ಈ ಕೂಡಲೇ ಖರೀದಿಸಿ; ಹೋಂಡಾ ಕಾರುಗಳ ದರ ಕಡಿತ
ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಹೋಂಡಾ ಕಾರ್ಸ್ ಇಂಡಿಯಾ, ತನ್ನ ರೇಂಜ್ ಕಾರುಗಳಿಗೆ ದರ ಕಡಿತದ ಘೋಷಣೆ ಮಾಡಿದೆ. ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಕೇಂದ್ರ ಸರಕಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಇಳಿಕೆಗೊಳಿಸಲಾಗಿತ್ತು. ಇದರ ಗರಿಷ್ಠ ಪ್ರಯೋಜನವನ್ನು ಗ್ರಾಹಕರಿಗೆ ನೀಡ ಬಯಸುತ್ತಿದ್ದೇವೆ ಎಂದು ಹೋಂಡಾ ಕಾರ್ಸ್ ತಿಳಿಸಿದೆ.
2014 ಆಟೋ ಎಕ್ಸ್ ಪೋ
ಈ ಮೂಲಕ ಫೋಕ್ಸ್‌ವ್ಯಾಗನ್, ನಿಸ್ಸಾನ್, ಹೀರೊ ಮೊಟೊಕಾರ್ಪ್, ಹೋಂಡಾ ಮೋಟಾರುಸೈಕಲ್ ಸಾಲಿಗೆ ಹೋಂಡಾ ಕಾರ್ಸ್ ಸಹ ಸೇರಿಕೊಂಡಿದೆ. ಈ ಎಲ್ಲ ಸಂಸ್ಥೆಗಳು ಈಗಾಗಲೇ ದರ ಕಡಿತವನ್ನು ಘೋಷಿಸಿದೆ. ಅಷ್ಟಕ್ಕೂ ಹೋಂಡಾ ಕಾರುಗಳ ದರಗಳಲ್ಲಿ ಎಷ್ಟು ಇಳಿಕೆಯುಂಟಾಗಿದೆ ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಿಲಿಲ್ಲವೇ? ಇದಕ್ಕಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ.

ಹೌದು, ಅಬಕಾರಿ ಸುಂಕ ಇಳಿಕೆಯೊಂದಿಗೆ ಹೋಂಡಾ ಕಾರುಗಳ ದರ ರು. 14,650 ಗಳಿಂದ 44,741 ರು.ಗಳ ವರೆಗೆ ಕಡಿತವುಂಟಾಗಿದೆ. ಅಷ್ಟೇ ಯಾಕೆ ಜನಪ್ರಿಯ ಹೋಂಡಾ ಅಮೇಜ್ ದರಗಳಲ್ಲಿ 20,000 ರು. ವರೆಗೆ ಇಳಿಕೆಯುಂಟಾಗಿದೆ.

ಹೋಂಡಾ ಬ್ರಿಯೊ (ಎಕ್ಸ್ ಶೋ ರೂಂ ದೆಹಲಿ)
ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆಗಿರುವ ಹೋಂಡಾ ಬ್ರಿಯೊ ದರ 3.99 ಲಕ್ಷ ರು.ಗಳಿಂದ 5.99 ಲಕ್ಷ ರು.ಗಳ ವರೆಗಿರಲಿದೆ.

ಹೋಂಡಾ ಅಮೇಜ್
ದರ ಇಳಿಕೆ ಘೋಷಣೆಯೊಂದಿಗೆ ಹೋಂಡಾ ಅಮೇಜ್ ಪೆಟ್ರೋಲ್ ವೆರಿಯಂಟ್ ದರ 4.99 ಲಕ್ಷ ರು.ಳಿಂದ ಆರಂಭವಾಗಲಿದ್ದು, ಟಾಪ್ ಎಂಡ್ ವೆರಿಯಂಟ್ 7.55 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ. ಹಾಗೆಯೇ ಅಮೇಜ್ ಡೀಸೆಲ್ ದರ 5.97 ಲಕ್ಷ ರು.ಗಳಿಂದ 7.49 ಲಕ್ಷ ರು.ಗಳ ವರೆಗಿರಲಿದೆ.

ಹೋಂಡಾ ಸಿಟಿ
ಪರಿಷ್ಕೃತ ದರದಂತೆ ಹೋಂಡಾ ಸಿಟಿ 7.19 ಲಕ್ಷ ರು.ಗಳಿಂದ 10.80 ಲಕ್ಷ ರು.ಗಳ ವರೆಗಿರಲಿದೆ. ಹಾಗೆಯೇ ಹೋಂಡಾ ಸಿಟಿ ಡೀಸೆಲ್ ಕಾರು 8.37 ಲಕ್ಷ ರು.ಗಳಿಂದ 10.9 ಲಕ್ಷ ರು.ಗಳ ವರೆಗಿರಲಿದೆ.

ಹೋಂಡಾ ಸಿಆರ್-ವಿ
ಅಂತಿಮವಾಗಿ ಹೋಂಡಾ ಸಿಆರ್-ವಿ ಕಾರು 20.25 ಲಕ್ಷ ರು.ಗಳಿಂದ 24.36 ಲಕ್ಷ ರು.ಗಳ ವರೆಗಿನ ದರಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








