ಭಾರತದತ್ತ ಹೆಜ್ಜೆಯನ್ನಿಟ್ಟ ಹೋಂಡಾ ಜಾಝ್, ಸಿಟಿ ಡೀಸೆಲ್

By Nagaraja

2014 ಹೋಂಡಾ ಜಾಝ್ ಹಾಗೂ ಸಿಟಿ ಡೀಸೆಲ್ ಕಾರುಗಳ ಭಾರತ ಲಾಂಚ್ ದಿನಾಂಕ ಇನ್ನಷ್ಟು ಹತ್ತಿರವಾಗುತ್ತಿದೆ. ಹೌದು, ಜಪಾನ್ ಮೂಲದ ಪ್ರಖ್ಯಾತ ಕಂಪನಿಯಾಗಿರುವ ಹೋಂಡಾ, 2014 ಜಾಝ್ ಕಾರನ್ನು ಭಾರತಕ್ಕೆ ಪರಿಚಯಪಡಿಸುತ್ತಿರುವುದಾಗಿ ದೃಢೀಕರಿಸಿದೆ.

ಈಗಾಗಲೇ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಪ್ರೀಮಿಯಂ ಜಾಝ್, ಈ ಮೂಲಕ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ನಿಮ್ಮ ಮಾಹಿತಿಗಾಗಿ, ಕಳಪೆ ಮಾರಾಟದ ಹಿನ್ನಲೆಯಲ್ಲಿ ಹಿಂದಿನ ಆವೃತ್ತಿಯ ಜಾಝ್ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ಇನ್ನೊಂದೆಡೆ ಬ್ರಿಯೊ ಸಣ್ಣ ಹ್ಯಾಚ್‌ಬ್ಯಾಕ್ ಹಾಗೂ ಅಮೇಜ್ ಕಾಂಪಾಕ್ಟ್ ಸಡಾನ್ ಕಾರುಗಳ ಸಹ 2014ರಲ್ಲಿ ರಿ ಎಂಟ್ರಿ ಕೊಡುವ ಸಾಧ್ಯತೆಯಿದೆ. ಈ ಎಲ್ಲ ಬೆಳವಣಿಗೆಗಳನ್ನು ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸಲು ಹೋಂಡಾಗೆ ನೆರವಾಗಲಿದೆ.

ಭಾರತದತ್ತ ಹೆಜ್ಜೆಯನ್ನಿಟ್ಟ ಹೋಂಡಾ ಜಾಝ್, ಸಿಟಿ ಡೀಸೆಲ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೋಂಡಾ ಕಾರ್ ಇಂಡಿಯಾ ಉಪಾಧ್ಯಕ್ಷ, ಜ್ಞಾನೇಶ್ವರ್ ಸೆನ್, ಕಂಪನಿಯು ಭಾರತಕ್ಕೆ ಜಾಝ್ ಹಾಗೂ ಸಿಟಿ ಕಾರುಗಳನ್ನು ಮುಂದಿನ ವರ್ಷ ಪರಿಚಯಿಸುವುದಾಗಿ ತಿಳಿಸಿದ್ದಾರೆ.

ಭಾರತದತ್ತ ಹೆಜ್ಜೆಯನ್ನಿಟ್ಟ ಹೋಂಡಾ ಜಾಝ್, ಸಿಟಿ ಡೀಸೆಲ್

ನವೆಂಬರ್‌ನಲ್ಲಿ ಜಾಗತಿಕ ಎಂಟ್ರಿ ಪಡೆಯಲಿರುವ 2014 ಸಿಟಿ ಸೆಡಾನ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ ಎಂಬುದನ್ನು ಪ್ರಮುಖ ಅಂಶವಾಗಿದೆ.

ಭಾರತದತ್ತ ಹೆಜ್ಜೆಯನ್ನಿಟ್ಟ ಹೋಂಡಾ ಜಾಝ್, ಸಿಟಿ ಡೀಸೆಲ್

ಇನ್ನೊಂದೆಡೆ 2014 ಹೋಂಡಾ ಜಾಝ್ ಈಗಾಗಲೇ ತವರೂರಾದ ಜಪಾನ್‌ಗೆ ಎಂಟ್ರಿ ಕೊಟ್ಟಿದೆ. ಜಪಾನ್‌ನಲ್ಲಿ ಫಿಟ್ ಎಂಬ ಹೆಸರಿನಿಂದ ಅರಿಯಲ್ಪಡುವ ಜಾಝ್, ನ್ಯೂ ಜನರೇಷನ್ 'ಎಚ್' ವಿನ್ಯಾಸವನ್ನು ಪಡೆದುಕೊಂಡಿದೆ.

ಭಾರತದತ್ತ ಹೆಜ್ಜೆಯನ್ನಿಟ್ಟ ಹೋಂಡಾ ಜಾಝ್, ಸಿಟಿ ಡೀಸೆಲ್

ಹಾಗಿದ್ದರೂ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲಿದೆಯೇ ಎಂಬುದು ಭಾರತೀಯರ ಗ್ರಾಹಕರ ದೃಷ್ಟಿಕೋನದಲ್ಲಿ ಹೆಚ್ಚು ಪ್ರಾಮುಖ್ಯತೆ ಗಿಟ್ಟಿಸಿಕೊಳ್ಳಲಿದೆ.

ಭಾರತದತ್ತ ಹೆಜ್ಜೆಯನ್ನಿಟ್ಟ ಹೋಂಡಾ ಜಾಝ್, ಸಿಟಿ ಡೀಸೆಲ್

ಸಿಟಿ ಡೀಸೆಲ್ ಕಾರಿನ ಎಂಜಿನ್ ವಿಚಾರದಲ್ಲಿ ಯಾವುದೇ ರಾಜಿಗೂ ಹೋಂಡಾ ತಯಾರಾಗುತ್ತಿಲ್ಲ. ಅಂದರೆ ಆಲ್ ನ್ಯೂ ಡೀಸೆಲ್ ಎಂಜಿನ್ ಕಾರನ್ನು ಗ್ರಾಹಕರು ನಿರೀಕ್ಷೆ ಮಾಡಬಹುದಾಗಿದೆ.

ಭಾರತದತ್ತ ಹೆಜ್ಜೆಯನ್ನಿಟ್ಟ ಹೋಂಡಾ ಜಾಝ್, ಸಿಟಿ ಡೀಸೆಲ್

ಏತನ್ಮಧ್ಯೆ ದೇಶದಲ್ಲಿ ಇನ್ನಷ್ಟೇ ಹೈಬ್ರಿಡ್ ಕಾರುಗಳನ್ನು ಪರಿಚಯಿಸುವ ಇರಾದೆ ಹೊಂದಿರುವುದಾಗಿ ಹೋಂಡಾ ತಿಳಿಸಿದೆ. ಈ ನಿಟ್ಟಿನಲ್ಲಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸರಕಾರದ ಜತೆ ಮಾತುಕತೆಯನ್ನು ನಡೆಸುತ್ತಿದೆ.

More from DriveSpark

Article Published On: Wednesday, October 9, 2013, 11:39 [IST]
English summary
Honda Car India senior vice president, sales and marketing, Jnaneswar Sen confirmed that the company will reintroduce the City and Jazz brands in the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+