ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

By Nagaraja

ಜಪಾನ್ ಮೂಲದ ಕಾರು ತಯಾರಕ ಸಂಸ್ಥೆಯಾದ ಹೋಂಡಾ, ಆರು ತಿಂಗಳ ಹಿಂದೆಯಷ್ಟೇ ತನ್ನ ಪ್ರಪ್ರಥಮ ಡೀಸೆಲ್ ಕಾರನ್ನು ಅಮೇಜ್ ರೂಪದಲ್ಲಿ ಭಾರತದ ಮಾರುಕಟ್ಟೆಗಿಳಿಸಿತ್ತು. ಅಂತೆಯೇ ಈ ಅವಧಿಯೊಳಗೆ ನಿರೀಕ್ಷೆಗೂ ಮೀರಿ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಇದೀಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಅಮೇಜ್ ತನ್ನ ಗ್ರಾಹಕರಿಗಾಗಿ ವಿಶೇಷ ಆಕ್ಸೆಸರಿ ಪ್ಯಾಕೇಜ್‌ವೊಂದನ್ನು (Modulo Accessory Pack) ಬಿಡುಗಡೆಗೊಳಿಸಿದೆ.

ನಿಮ್ಮ ಮಾಹಿತಿಗಾಗಿ ಬ್ರಿಯೊ ಹಾಗೂ ಬ್ರಿಯೊ ಅಮೇಜ್ ಮೊಡ್ಯುಲೊ ಆಕ್ಸೆಸರಿ ಪ್ಯಾಕ್ ಈಗಾಗಲೇ ಥೈಲಾಂಡ್‌ ಮಾರಾಟದಲ್ಲಿದೆ. ಅಷ್ಟಕ್ಕೂ ಏನಿದು ಮೊಡ್ಯುಲೊ ಆಕ್ಸೆಸರಿ ಪ್ಯಾಕೇಜ್? ಅದರಲ್ಲಿ ಅಂತದ್ದೇನಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ನೂತನ ಆಕ್ಸೆಸರಿ ಪ್ಯಾಕೇಜ್ ಆಳವಡಿಕೆಯೊಂದಿಗೆ ಕಾರಿನ ಮುಂಭಾಗದ ಛಾಯೆ ಸುಧಾರಣೆಯಾಗಲಿದೆ. ನೂತನ ಕಾರು ಕಪ್ಪು ವರ್ಣದ ಗ್ರಿಲ್ ಜತೆಗೆ ಕ್ರೋಮ್ ಸುತ್ತುವರಿದುಕೊಳ್ಳಲಿದೆ. ಇದು ಟ್ವಿನ್ ಸ್ಲಾಟ್ ಕ್ರೋಮ್ ಗ್ರಿಲನ್ನು ಬದಲಾಯಿಸಲಿದೆ.

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ಇದರ ಜತೆಗೆ ಲಿಪ್ ಸ್ಪಾಯ್ಲರ್, ಸೈಡ್ ಸ್ಕರ್ಟ್, ರಿಯರ್ ಸ್ಕರ್ಟ್, ಬೂಟ್ ಲಿಡ್ ಸ್ಪಾಯ್ಲರ್, ಪರಿಷ್ಕೃತ ಅಲಾಯ್ ವೀಲ್, ಅಲ್ಯೂಮಿನಿಯಂ ಪೆಡಲ್ ಮತ್ತು ಸುವರ್ಣಾಲಂಕೃತ ಫೂಟ್ ವೀಲ್ಸ್ ಪಡೆದುಕೊಳ್ಳಲಿದೆ.

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ಈ ಎಲ್ಲ ಆಕ್ಸೆಸರಿ ಕಿಟ್‌ಗಳು ಹೋಂಡಾ ಅಮೇಜ್‌ಗೆ ಕ್ರೀಡಾತ್ಮಕ ಲುಕ್ ನೀಡುವಲ್ಲಿ ಯಶಸ್ವಿಯಾಗಲಿದೆ. ಇದು ಗ್ರಾಹಕರಲ್ಲಿ ಹೆಚ್ಚು ಕುತೂಹಲಕಾರಿ ಎನಿಸಿಕೊಳ್ಳಲಿದೆ.

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ಹಾಗಿದ್ದರೂ ಇವೆಲ್ಲವೂ ಹೆಚ್ಚುವರಿ ಆಕ್ಸೆಸರಿ ಪ್ಯಾಕೇಜ್ ಆಗಿದ್ದರೂ ಕಾರಿನ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಹೋಂಡಾ ಅಮೇಜ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ಅಂದ ಹಾಗೆ ಹೋಂಡಾ ಅಮೇಜ್ 1.2 ಲೀಟರ್ ಐ-ವಿಟೆಕ್ (i-VTEC) ಪೆಟ್ರೋಲ್ ಮಿಲ್ ಮತ್ತು 1.5 ಲೀಟರ್ ಐ-ಡಿಟೆಕ್ (i-DTEC) ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ಈ ವಿಶೇಷ ಆಕ್ಸೆಸರಿ ಪ್ಯಾಕೇಜ್‌ ಎಷ್ಟು ದುಬಾರಿಯಾಗಲಿದೆ ಎಂಬುದಕ್ಕೆ ನಿಖರ ಮಾಹಿತಿಗಳು ಬಂದಿಲ್ಲ. ಆದರೆ ಬಲ್ಲ ಮೂಲಗಳ ಪ್ರಕಾರ 50ರಿಂದ 60,000 ರು.ಗಳಷ್ಟು ದುಬಾರಿಯಾಗಲಿದೆ.

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ಏತನ್ಮಧ್ಯೆ 2013 ಅಕ್ಟೋಬರ್ ತಿಂಗಳ ಮಾರಾಟದಲ್ಲಿ 11,214 ಯುನಿಟ್ ಮಾರಾಟ ದಾಖಲಿಸಿರುವ ಹೋಂಡಾ ಶೇಕಡಾ 39ರಷ್ಟು ವೃದ್ಧಿ ದರ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ 8,085 ಯುನಿಟ್ ಮಾತ್ರ ಮಾರಾಟವಾಗಿತ್ತು.

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ಇನ್ನು 2013 ಎಪ್ರಿಲ್‌ನಿಂದ ಅಕ್ಟೋಬರ್ ಅವಧಿ ಪರಿಗಣಿಸಿದಾಗ 70,381 ಯುನಿಟ್ ಮಾರಾಟ ಕಂಡಿರುವ ಹೋಂಡಾ, ಶೇಕಡಾ 63ರಷ್ಟು ಏರಿಕೆ ಕಂಡಿದೆ. ಕಳೆದ ಬಾರಿ 43,525 ಯುನಿಟ್ ಮಾತ್ರ ಮಾರಾಟವಾಗಿತ್ತು.

ಹೋಂಡಾ ಅಮೇಜ್ ಆಕರ್ಷಕ ಆಕ್ಸೆಸರಿ ಪ್ಯಾಕೇಜ್ ಜತೆ ಲಭ್ಯ

ಈ ಪೈಕಿ ಕಳೆದ ಐದು ವರೆ ತಿಂಗಳಲ್ಲೇ 37,841ಕ್ಕೂ ಹೆಚ್ಚು ಯಶಸ್ವಿ ಗ್ರಾಹಕರನ್ನು ಗಿಟ್ಟಿಸಿಕೊಳ್ಳುವಲ್ಲಿ ಅಮೇಜ್ ಯಶಸ್ವಿಯಾಗಿದೆ. ಅಲ್ಲದೆ ಅಕ್ಟೋಬರ್ ತಿಂಗಳಲ್ಲಿ ಮಾತ್ರವಾಗಿ 9564 ಯುನಿಟ್ ಮಾರಾಟ ದಾಖಲಿಸಿಕೊಂಡಿದೆ.

More from DriveSpark

Article Published On: Monday, November 4, 2013, 9:55 [IST]
English summary
Japanese automaker Honda has made available Modulo accessories pack for its high selling Amaze compact sedan. Honda already sells Modulo accessories for the Brio and Amaze in South East Asian markets. The package provides the following accessories.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+