ಒಡ್ಡಲು ಸಹಕಾರಿಯಾಗಲಿದೆ.

ಹೋಂಡಾ ಅಮೇಜ್
ಇದೀಗ ಹೋಂಡಾ ಅಮೇಜ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

ಹೋಂಡಾ ಅಮೇಜ್

ಹೋಂಡಾ ಅಮೇಜ್
ಫ್ರಂಟ್ ವ್ಯೂ

ಹೋಂಡಾ ಅಮೇಜ್
ರಿಯರ್ ವ್ಯೂ

ಹೋಂಡಾ ಅಮೇಜ್
ರಿಯರ್ ವ್ಯೂ

ಹೋಂಡಾ ಅಮೇಜ್
ರಿಯರ್ ವ್ಯೂ


Click it and Unblock the Notifications








