ಹ್ಯುಂಡೈ ವರ್ನಾ ಹಿಂದಿಕ್ಕಿದ ಹೋಂಡಾ ಸಿಟಿ ಸೆಗ್ಮೆಂಟ್ ಲೀಡರ್

By Nagaraja

ನಿರೀಕ್ಷೆಯೆಂಬಂತೆ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಹೋಂಡಾ ಸಿಟಿ, ತನ್ನ ಎದುರಾಳಿ ಹ್ಯುಂಡೈ ವರ್ನಾ ಹಿಂದಿಕ್ಕುವ ಮೂಲಕ ಸಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಕಾರೆಂಬ ಗೌರವಕ್ಕೆ ಪಾತ್ರವಾಗಿದೆ.

ಮೈಲೇಜ್ ರಾಜ ಹೋಂಡಾ ಸಿಟಿ ಭೇಟಿಯಾಗಲು ಮರೆಯದಿರಿ

2014 ಹೋಂಡಾ ಸಿಟಿ ಕಾರು ಇತ್ತೀಚೆಗಷ್ಟೇ ಭರ್ಜರಿ ಎಂಟ್ರಿ ಕೊಟ್ಟಿತ್ತು. ಸ್ಟೈಲಿಷ್ ವಿನ್ಯಾಸ ಹಾಗೂ ಗರಿಷ್ಠ ಇಂಧನ ಕ್ಷಮತೆಯು ಹೋಂಡಾ ಸಿಟಿ ಜನಪ್ರಿಯತೆಗೆ ಕಾರಣವಾಗಿತ್ತು. ಜನವರಿ ತಿಂಗಳಲ್ಲಿ ಬಿಡುಗಡೆಯಾಗಿದ್ದ ಹೋಂಡಾ ಸಿಟಿ ಮೊದಲ ತಿಂಗಳಲ್ಲಿ 7,184 ಹಾಗೂ ಫೆಬ್ರವರಿ ತಿಂಗಳಲ್ಲಿ 7,213 ಯುನಿಟ್ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನೊಂದೆಡೆ ಕಳೆದ ವರ್ಷ ಸೆಗ್ಮೆಂಟ್ ಲೀಡರ್ ಆಗಿ ಗುರುತಿಸಿಕೊಂಡಿದ್ದ ಹ್ಯುಂಡೈ ವರ್ನಾ ಅನುಕ್ರಮವಾಗಿ 3,803 ಹಾಗೂ 3,342 ಯುನಿಟ್‌ಗಳಷ್ಟೇ ಮಾರಾಟ ಕಂಡುಕೊಂಡಿತ್ತು.

ನೀವು ಏಕೆ ಹೋಂಡಾ ಸಿಟಿ ಖರೀದಿಸಬೇಕು?

ಇದೇ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಂಡಿರುವ ಫೋಕ್ಸ್‌ವ್ಯಾಗನ್ ವೆಂಟೊ ಹಾಗೂ ಸ್ಕೋಡಾ ರಾಪಿಡ್ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಅನುಕ್ರಮವಾಗಿ 1294, 1191 ಹಾಗೂ 1188, 961 ಯುನಿಟ್ ಮಾತ್ರ ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇಲ್ಲಿ ಕೊಟ್ಟಿರುವ ಅಂಕಿಅಂಶದಲ್ಲಿ ನಿಮ್ಮ ಗಮನಕ್ಕೆ ಬಂದಿರುವಂತೆಯೇ ಇತರೆಲ್ಲ ಕಾರುಗಳ ಮಾರಾಟವನ್ನು ಒಗ್ಗೂಡಿಸಿದರೂ ಹೋಂಡಾ ಸಿಟಿ ಮೀರುವಲ್ಲಿ ವೈಫಲತಯನ್ನು ಕಂಡಿದೆ. ಇದು ಹೋಂಡಾ ಸಿಟಿ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಹ್ಯುಂಡೈ ವರ್ನಾ ಹಿಂದಿಕ್ಕಿದ ಹೋಂಡಾ ಸಿಟಿ 'ಸಿ' ಸೆಗ್ಮೆಂಟ್ ಲೀಡರ್

ಹೋಂಡಾ ಸಿಟಿ ಕಾರಿನಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಪರಿಚಯಿಸಲಾಗಿತ್ತು. ಇದು ಅರ್ಥ್ ಡ್ರೀಮ್ಸ್ 1.5 ಲೀಟರ್ ಐ-ಡಿ-ಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್‌ಗೆ 26 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಹ್ಯುಂಡೈ ವರ್ನಾ ಹಿಂದಿಕ್ಕಿದ ಹೋಂಡಾ ಸಿಟಿ 'ಸಿ' ಸೆಗ್ಮೆಂಟ್ ಲೀಡರ್

ಇಲ್ಲಿ ಕುತೂಹಲಕಾರಿ ಅಂಶವೆಂದರೆ 2014 ಹೋಂಡಾ ಸಿಟಿಯ ಪೆಟ್ರೋಲ್ ಆಟೋಮ್ಯಾಟಿಕ್ ಸಿವಿಟಿ, ಸಿಟಿ ಪೆಟ್ರೋಲ್ ಮ್ಯಾನುವಲ್ 5 ಸ್ಪೀಡ್ ಗೇರ್ ಬಾಕ್ಸ್‌ಗಿಂತಲೂ ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಲಿದೆ

ಹ್ಯುಂಡೈ ವರ್ನಾ ಹಿಂದಿಕ್ಕಿದ ಹೋಂಡಾ ಸಿಟಿ 'ಸಿ' ಸೆಗ್ಮೆಂಟ್ ಲೀಡರ್

ಒಟ್ಟಿನಲ್ಲಿ ದೇಶದ ರಸ್ತೆ ಪರಿಸ್ಥಿತಿಯಲ್ಲಿ ಅತ್ಯಂತ ಇಂಧನ ಕ್ಷಮತೆಯುಳ್ಳ ಕಾರೆಂಬ ಖ್ಯಾತಿಗೆ ಹೋಂಡಾ ಪಾತ್ರವಾಗಿದೆ. ಇದರೊಂದಿಗೆ ಅಮೇಜ್ ಕಾಂಪಾಕ್ಟ್ ಸೆಡಾನ್ ಅದೇ ಹಾದಿಯನ್ನು ಅನುಸರಿಸಿದೆ.

ಹ್ಯುಂಡೈ ವರ್ನಾ ಹಿಂದಿಕ್ಕಿದ ಹೋಂಡಾ ಸಿಟಿ 'ಸಿ' ಸೆಗ್ಮೆಂಟ್ ಲೀಡರ್

ನೂತನ ಹೋಂಡಾ ಸಿಟಿ ಉದ್ದಗಲದಲ್ಲಿ (440 ಎಂಎಂ ಉದ್ದ, 1695 ಎಂಎಂ ಅಗಲ) ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಆಗಿದ್ದರೂ ವೀಲ್ ಬೇಸ್ 50 ಎಂಎಂ (2600 ಎಂಎಂ) ಮತ್ತು ಎತ್ತರ 10 ಎಂಎಂಗಳಷ್ಟು (1495 ಎಂಎಂ) ಹೆಚ್ಚಳಗೊಳಿಸಲಾಗಿದೆ.

ಹ್ಯುಂಡೈ ವರ್ನಾ ಹಿಂದಿಕ್ಕಿದ ಹೋಂಡಾ ಸಿಟಿ 'ಸಿ' ಸೆಗ್ಮೆಂಟ್ ಲೀಡರ್

2014 ಹೋಂಡಾ ಸಿಟಿ ಒಳಭಾಗದಲ್ಲಿ ಉತ್ತಮ ಹೆಡ್ ಹಾಗೂ ಲೆಗ್ ರೂಂ ಕಲ್ಪಿಸಲಾಗಿದೆ. ಇದು ಪ್ರಯಾಣಿಕರಿಗೆ ಆರಾಮದಾಯಕ ಪಯಣ ಖಾತ್ರಿಪಡಿಸಲಿದೆ. ಅಂದರೆ ಈ ಸೆಗ್ಮೆಂಟ್ ಹೆಚ್ಚು ಆರಾದಾಯಕ ಕಾರುಗಳಲ್ಲಿ ಹೋಂಡಾ ಒಂದೆನಿಸಿಕೊಳ್ಳಲಿದೆ. ಕೇವಲ ಹಿಂದುಗಡೆ ಪ್ರಯಾಣಿಕರು ಮಾತ್ರ ಕಾರಿನ ಮುಂಭಾಗ ಸೀಟಿನಲ್ಲಿ ಕುಳಿತುಕೊಳ್ಳುವವರಿಗೂ ಹೆಚ್ಚಿನ ಸ್ಥಳಾವಕಾಶ ಕಲ್ಪಿಸಲಾಗಿದೆ.

ಹ್ಯುಂಡೈ ವರ್ನಾ ಹಿಂದಿಕ್ಕಿದ ಹೋಂಡಾ ಸಿಟಿ 'ಸಿ' ಸೆಗ್ಮೆಂಟ್ ಲೀಡರ್

ದೇಶದಲ್ಲಿ ಅಮೇಜ್ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ಹೋಂಡಾ, ನೂತನ ಸಿಟಿ ಸೆಡಾನ್ ಕಾರನ್ನು ಲಾಂಚ್ ಮಾಡಿದೆ. ಈಗಾಗಲೇ ಅಭೂತಪೂರ್ವ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಅಮೇಜ್ ದೇಶದ ರಸ್ತೆ ಪರಿಸ್ಥಿತಿಗೆ ಅನುಯೋಜ್ಯವಾದ ಕಾರೆನಿಸಿದೆ.

More from DriveSpark

Article Published On: Wednesday, March 12, 2014, 10:44 [IST]
English summary
Honda City has well and truly arrived, gaining back its right place in the ladder. The new Honda City, launched in January has become an instant hit with 7,184 units sold in the first month and 7,213 units in February.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+