ಪ್ರಸಕ್ತ ಸಾಲಿನಲ್ಲೇ ಹೋಂಡಾ ಮೊಬಿಲಿಯೊ, ಜಾಝ್ ಲಾಂಚ್
ಸಮಕಾಲೀನ ಮಾರುಕಟ್ಟೆಯಲ್ಲಿ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಜಪಾನ್ ಮೂಲದ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು, ಪ್ರಸಕ್ತ ಸಾಲಿನಲ್ಲೇ ಎರಡು ಅತ್ಯಾಕರ್ಷಕ ಮಾದರಿಗಳನ್ನು ದೇಶಕ್ಕೆ ಪರಿಚಯಸಲಿದೆ.
ಬಲ್ಲ ಮೂಲಗಳ ಪ್ರಕಾರ
ಇನ್ನೇನು ಕೆಲವೇ ತಿಂಗಳುಗಳಲ್ಲಿ ದಿನಗಳಲ್ಲಿ ಬಹುನಿರೀಕ್ಷಿತ ಹೋಂಡಾ ಮೊಬಿಲಿಯೊ ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಲಾಂಚ್ ಆಗಲಿದೆ. ಇದು ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಹಾಗೂ ಇನ್ನಷ್ಟೇ ಲಾಂಚ್ ಆಗಬೇಕಾಗಿರುವ ದಟ್ಸನ್ ಗೊ ಪ್ಲಸ್ ಮಾದರಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಇಲ್ಲಿಗೆ ಹೋಂಡಾ ಕೊಡುಗೆ ನಿಲ್ಲುವುದಿಲ್ಲ. ಹೋಂಡಾ ಮೊಬಿಲಿಯೊವನ್ನು ಜಾಝ್ ಹ್ಯಾಚ್‌ಬ್ಯಾಕ್ ಕಾರು ಹಿಂಬಾಲಿಸಲಿದೆ. ಇದಕ್ಕೂ ಮೊದಲು ಜಾಝ್ ಮುಂದಿನ ವರ್ಷ ಬಿಡುಗಡೆಯಾಗುವ ಬಗ್ಗೆ ಮಾಹಿತಿಯಿತ್ತು.

ಹೋಂಡಾ ಮೊಬಿಲಿಯೊ ನಿರ್ಮಾಣ ಗ್ರೇಟರ್ ನೋಯ್ಡಾದಲ್ಲಿರುವ ಸಂಸ್ಥೆಯ ಘಟಕದಲ್ಲಿ ಜೂನ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಇಲ್ಲಿ ವಾರ್ಷಿಕವಾಗಿ 45,000 ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೋಂಡಾ ಮೊಬಿಲಿಯೊ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಆಗಮನವಾಗುವ ಸಾಧ್ಯತೆಯಿದೆ. ಇನ್ನೊಂದೆಡೆ ಹೋಂಡಾ ಜಾಝ್, ಎಂಪಿವಿ ಆವೃತ್ತಿಯನ್ನು ಹಿಂಬಾಲಿಸಲಿದ್ದು, ಬಹುತೇಕ ಹಬ್ಬದ ಆವೃತ್ತಿ ವೇಳೆ ಮಾರುಕಟ್ಟೆ ಪ್ರವೇಶಿಸಲಿದೆ.

ಅಂದ ಹಾಗೆ ಹೋಂಡಾ ಜಾಝ್ ನಿರ್ಮಾಣ ಕಾರ್ಯವು ಸಂಸ್ಥೆಯ ರಾಜಸ್ತಾನದ ಟಪುಕರ ಘಟಕದಲ್ಲಿ ಸಾಗಲಿದೆ. ಇಲ್ಲಿ ವಾರ್ಷಿಕವಾಗಿ 20,000 ಯುನಿಟ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ಎರಡು ಕಾರುಗಳು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಹಾಗೆಯೇ ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹಾಗೆಯೇ ಡೀಸೆಲ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

ಹೋಂಡಾ ಸಿಟಿಯಲ್ಲಿ ಬಳಕೆಯಾದ ಎಂಜಿನ್ ಮೊಬಿಲಿಯೊದಲ್ಲೂ ಕಂಡುಬರಲಿದ್ದು, ಇನ್ನೊಂದೆಡೆ ಬ್ರಿಯೊ ಹಾಗೂ ಅಮೇಜ್‌ನಲ್ಲಿರುವ ಎಂಜಿನ್ ಜಾಝ್‌ಗೆ ವರ್ಗಾವಣೆಯಾಗಲಿದೆ.


Click it and Unblock the Notifications