ಸಣ್ಣ ಕಾರು ಸೇರಿದಂತೆ 3 ಹೊಸ ಕಾರುಗಳು ಭಾರತಕ್ಕೆ
ಜಪಾನ್‌ನ ದೈತ್ಯ ಕಾರು ತಯಾರಕ ಸಂಸ್ಥೆಯಾಗಿರುವ ಹೋಂಡಾ, ಇನ್ನೊಂದು ವರ್ಷದೊಳಗೆ ಭಾರತಕ್ಕೆ ಮೂರು ನೂತನ ಕಾರುಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಇದರಲ್ಲಿ ಬಹುನಿರೀಕ್ಷಿತ ಮೊಬಿಲಿಯೊ ಹಾಗೂ ಸಣ್ಣ ಕಾರೊಂದು ಸೇರಿಕೊಂಡಿರಲಿದೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಾಳಿಗಾಗಿ ಭೇಟಿ ಕೊಡುತ್ತಿರಿ
ಪ್ರಸಕ್ತ ಸಾಗುತ್ತಿರುವ ಟೊಕಿಯೊ ಮೋಟಾರ್ ಶೋದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೋಂಡಾ ಮೋಟಾರ್ ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ಯೋಶಿಯುಕಿ ಮಟ್ಸುಮುಟೊ, ತಮ್ಮ ಸಂಸ್ಥೆ ಭಾರತದಲ್ಲಿನ ವಾಹನಗಳನ್ನು ವಿಸ್ತರಿಸಲಿದೆ ಎಂದಿದೆ.

ಜಾಗತಿಕವಾಗಿ ಭಾರತದ ಮಾರುಕಟ್ಟೆಯು ಶಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಈ ನಿಟ್ಟಿನಲ್ಲಿ ದೇಶದತ್ತ ಹೆಚ್ಚಿನ ಗಮನ ಕೇಂದ್ರಿಕರಿಸಲಾಗಿದೆ ಎಂದವರು ಉಲ್ಲೇಖಿಸಿದರು.

ಎಪ್ರಿಲ್ ತಿಂಗಳಲ್ಲಿ ಲಾಂಚ್ ಕಂಡಿದ್ದ ಹೋಂಡಾ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಈ ಮೂಲಕ ಕಳೆದ ವರ್ಷ 2-3 ರಷ್ಟಿದ್ದಮಾರುಕಟ್ಟೆ ಶೇರುಗಳು ಶೇಕಡಾ 4-5ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.

ಮುಂದಿನ ವರ್ಷ ಮೂರು ನೂತನ ಮಾದರಿಗಳನ್ನು ಲಾಂಚ್ ಮಾಡುವ ಯೋಜನೆ ಹೊಂದಲಾಗಿದೆ. ಈ ಮೂಲಕ ವಾರ್ಷಿಕವಾಗಿ 3,00,000 ಯುನಿಟ್‌ಗಳನ್ನು ಮಾರಾಟ ಮಾಡುವ ಇರಾದೆಯನ್ನು ಕಂಪನಿ ಹೊಂದಿದೆ.

ಸಣ್ಣ ಕಾರಿನ ಬಗ್ಗೆ ಪ್ರತಿಯಿಸಿರುವ ಅವರು, ಇದು ಬ್ರಿಯೊ ಅಥವಾ ಜಾಝ್ ಮುಂದಿನ ತಲೆಮಾರಿನ ಕಾರಾಗಿ ಗುರುತಿಸಿಕೊಳ್ಳಲಿದೆ. ಇದು ವಿಶೇಷವಾಗಿ ಭಾರತವನ್ನು ಮಾತ್ರ ಪ್ರತಿನಿಧಿಸಲಿದೆ ಎಂದಿದ್ದಾರೆ.

ನಮ್ಮ ಉತ್ಪನ್ನ ಹಾಗೂ ಸೇವೆಯನ್ನು ಗ್ರಾಹಕರಿಗೆ ಸಂತೃಪ್ತಿ ತರುವುದು ಮೊದಲ ಧ್ಯೇಯವಾಗಿದೆ. ಹಾಗಾಗಿ ಸ್ಮರ್ಧಾತ್ಮಕ ದರಗಳಲ್ಲಿ ಮಾರಾಟ ನಡೆಸುವುದರತ್ತ ಗಮನ ಹರಿಸಬೇಕಾಗಿದೆ ಎಂದಿದ್ದಾರೆ.

ಅದೇ ಹೊತ್ತಿಗೆ ಹೋಂಡಾ ಮೊಬಿಲಿಯೊ ಮಲ್ಟಿ ಪರ್ಪಸ್ ವೆಹಿಕಲ್ ಸಹ ಇನ್ನೊಂದು ವರ್ಷದೊಳಗೆ ಬಿಡುಗಡೆಗೊಳಿಸುವುದಾಗಿ ಹೋಂಡಾ ತಿಳಿಸಿದೆ.


Click it and Unblock the Notifications








