ಬೆಸ್ಟ್ ಎಸ್‌ಯುವಿ ಯಾವುದು? ಇಲ್ಲಿದೆ ಟಾಪ್ 10 ಪಟ್ಟಿ
ಅತ್ಯುತ್ತಮ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಯಾವುದು ಎಂದು ತಿಳಿದುಕೊಳ್ಳುವ ಕುತೂಹಲ ನಿಮ್ಮಲಿದೆಯೇ? ಚಿಂತೆ ಬೇಡ, ನಾವಿಂದು ವಿಶ್ವದಲ್ಲಿರುವ ಶ್ರೇಷ್ಠ ಎಸ್‌ಯುವಿ ಕಾರುಗಳನ್ನು ಪರಿಚಯಿಸಲಿದ್ದೇವೆ.
ಎಸ್‌ಯುವಿ ಎಂದಾಕ್ಷಣ ನಮ್ಮ ಮನದಲ್ಲಿ ಮಹೀಂದ್ರ ಕಾರುಗಳು ಓಡಾಡುತ್ತಿರುತ್ತವೆ. ಆದರೆ ಇಂದು ಪರಿಚಯಿಸಲಿರುವ ಕಾರುಗಳ ಪಟ್ಟಿಯಲ್ಲಿ ಮಹೀಂದ್ರ ಸೇರಿಕೊಂಡಿಲ್ಲ. ಬದಲಾಗಿ ವಿಶ್ವಶ್ರೇಷ್ಠ ಟಾಪ್ 10 ಬ್ರಾಂಡ್‌ಗಳನ್ನು ಪರಿಚಯಿಸಲಿದ್ದೇವೆ.
2012ನೇ ಸಾಲಿನಲ್ಲಿ ಮಾರಾಟದ ಆಧಾರದಲ್ಲಿ ಜಾಗತಿಕವಾಗಿ ಅತಿ ಯಶಸ್ಸು ಸಾಧಿಸಿರುವ ಎಸ್‌ಯುವಿ ಕಾರುಗಳ ಟಾಪ್ 10 ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. ಇದರಲ್ಲಿ ಹೋಂಡಾ ಸಿಆರ್-ವಿ ಅಗ್ರಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ ಹೋಂಡಾ ಸಿಆರ್-ವಿ ಪ್ರೀಮಿಯಂ ಎಸ್‌ಯುವಿ ಕಾರು ಭಾರಿ ಹಿನ್ನಡೆ ಅನುಭವಿಸುತ್ತಿರಬಹುದು. ಆದೆರೆ ಜಾಗತಿಕವಾಗಿ ಅಮೋಘ ಮಾರಾಟ ಕಾಯ್ದುಕೊಳ್ಳುವಲ್ಲಿ ಈ ಜಪಾನ್ ಕಾರು ತಯಾರಕ ಸಂಸ್ಥೆ ಯಶಸ್ವಿಯಾಗಿದೆ.
ಅಂದ ಹಾಗೆ ಸದ್ಯದಲ್ಲೇ ಹೋಂಡಾ ಸಿಆರ್-ವಿ ಡೀಸೆಲ್ ವರ್ಷನ್ ಭಾರತದಲ್ಲಿ ಬಿಡುಗಡೆಯಾಗಲಿದೆ. ಇನ್ನು ಸ್ಥಳೀಯವಾಗಿ ಜೋಡಣೆ ಕಾರ್ಯ ಆರಂಭವಾದರೆ ಮತ್ತಷ್ಟು ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗಲಿದೆ. ಹಾಗಿದ್ದರೆ 2012ನೇ ಸಾಲಿನ ಟಾಪ್ 10 ಎಸ್‌ಯುವಿ ಕಾರುಗಳ ಪಟ್ಟಿ ತಿಳಿದುಕೊಳ್ಳುವ ಕುತೂಹಲ ನಿಮ್ಮಲಿದೆಯೇ? ಹಾಗಿದ್ದರೆ ಫೋಟೊ ಫೀಚರ್ ಕ್ಲಿಕ್ಕಿಸಿರಿ...
ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

1. ಹೋಂಡಾ ಸಿಆರ್-ವಿ (Honda CR-V)
635,256 ಯುನಿಟ್ ಮಾರಾಟ

2. ಹ್ಯುಂಡೈ ಐಎಕ್ಸ್35 (Hyundai ix35)
494,453 ಯುನಿಟ್ ಮಾರಾಟ

3. ಫೋಕ್ಸ್‌ವ್ಯಾಗನ್ ಟೈಗೂನ್ (VW Tiguan)
429,013 ಯುನಿಟ್ ಮಾರಾಟ

4. ಟೊಯೊಟಾ ಆರ್‌ಎವಿ4 (Toyota RAV4)
428,514 ಯುನಿಟ್ ಮಾರಾಟ

5. ಫೋರ್ಡ್ ಕುಗಾ/ಎಸ್ಕೇಪ್ (Ford Kuga/Escape)
403,841 ಯುನಿಟ್ ಮಾರಾಟ

6. ಕಿಯಾ ಸ್ಪೋರ್ಟೆಜ್ (Kia Sportage)
387,142 ಯುನಿಟ್ ಮಾರಾಟ

7. ನಿಸ್ಸಾನ್ ಕ್ವಾಶ್‌ಕೈ (Nissan Qashqai)
298,066 ಯುನಿಟ್ ಮಾರಾಟ

8. ಡ್ಯಾಸಿಯಾ/ಡಸ್ಟರ್ (Dacia/Duster)
295,096 ಯುನಿಟ್ ಮಾರಾಟ

9. ಷೆವರ್ಲೆ ಇಕ್ಯೂನೊಕ್ಸ್ (Chevrolet Equinox)
293,152 ಯುನಿಟ್ ಮಾರಾಟ

10. ಹ್ಯುಂಡೈ ಸಾಂಟಾ ಫೆ (Hyundai SantaFe)
237,562 ಯುನಿಟ್ ಮಾರಾಟ


Click it and Unblock the Notifications








