2014 ಹೋಂಡಾ ಜಾಝ್‌ಗೆ ಮ್ಯೂಗೆನ್ ಸ್ಟೈಲಿಷ್ ಪ್ಯಾಕೇಜ್

By Nagaraja

ತವರೂರಾದ ಜಪಾನ್‌ನಲ್ಲಿ ಫಿಟ್ ಎಂದು ಅರಿಯಲ್ಪಡುವ ಹೋಂಡಾ ಜಾಝ್, ಮುಂದಿನ ವರ್ಷದಲ್ಲಿ ಭಾರತದಲ್ಲಿ ರಿ ಲಾಂಚ್ ಆಗಲಿದೆ ಎಂಬುದರ ಬಗ್ಗೆ ನಾವು ಈ ಹಿಂದೆಯೇ ಮಾಹಿತಿಯನ್ನು ಕೊಟ್ಟಿದ್ದೆವು. ಇದಕ್ಕೆ ಪೂರಕವೆಂಬಂತೆ ಇನ್ನೊಂದು ವರದಿ ಸೇರಿಕೊಳ್ಳುತ್ತಿದ್ದು, ಜಪಾನ್‌ನ ಈ ದೈತ್ಯ ಕಂಪನಿ ಜೊತೆ ಕೈಜೋಡಿಸಲಿರುವ ಮ್ಯೂಗೆನ್ ನಿರ್ವಹಣಾ ಸಂಸ್ಥೆಯು ಮತ್ತಷ್ಟು ಶಕ್ತಿಶಾಲಿ ಸ್ಪೋರ್ಟಿಯರ್ ಫಿಟ್ ರಸ್ತೆಗಿಳಿಸಲು ನೆರವಾಗಲಿದೆ.

ಜಪಾನ್ ಮಾರುಕಟ್ಟೆಗೆ ಈಗಾಗಲೇ ಎಂಟ್ರಿ ಕೊಟ್ಟಿರುವ ಹೋಂಡಾ ಫಿಟ್ ಹೆಚ್ಚು ಶಕ್ತಿಶಾಲಿ ನಿರ್ವಹಣಾ ಪ್ಯಾಕೇಜ್ ಜತೆ ಕ್ರೀಡಾ ಹ್ಯಾಚ್ ಬ್ಯಾಕ್ ಲುಕ್ ಪಡೆದುಕೊಳ್ಳಲಿದೆ. ಇದಕ್ಕೆ ಜಪಾನ್ ಮೂಲದ ಮ್ಯೂಗೆನ್ ಪವರ್ ನೆರವು ಮಾಡಲಿದೆ. ಈ ಅಪ್‌ಗ್ರೇಡ್ ಪ್ಯಾಕೇಜ್ ಹೋಂಡಾದ ಆರ್‌ಎಸ್ ಹಾಗೂ ಹೈಬ್ರಿಡ್ ಫಿಟ್ ಮಾದರಿಗಳಿಗೆ ಲಭ್ಯವಿರಲಿದೆ.

ಮ್ಯೂಗೆನ್ ಪವರ್

ಮ್ಯೂಗೆನ್ ಪವರ್

ಫುಲ್ ಏರ್ ಬಂಪರ್ ಹಾಗೂ ಸ್ಪಾಯ್ಲರ್ ಕೆಳಗಡೆ ಸೇರಿದಂತೆ ಎರಡು ವಿಧದ ಏರ್ ವಿಭಜಕಗಳನ್ನು ಮ್ಯೂಗೆನ್ ಒದಗಿಸಲಿದೆ.

ಮ್ಯೂಗೆನ್ ಪ್ಯಾಕೇಜ್

ಮ್ಯೂಗೆನ್ ಪ್ಯಾಕೇಜ್

ಇದರ ಜತೆಗೆ ಫ್ರಂಟ್ ಹಾಗೂ ಸೈಡ್ ಸ್ಪಾಯ್ಲರ್ ಪ್ಯಾಕೇಜ್‌ಗಳನ್ನು ಗ್ರಾಹಕರು ಆಯ್ಕೆಮಾಡಿಕೊಳ್ಳಬಹುದಾಗಿದೆ. ಇದು ಕಾರಿನ ದೇಹ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಸ್ಪಾಯ್ಲರ್

ಸ್ಪಾಯ್ಲರ್

ಹಾಗೆಯೇ ರೂಫ್ ಮೌಂಟೆಡ್ ಸ್ಪಾಯ್ಲರ್ ಹೆಚ್ಚಿನ ಕ್ರೀಡಾತ್ಮಕ ನೋಟವನ್ನು ಪ್ರತಿಪಾದಿಸುತ್ತಿದೆ.

ಇಂಟಿರಿಯರ್

ಇಂಟಿರಿಯರ್

ಇನ್ನು ಇಂಟಿರಿಯರ್ ಭಾಗಗಳಿಗೂ ಹೆಚ್ಚಿನ ಸ್ಪೋರ್ಟಿ ವಿನ್ಯಾಸ ಕಲ್ಪಿಸಿಕೊಡಲಾಗಿದೆ.

ಫ್ಲೋರ್ ಮ್ಯಾಟ್

ಫ್ಲೋರ್ ಮ್ಯಾಟ್

ಅಷ್ಟೇ ಯಾಕೆ ರೇಸಿಂಗ್ ವೇಳೆ ಹೆಚ್ಚು ಹೊಂದಿಕೊಳ್ಳುವ ನಿಟ್ಟಿನಲ್ಲಿ ಸ್ಪೋರ್ಟ್ ಫ್ಲೋರ್ ಮ್ಯಾಟ್ ಕೂಡಾ ಲಗತ್ತಿಸಲಾಗಿದೆ.

ಎಂಡಿ8

ಎಂಡಿ8

ದೊಡ್ಡದಾದ ಅಲಾಯ್ ವೀಲ್ ಹೊರತಾಗಿ ಸ್ಟೈಲಿಷ್ ಪ್ಯಾಕೇಜ್ ಮುಕ್ತಾಯವಾಗುವುದಿಲ್ಲ. ಹಾಗೆಯೇ ಮ್ಯೂಗೆನ್ ಪ್ಯಾಕೇಜ್ ಎಕ್ಸ್‌ಕ್ಲೂಸಿವ್ ಎಂಡಿ8 ವೀಲ್ಸ್‌ನಲ್ಲಿ ಆಗಮನವಾಗಿದ್ದು, ಎರಡು ವಿನ್ಯಾಸಗಳಲ್ಲಿ ಲಭ್ಯವಿರುತ್ತದೆ.

2014 ಹೋಂಡಾ ಜಾಝ್‌ಗೆ ಮ್ಯೂಗೆನ್ ಸ್ಟೈಲಿಷ್ ಪ್ಯಾಕೇಜ್

ಸ್ಪೋರ್ಟ್ಸ್ ಸೈಲನ್ಸರ್, ಸ್ಪೋರ್ಟ್ಸ್ ಸಸ್ಪೆಷನ್, ದೊಡ್ಡದಾದ ಬ್ರೇಕ್ ಪ್ಯಾಕ್, ಏರ್ ಫೀಲ್ಟರ್‌ಗಳಂತಹ ಇತರ ಫೀಚರ್‌ಗಳನ್ನು ಪಡೆದಿದೆ.

More from DriveSpark

Article Published On: Wednesday, September 11, 2013, 9:35 [IST]
English summary
What's more is that Mugen, Honda's performance partner has already announced styling and performance package for the new sporty hatchback.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+