2014 ಹೋಂಡಾ ಜಾಝ್ 36 kmpl ಮೈಲೇಜ್ ನೀಡಲಿದೆಯಂತೆ!

Posted By:

ವಾಹನ ಪ್ರಿಯರು ಕಾತರದಿಂದ ಕಾಯುತ್ತಿರುವ ಇನ್ನೊಂದು ಆಕರ್ಷಕ ಕಾರು ಸದ್ಯದಲ್ಲೇ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಹೌದು, 2014 ಹೋಂಡಾ ಜಾಝ್ ಸದ್ಯದಲ್ಲೇ ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಜಪಾನ್ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಜಪಾನ್‌ನಲ್ಲಿ ಹೋಂಡಾ ಫಿಟ್ ಎಂಬ ಹೆಸರಿನಿಂದ ಅರಿಯಲ್ಪಡುವ ನೂತನ ಜಾಝ್ ಪ್ರತಿ ಲೀಟರ್‌ಗೆ 36 ಕೀ.ಮೀ. ಮೈಲೇಜ್ ನೀಡಲಿದೆಯಂತೆ! ಅಷ್ಟಕ್ಕೂ ಈ ಕಾರಿನಲ್ಲಿರುವ ವೈಶಿಷ್ಟ್ಯಗಳೇನು? ಭಾರತ ಮಾರುಕಟ್ಟೆಗೆ ಯಾವಾ ಅಪ್ಪಳಿಸಲಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ.

ಹೋಂಡಾ ಜಾಝ್ ಬಗ್ಗೆ ಒಂದಿಷ್ಟು...

2001ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಹೋಂಡಾ ಸಬ್ ಕಾಂಪಾಕ್ಟ್ ಕಾರಾದ ಫಿಟ್, ಜಪಾನ್, ಚೀನಾ ಹಾಗೂ ಅಮೆರಿಕ ರಾಷ್ಟ್ರಗಳನ್ನು ಹೊರತುಪಡಿಸಿ ಭಾರತ ಸೇರಿದಂತೆ ಯುರೋಪ್, ಮಧ್ಯ ಪೂರ್ವ, ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಹೋಂಡಾ ಜಾಝ್ ಎಂಬ ಹೆಸರಿನಿಂದ ಅರಿಯಲ್ಪಡುತ್ತದೆ.

ಮೈಲೇಜ್

ಮೈಲೇಜ್

ಜಪಾನ್ ಕಾರು ತಯಾರಕ ಸಂಸ್ಥೆಯಾಗಿರುವ ಹೋಂಡಾ, ಈಗಾಗಲೇ 2014 ಫಿಟ್ (ಜಾಝ್) ಆವೃತ್ತಿಯ ಚಿತ್ರಗಳನ್ನು ಬಿಡುಗಡೆಗೊಳಿಸಿದ್ದು, ಗರಿಷ್ಠ ಪ್ರತಿ ಲೀಟರ್‌ಗೆ 36 ಕೀ.ಮೀ. ನೀಡುವ ಸಾಮರ್ಥ್ಯ ಹೊಂದಿರಲಿದೆ ಎಂದಿದೆ.

ಭಾರತ ಪ್ರವೇಶ

ಭಾರತ ಪ್ರವೇಶ

ಅಂದ ಹಾಗೆ ಈ ಬಹುನಿರೀಕ್ಷಿತ ಕಾರು ಜಪಾನ್ ಮಾರುಕಟ್ಟೆಗೆ ಸೆಪ್ಟೆಂಬರ್ ತಿಂಗಳಲ್ಲಿ ಪ್ರವೇಶಿಸಲಿದೆ. ಹೆಚ್ಚು ವಿಳಂಬವಾಗದೇ ಭಾರತಕ್ಕೂ ಕಾಲಿಡಲಿದ್ದು, ಅಂದರೆ 2014 ಆರಂಭದಲ್ಲಿ ಭಾರತ ಪ್ರವೇಶ ಪಡೆಯುವ ಸಾಧ್ಯತೆಯಿದೆ.

ಎಂಜಿನ್

ಎಂಜಿನ್

2014 ಹೋಂಡಾ ಜಾಝ್‌ನಲ್ಲಿ 1.3 ಲೀಟರ್ ಐವಿಟೆಕ್ (iVTEC), 1.55 ಲೀಟರ್ ಐವಿಟೆಕ್ ಹಾಗೂ 1.5 ಲೀಟರ್ ಹೈಬ್ರಿಡ್ ಎಂಜಿನ್ ಹೊಂದಿರಲಿದೆ.

ಜಾಝ್ ಆರ್‌ಎಸ್ ವರ್ಷನ್

ಜಾಝ್ ಆರ್‌ಎಸ್ ವರ್ಷನ್

ಈ ಎಲ್ಲ ವೆರಿಯಂಟ್‌ಗಳ ಹೊರತಾಗಿ ಜಾಝ್ ಆರ್‌ಎಸ್ ವರ್ಷನ್ ಕೂಡಾ ಆಗಮನವಾಗಲಿದೆ. ಕ್ರೀಡಾ ವರ್ಷನ್ ಆಗಿರುವ ಹೋಂಡಾ ಆರ್‌ಎಸ್, 1.5 ಲೀಟರ್ ಐವಿಟೆಕ್ ಎಂಜಿನ್ ಪಡೆದುಕೊಳ್ಳಲಿದೆ.

ಇಂಡಿಯನ್ ವರ್ಷನ್

ಇಂಡಿಯನ್ ವರ್ಷನ್

ಭಾರತಕ್ಕೆ ಆಗಮಿಸಲಿರುವ 2014 ಹೋಂಡಾ ಜಾಝ್ ಐವಿಟೆಕ್ ಪೆಟ್ರೋಲ್ ಜತೆಗೆ ಅರ್ಥ್ ಡ್ರೀಮ್ಸ್ ಡೀಸೆಲ್ ಎಂಜಿನ್ ಕೂಡಾ ಪಡೆದುಕೊಳ್ಳುವ ಸಾಧ್ಯತೆಯಿದೆ.

ನಿಕಟ ಪ್ರತಿಸ್ಪರ್ಧಿ

ನಿಕಟ ಪ್ರತಿಸ್ಪರ್ಧಿ

ಒಂದು ವೇಳೆ ನಿಗದಿತ ಅವಧಿಯೊಳಗೆ ಹೋಂಡಾ ಜಾಝ್ ಭಾರತ ಎಂಟ್ರಿ ಕೊಟ್ಟಲ್ಲಿ ಅದು ನಿಕಟ ಪ್ರತಿಸ್ಪರ್ಧಿಗಳ ಆವೇಗವನ್ನು ಕಡಿಮೆ ಮಾಡಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ.

ಹೆಚ್ಚಿನ ಸ್ಥಳಾವಕಾಶ

ಹೆಚ್ಚಿನ ಸ್ಥಳಾವಕಾಶ

ಹಳೆಯ ಜಾಝ್‌ಗೆ ಹೋಲಿಸಿದಾಗ ನೂತನ ಜಾಝ್ ಬೂಟ್ ಸ್ಪೇಸ್ (ಲಗ್ಗೇಜ್) 400 ಲೀಟರ್‌ಗೆ ವರ್ಧಿಸಲಾಗಿದೆ. ಇನ್ನು ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲೂ ನೂತನ ಜಾಝ್ ಅನಾವರಣಗೊಳ್ಳುವ ಸಾಧ್ಯತೆಯಿದೆ.

ಅಮೇಜ್ ಬಳಿಕ ಜಾಝ್ ಎಂಟ್ರಿ

ಅಮೇಜ್ ಬಳಿಕ ಜಾಝ್ ಎಂಟ್ರಿ

ಇತ್ತೀಚೆಗಷ್ಟೇ ದೇಶಕ್ಕೆ ಪರಿಚಯಗೊಂಡಿದ್ದ ಹೋಂಡಾ ಅಮೇಜ್ ಭಾರಿ ಸದ್ದು ಮಾಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಆಗಮನವಾಗಲಿರುವ ಹೋಂಡಾ ಜಾಝ್ ವಾಹನ ಪ್ರಿಯರಲ್ಲಿ ಇನ್ನಷ್ಟು ಕ್ರೇಜ್ ಸೃಷ್ಟಿ ಮಾಡಿದೆ.

English summary
In the middle of July, Honda officially announced launching the 2014 Jazz, which is also branded as 2014 Honda Fit in some countries.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark