ಫಿಟ್ ಆಗಿದೆ 'ಜಾಝ್'; ಜಪಾನ್ ಫೇವರಿಟ್ ಭಾರತ ಎಂಟ್ರಿಗೆ ರೆಡಿ

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಜಪಾನ್ ಮಾರುಕಟ್ಟೆ ಪ್ರವೇಶ ಪಡೆದಿದ್ದ 2014 ಹೋಂಡಾ ಫಿಟ್ (ಜಾಝ್) ಈಗಾಗಲೇ ಕಾರು ಪ್ರಿಯರ ಫೇವರಿಟ್ ಎನಿಸಿಕೊಂಡಿದ್ದು, ಅತಿ ಹೆಚ್ಚು ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಸಹಜವಾಗಿಯೇ ಜಾಝ್ ಯಶಸ್ಸು ಭಾರತದಲ್ಲೂ ಪ್ರತಿಬಂಬಿಸುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿ ಗೋಚರಿಸುತ್ತಿದೆ. ಈ ಬಹುನಿರೀಕ್ಷಿತ ಕಾರು ಭಾರತ ಮಾರುಕಟ್ಟೆಯನ್ನು 2014ರ ವರ್ಷಾರಂಭದಲ್ಲಿ ಪ್ರವೇಶಿಸಲಿದೆ.

ಇದೀಗ ವಾಹನೋದ್ಯಮದಿಂದ ಲಭಿಸಿರುವ ಮಾಹಿತಿಯಂತೆ ಹೋಂಡಾ ಫಿಟ್ ಜಪಾನ್‌ನಲ್ಲಿ ಬಿಡುಗಡೆಯಾದ ಮೊದಲ ತಿಂಗಳಲ್ಲಿ ಭರ್ಜರಿ 62,000 ಯುನಿಟ್‌ಗಳ ಬುಕ್ಕಿಂಗ್ ದಾಖಲಿಸಿಕೊಂಡಿದೆ. ಇದು ಜಾಝ್ ಜನಪ್ರಿಯತೆ ಎಷ್ಟರ ಮಟ್ಟಿಗೆ ಪಸರಿಸಿದೆ ಎಂಬುದಕ್ಕೊಂದು ನಿದರ್ಶನ ಮಾತ್ರವಾಗಿದೆ.

ಫಿಟ್ ಆಗಿದೆ 'ಜಾಝ್'; ಜಪಾನ್ ಫೇವರಿಟ್ ಭಾರತ ಎಂಟ್ರಿಗೆ ರೆಡಿ

ವರದಿಗಳ ಪ್ರಕಾರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಅನುಕ್ರಮವಾಗಿ 19,388 ಹಾಗೂ 23,281 ಫಿಟ್ ಯುನಿಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. ಈ ಮೂಲಕ ಟೊಯೊಟಾ ಪ್ರಯಸ್ ಕಾರನ್ನು ಹಿಂದಿಕ್ಕುವಲ್ಲಿ ಜಾಝ್ ಯಶಸ್ವಿಯಾಗಿದೆ.

ಫಿಟ್ ಆಗಿದೆ 'ಜಾಝ್'; ಜಪಾನ್ ಫೇವರಿಟ್ ಭಾರತ ಎಂಟ್ರಿಗೆ ರೆಡಿ

ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ನೂತನ ಜಾಝ್ ಲಭ್ಯವಿರಲಿದೆ. ಇದು ಎಫ್, ಎಲ್ ಹಾಗೂ ಎಸ್ ಎಂದು ಹೆಸರಿಸಿಕೊಳ್ಳಲಿದೆ. ಅಂದರೆ ಎಫ್ 1.3 ಲಿಟರ್ ಐ-ವಿಟೆಕ್, ಎಲ್ 1.5 ಲೀಟರ್ ಐ-ವಿಟೆಕ್ ಮತ್ತು ಜಾಝ್ ಎಸ್ ಹೈಬ್ರಿಡ್ 1.5 ಲೀಟರ್ ಐವಿಟೆಕ್ ಜತೆಗೆ ಎಲೆಕ್ಟ್ರಿಕ್ ಮೋಟಾರ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಈ ಪೈಕಿ ಹೈಬ್ರಿಡ್ ವೆರಿಯಂಟ್‌ಗೆ ಅತಿ ಹೆಚ್ಚು ಬೇಡಿಕೆ ಕಂಡುಬಂದಿದೆ.

ಫಿಟ್ ಆಗಿದೆ 'ಜಾಝ್'; ಜಪಾನ್ ಫೇವರಿಟ್ ಭಾರತ ಎಂಟ್ರಿಗೆ ರೆಡಿ

ಜಾಝ್ ಎಸ್ ಟಾಪ್ ಎಂಡ್ ಹೈಬ್ರಿಡ್ ವೆರಿಯಂಟ್ ಪ್ರತಿ ಲೀಟರ್‌ಗೆ 36.4 ಕೀ.ಮೀ. ಮೈಲೇಜ್ ನೀಡುವಲ್ಲಿ ಸಕ್ಷಮವಾಗಿರಲಿದೆ. ಜಪಾನ್‌ನಲ್ಲಿ ಪರಿಸರ ಸ್ನೇಹಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಹೋಂಡಾ ಜಾಝ್ ಹೈಬ್ರಿಡ್ ಕಾರಿನ ಬುಕ್ಕಿಂಗ್ ಗಣನೀಯ ವರ್ಧಿಸಲು ಕಾರಣವಾಗಿದೆ.

ಫಿಟ್ ಆಗಿದೆ 'ಜಾಝ್'; ಜಪಾನ್ ಫೇವರಿಟ್ ಭಾರತ ಎಂಟ್ರಿಗೆ ರೆಡಿ

ಮುಂದಿನ ವರ್ಷ ಫೆಬ್ರವರಿಯಲ್ಲಿ ನೆಡಯಲಿರುವ ಇಂಡಿಯಾ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿರುವ ಹೋಂಡಾ ಜಾಝ್ ಆ ಬಳಿಕ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಫಿಟ್ ಆಗಿದೆ 'ಜಾಝ್'; ಜಪಾನ್ ಫೇವರಿಟ್ ಭಾರತ ಎಂಟ್ರಿಗೆ ರೆಡಿ

ಹಾಗಿದ್ದರೂ ಭಾರತ ಮಾರುಕಟ್ಟೆಯಲ್ಲಿ ಹೈಬ್ರಿಡ್ ವರ್ಷನ್ ಲಭ್ಯವಿರುವುದಿಲ್ಲ. ಇದರ ಬದಲು ಹೆಚ್ಚು ಆಕರ್ಷಕವಾದ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಆಳವಡಿಸಲಿದೆ.

ಫಿಟ್ ಆಗಿದೆ 'ಜಾಝ್'; ಜಪಾನ್ ಫೇವರಿಟ್ ಭಾರತ ಎಂಟ್ರಿಗೆ ರೆಡಿ

ಅಂದ ಹಾಗೆ ಕಳೆದ ಹಲವಾರು ತಿಂಗಳುಗಳಿಂದ ಆಟೋ ಜಗತ್ತಿನಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಹೋಂಡಾ ಜಾಝ್ ಹ್ಯಾಚ್‌ಬ್ಯಾಕ್ ಕಾರು 5.5 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗುವ ನಿರೀಕ್ಷೆಯಿದೆ.

More from DriveSpark

Article Published On: Wednesday, November 13, 2013, 8:00 [IST]
English summary
The 2014 Honda Jazz, sold as Fit in Japan, has surpassed all expectations held by the car maker in terms of sales in its home market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+